October Rule: ಅಕ್ಟೊಬರ್ 1 ರಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು, ಕೇಂದ್ರದ ಆದೇಶ.
ಸೆಪ್ಟೆಂಬರ್ ಅಂತ್ಯದೊಳಗೆ ನೀವು ಈ ಕೆಲಸಗಳನ್ನು ಪೂರ್ಣಗೊಳಿಸಬೇಕಿಗೆ.
New Rule From October 1st: ಪ್ರತಿ ತಿಂಗಳು ಮುಗಿಯುತ್ತಿದ್ದಂತೆ ಹೊಸ ಹೊಸ ನಿಯಮಗಳು (New Rule) ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ಏಪ್ರಿಲ್ ಮತ್ತು ಮೇ ತಿಂಗಳ ಆರಂಭದಿಂದ ಸಾಕಷ್ಟು ನಿಯಮಗಳು ಬದಲಾಗಿವೆ.
ಇದೀಗ ಸೆಪ್ಟೆಂಬರ್ ತಿಂಗಳು ಮುಗಿದು ಅಕ್ಟೊಬರ್ ಆರಂಭಗೊಳ್ಳಲಿದೆ. ಅಕ್ಟೊಬರ್ ತಿಂಗಳ ಆರಂಭದಲ್ಲಿ ಕೂಡ ಅನೇಕ ನಿಯಮಗಳು ಬದಲಾಗಲಿದೆ. ಸೆಪ್ಟೆಂಬರ್ ಅಂತ್ಯದೊಳಗೆ ನೀವು ಈ ಕೆಲಸಗಳನ್ನು ಪೂರ್ಣಗೊಳಿಸಬೇಕಿಗೆ. ಇನ್ನು ಅಕ್ಟೊಬರ್ 1 ರಿಂದ ಎಲ್ಲಾ ನಿಯಮಗಳು ಬದಲಾಗಲಿವೆ.
*ನೋಟು ವಿನಿಮಯಕ್ಕೆ ಕೊನೆಯ ದಿನಾಂಕ
ಸೆಪ್ಟೆಂಬರ್ 30 ರದ್ದಾಗಿರುವ 2,000 ರೂ ಮುಖಬೆಲೆಯ ನೋಟಿನ ಬದಲಾವಣೆ ಅಥವಾ ವಿನಿಮಯಕ್ಕೆ ಕೊನೆಯ ದಿನಾಂಕವಾಗಿದೆ. ಸೆಪ್ಟೆಂಬರ್ 30 ರೋಳಗೆ ನಿಮ್ಮ ಬಳಿ ಇರುವ 2000 ರೂ ಮುಖಬೆಲೆಯ ನೋಟಿನ ಠೇವಣಿ ಅಥವಾ ವಿನಿಮಯ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬಹುದು. ಸೆಪ್ಟೆಂಬರ್ 30 ರ ನಂತರ ನಿಮ್ಮ ಬಳಿ ಇರುವ ಪಿಂಕ್ 2000 ರೂ ನೋಟಿಗೆ ಯಾವುದೇ ಮೌಲ್ಯ ಇರುವುದಿಲ್ಲ.
*ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ನಾಮಿನೇಷನ್ ಡೇಟ್
ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ಗೆ ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಸೆಪ್ಟೆಂಬರ್ 30 ನಾಮಿನೇಷನ್ ಸಲ್ಲಿಕೆಗೆ ಕೊಣೆಯ ದಿನಾಂಕವಾಗಿದೆ.
*SBI ವೀಕೇರ್ FD ಯೋಜನೆ
ಇನ್ನು ಹಿರಿಯ ನಾಗರೀಕರಿಗಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ SBI Wecare FD ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರು 7.5 ರ ಬಡ್ಡಿದರವನ್ನು ಪಡೆಯಬಹುದು. ಇನ್ನು ಸೆಪ್ಟೆಂಬರ್ 30 ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
*ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್
ಪಡಿತರ ಚೀಟಿ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡುವು ಅಗತ್ಯವಾಗಿದೆ. ಸೆಪ್ಟೆಂಬರ್ 30 ರೊಳಗೆ ಈ ಕೆಲಸ ಮಾಡಿಕೊಳ್ಳುವುದು ಉತ್ತಮವಾಗಿದೆ. ಅಂತ್ಯೋದಯ ಯೋಜನೆ, ಆದ್ಯತೆಯ ವಸತಿ ಯೋಜನೆಗಳ ಪ್ರಯೋಜನವನ್ನು ಪಡೆಯಲು ಪಡಿತರ ಚೀಟಿದಾರರು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು. ಆದ್ದರಿಂದ ಕೇಂದ್ರ ಸರ್ಕಾರ ಜನರಿಗೆ ಆಧಾರ್ ಗೆ ಪಡಿತರ ಲಿಂಕ್ ಮಾಡುವಂತೆ ಸೂಚನೆ ನೀಡಿದೆ.
*ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರಿಗೆ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯ ಹೂಡಿಕೆದಾರರು ಆಧಾರ್ ಕಾರ್ಡ್ ಒದಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಖಾತೆದಾರರು ಸೆಪ್ಟೆಂಬರ್ 30 ರ ಒಳಗೆ ಆಧಾರ್ ಹಾಗು ಪ್ಯಾನ್ ಕಾರ್ಡ್ ವಿವರವನ್ನು ನೀಡಬೇಕಾಗುತ್ತದೆ. ಆಧಾರ್ ಕಾರ್ಡ್ ಅನ್ನು ಸಕ್ರಿಯಗೊಳಿಸದಿದ್ದರೆ ನಿಮ್ಮ ಸುಕನ್ಯಾ ಸಮೃದ್ಧಿ (Sukanya Samriddhi) ಯೋಜನೆಯ ಖಾತೆ ಸ್ಥಗಿತಗೊಳ್ಳಲಿದೆ.
*ಉಳಿತಾಯ ಯೋಜನೆಗಳಿಗೆ Aadhar Card
ನೀವು ಉಳಿತಾಯ ಯೋಜನೆಗಳಾದ , Public provident Fund , National Saving Certificate ನಂತಹ ಯಾವುದೇ ಸಣ್ಣಾ ಉಳಿತಾಯ ಯೋಜನೆಗಳನ್ನು ನಿಮ್ಮ Aadhar Card ನ ಜೊತೆ ಲಿಂಕ್ ಮಾಡಬೇಕಿದೆ. ಇನ್ನು ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿದ್ದು, Septembar 30 ರೊಳಗೆ ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ ಅಂಚೆ ಇಲಾಖೆ ನಿಮ್ಮ ಉಳಿತಾಯ ಖಾತೆಯನ್ನು ನಿಷ್ಕ್ರಿಯಗೊಳಿಸುತ್ತದೆ.