SIM Card Rule: ಡಿಸೆಂಬರ್ 1 ರಿಂದ ಸಿಮ್ ಕಾರ್ಡ್ ಖರೀದಿ ಮಾಡುವವರಿಗೆ ಹೊಸ ನಿಯಮ, ಕೇಂದ್ರದ ಆದೇಶ.

ಸಿಮ್ ಕಾರ್ಡ್ ನಿಯಮ ಬದಲಿಸಿದ ಕೇಂದ್ರ ಸರ್ಕಾರ

New SIM Card Rule From December 1: ಸಿಮ್ ಕಾರ್ಡ್ (Sim Cards) ಮಾರಾಟ ಮಾಡುವವರು ಹಾಗು ಖರೀದಿ ಮಾಡುವವರು ಇನ್ನು ಮುಂದೆ ಬಹಳ ಜಾಗ್ರತೆಯಿಂದ ಇರಬೇಕಾಗುತ್ತದೆ. ಯಾಕೆಂದರೆ ಸಿಮ್ ಕಾರ್ಡ್ ಗಳ ವಂಚನೆಯನ್ನು ತಡೆಗಟ್ಟುವ ಸಲುವಾಗಿ, ಸರ್ಕಾರ ಈಗ ಹೊಸ ನಿಯಮವನ್ನು ಜಾರಿಗೆ ತಂದಿದೆ.

ಹೊಸ ನಿಯಮಗಳ ಉಲ್ಲಂಘನೆಯು ದಂಡ ಮತ್ತು ಜೈಲು ಶಿಕ್ಷೆಗೆ ಕಾರಣವಾಗಬಹುದು. ಅಕ್ಟೋಬರ್ 1, 2023 ರಿಂದ ಈ ನಿಯಮಗಳು ಜಾರಿಗೆ ಬರಬೇಕಿತ್ತು. ಆದಾಗ್ಯೂ, ಸರ್ಕಾರವು ಗಡುವನ್ನು ಎರಡು ತಿಂಗಳವರೆಗೆ ವಿಸ್ತರಿಸಿತು. ಇದರ ಪ್ರಕಾರ, ಹೊಸ ನಿಯಮಗಳು ಡಿಸೆಂಬರ್ 1 ರಿಂದ ಜಾರಿಗೆ ಬರಲಿವೆ.

New SIM Card Rule
Image Credit: India TV News

ಸಿಮ್ ಕಾರ್ಡ್ ಖರೀದಿಸುವವರಿಗೆ ಈ ನಿಯಮ ಕಡ್ಡಾಯ

ಸೈಬರ್ ಅಪರಾಧ ಮತ್ತು ವಂಚನೆಯನ್ನು ತಡೆಗಟ್ಟುವ ಉದ್ದೇಶದಿಂದ ಸಿಮ್ ಕಾರ್ಡ್ಗಳಿಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ ಎಂದು ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದೂರಸಂಪರ್ಕ ಇಲಾಖೆ ಹೊರಡಿಸಿದ ಹೊಸ ನಿಯಮಗಳ ಪ್ರಕಾರ,ಸಿಮ್ ಕಾರ್ಡ್ ಖರೀದಿಸುವ ಸಮಯದಲ್ಲಿ ಯಾರೂ ಎರಡು ಸಿಮ್ ಕಾರ್ಡ್ ಗಳನ್ನು ಖರೀದಿಸಲು ಸಾಧ್ಯವಿಲ್ಲ.

ಇದಲ್ಲದೆ, ಸೀಮಿತ ಸಂಖ್ಯೆಯ ಸಿಮ್ ಕಾರ್ಡ್ ಗಳನ್ನು ಒಂದು ಐಡಿಯಲ್ಲಿ ಅಂದರೆ ಒಂದು ಡಾಕ್ಯುಮೆಂಟ್ ನಲ್ಲಿ ಖರೀದಿಸಬಹುದು. ಎಲ್ಲಾ ಸಿಮ್ ಕಾರ್ಡ್ ಮಾರಾಟಗಾರರು ನವೆಂಬರ್ 30 ರೊಳಗೆ ನೋಂದಾಯಿಸಿಕೊಳ್ಳಬೇಕು. ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದರೆ, ಸಂಬಂಧಪಟ್ಟ ವ್ಯಕ್ತಿಗೆ 10 ಲಕ್ಷ ರೂ.ಗಳ ದಂಡವನ್ನು ವಿಧಿಸಬಹುದು ಮತ್ತು ಇದರೊಂದಿಗೆ ಜೈಲು ಶಿಕ್ಷೆಯೂ ಇರಬಹುದು.

New SIM Card Rule From December 1
Image Credit: Karnataka Times

ನಕಲಿ ಸಿಮ್ ಮಾರಾಟಕ್ಕೆ ಶಿಕ್ಷೆ ಖಚಿತ

ಕೆಲವು ನಕಲಿ ಸಿಮ್ ಕಾರ್ಡ್ ಮಾರಾಟದ ಕಾರಣದಿಂದಾಗಿ, ವಂಚನೆಗಳ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಘಟನೆಗಳನ್ನು ತಡೆಗಟ್ಟಲು ಸರ್ಕಾರ ಕ್ರಮ ಕೈಗೊಂಡಿದೆ. ಅಲ್ಲದೆ, ನಕಲಿ ಸಿಮ್ ಕಾರ್ಡ್ ಗಳನ್ನೂ ಮಾರಾಟ ಮಾಡುವ ಅಥವಾ ಖರೀದಿಸುವ ವ್ಯಕ್ತಿಯು ಸಿಕ್ಕಿಬಿದ್ದರೆ, ಅವನು 3 ವರ್ಷಗಳ ಕಾಲ ಜೈಲಿಗೆ ಹೋಗಬೇಕಾಗುತ್ತದೆ. ಅವರ ಪರವಾನಗಿಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ಪ್ರಸ್ತುತ ಭಾರತದಲ್ಲಿ 10 ಲಕ್ಷ ಸಿಮ್ ಮಾರಾಟಗಾರರಿದ್ದಾರೆ. ಇವರೆಲ್ಲರಿಗೂ ಈ ನಿಯಮ ಅನ್ವಯಿಸುತ್ತದೆ.

Leave A Reply

Your email address will not be published.