New TCS Rule: ವಿದೇಶಕ್ಕೆ ಹಣ ಕಳುಹಿಸುವವರಿಗೆ ಇಂದಿನಿಂದ ಹೊಸ ತೆರಿಗೆ ನಿಯಮ, ಕೇಂದ್ರ ಸರ್ಕಾರದ ಆದೇಶ.
ವಿದೇಶಕ್ಕೆ ಹಣ ಕಳುಹಿಸುವುದು ಇನ್ನು ದುಬಾರಿಯಾಗಲಿದೆ, ಇಂದಿನಿಂದ ಈ ನಿಯಮ ಅನ್ವಯವಾಗಲಿದೆ.
New TCS Rule From October 1st: ವಿದೇಶಿ ಪ್ರಯಾಣಕ್ಕೆ ಅನ್ವಯವಾಗುವ TCS ಅನ್ನು ಸರ್ಕಾರವು 20 ಪ್ರತಿಶತಕ್ಕೆ ಹೆಚ್ಚಿಸಿದೆ. ಇದರ ಹೊರೆ ನಿಮ್ಮ ಜೇಬಿನ ಮೇಲೆ ಬೀಳಲಿದೆ.. ಪ್ರಸ್ತುತ, ರಿಸರ್ವ್ ಬ್ಯಾಂಕ್‌ನ ಎಲ್‌ಆರ್‌ಎಸ್ ಅಡಿಯಲ್ಲಿ, ವಿದೇಶಕ್ಕೆ ವರ್ಗಾವಣೆಯಾದ 7 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಮೇಲೆ ಐದು ಶೇಕಡಾ ಟಿಸಿಎಸ್ ವಿಧಿಸಲಾಗುತ್ತದೆ.
ಅಕ್ಟೋಬರ್ 1 ರಿಂದ TCS ದರಗಳು ಶೇಕಡಾ 20 ಆಗಿರುತ್ತದೆ. ಇಲ್ಲಿಯವರೆಗೆ ಕೇವಲ 5 ಶೇಕಡಾ TCS ಅನ್ನು ವಿದೇಶಿ ಪ್ರಯಾಣದಲ್ಲಿ ಪಾವತಿಸಬೇಕಾಗಿತ್ತು ಆದರೆ ಈಗ ದುಬಾರಿಯಾಗಿದ್ದುನೀವು ವಿದೇಶಕ್ಕೆ ಪ್ರಯಾಣಿಸಲು ಯೋಚಿಸುತ್ತಿದ್ದರೆ ಅಥವಾ ಪ್ರವಾಸದಲ್ಲಿದ್ದರೆ ಈ ಸುದ್ದಿ ನಿಮಗೆ ತುಂಬಾ ಉಪಯುಕ್ತವಾಗಿದೆ.
TCS ನಿಯಮದಲ್ಲಿ ಬದಲಾವಣೆ
ಆರ್ಥಿಕ ವರ್ಷದಲ್ಲಿ ರೂ 7 ಲಕ್ಷದ ವರೆಗಿನ ಎಲ್ಆರ್ಎಸ್ ವರ್ಗಾವಣೆಗೆ ಪ್ರಸ್ತುತ ಯಾವುದೇ TCS ವಿಧಿಸಲಾಗುವುದಿಲ್ಲ. ಆದರೆ ಪ್ರಸ್ತುತ ವಿದೇಶಿ ಪ್ರವಾಸದ ಪ್ಯಾಕೇಜ್‌ಗಳಲ್ಲಿ ಮಾಡುವ ವೆಚ್ಚದ ಮೇಲೆ 5 ಪ್ರತಿಶತ ತೆರಿಗೆಯನ್ನು ವಿಧಿಸಲಾಗುತ್ತದೆ.
ಅಕ್ಟೋಬರ್ 1ರಿಂದ ಶೇ.20ಕ್ಕೆ ಏರಿಕೆಯಾಗಲಿದೆ. ಹೆಚ್ಚಿಸಿದ ದರಗಳು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ, ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣಕ್ಕಾಗಿ ತಲಾ 7 ಲಕ್ಷ ರೂ.ಗಿಂತ ಹೆಚ್ಚಿನ ವಾರ್ಷಿಕ ವೆಚ್ಚದ ಮೇಲೆ ಐದು ಶೇಕಡಾ TCS ಮುಂದುವರಿಯುತ್ತದೆ. ಅದರ ನಂತರ ಇಲ್ಲಿಯವರೆಗೆ ಮಾಡಿದ ವೆಚ್ಚವು ಒಂದೂವರೆ ಪಟ್ಟು ಹೆಚ್ಚಾಗುತ್ತದೆ.
ವಿದೇಶಿ ಶಿಕ್ಷಣಕ್ಕಾಗಿ ಸಾಲ ಪಡೆಯುವವರಿಗೆ ಶೇಕಡಾ 0.5 ರ ಕಡಿಮೆ TCS
7 ಲಕ್ಷ ರೂಪಾಯಿಗಳ ಮಿತಿಗಿಂತ ಹೆಚ್ಚಿನ ವಿದೇಶಿ ಶಿಕ್ಷಣಕ್ಕಾಗಿ ಸಾಲ ಪಡೆಯುವವರಿಗೆ ಶೇಕಡಾ 0.5 ರ ಕಡಿಮೆ TCS ದರ ಅನ್ವಯಿಸುತ್ತದೆ. 2023-24ರ ಬಜೆಟ್‌ಗಾಗಿ TCS ದರಗಳನ್ನು ಶೇಕಡಾ 5 ರಿಂದ 20 ರಷ್ಟು ಹೆಚ್ಚಿಸಲಾಗಿದೆ. ಹಣಕಾಸು ಸಚಿವಾಲಯವು ಜೂನ್ 28 ರಂದು ಹೆಚ್ಚಿನ ದರಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿತ್ತು. ಅದು ಈಗ ಜಾರಿಗೆ ಬರಲು ಸಿದ್ಧವಾಗಿದೆ. ಹೆಚ್ಚಿದ ಟಿಸಿಎಸ್ ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ.