Smart Watch: 7 ದಿನ ಬ್ಯಾಟರಿ ಕೆಪ್ಯಾಸಿಟಿ ಜೊತೆಗೆ ಆಕರ್ಷಕ ಹೆಲ್ತ್ ಫೀಚರ್, 999 ರೂಪಾಯಿಗೆ ಖರೀದಿಸಿ ಹೊಸ ಸ್ಮಾರ್ಟ್ ವಾಚ್.
ಬ್ರಾಂಡ್ ಬೋಲ್ಟ್ ಕಂಪನಿಯ ಈ ವಾಚ್ ಅನ್ನು ಬಹಳ ಕಡಿಮೆ ಬೆಲೆಗೆ ಖರೀದಿ ಮಾಡಿ, ಹಾಗು ಈ ವಾಚ್ ಬಹಳ ವೈಶಿಷ್ಟತೆಯನ್ನು ಹೊಂದಿದೆ.
Ninja Fit Smart Watch Price Down: ಇಂದಿನ ಕಾಲದ ಸ್ಮಾರ್ಟ್ ವಾಚ್ ಗಳು ಯಾವುದೇ ಮೊಬೈಲ್ ಗು ಕಡಿಮೆ ಇರುವುದಿಲ್ಲ.ಅಷ್ಟೊಂದು ವಿಶೇಶತೆಯನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಇದೀಗ ಸ್ಮಾರ್ಟ್‌ವಾಚ್‌ಗಳು ಅಧಿಕ ಡಿಮ್ಯಾಂಡ್ ಪಡೆದಿವೆ.
ಅದರಲ್ಲೂ ಫೈರ್‌ಬೋಲ್ಟ್ ಸಂಸ್ಥೆಯು ಭಿನ್ನ ಶ್ರೇಣಿಯ ವಾಚ್ ಸರಣಿ ಮೂಲಕ ಗ್ರಾಹಕರನ್ನ ಸೆಳೆದಿದೆ. ಅಷ್ಟೇ ಅಲ್ಲದೆ ಈ ಬ್ರಾಂಡ್ ಕಂಪನಿ ತನ್ನ ವಾಚ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ನೀಡಿದೆ. ಹಬ್ಬದ ಆಫರ್ ಆಗಿ ಅಮೆಜಾನ್ ಸಂಸ್ಥೆಯು ಕೆಲವು ವಾಚ್ ಡಿವೈಸ್‌ಗಳಿಗೆ ರಿಯಾಯಿತಿ ನೀಡಿದೆ.

ನಿಂಜಾ ಫಿಟ್ ವಾಚ್ ಫೀಚರ್ಸ್
ಫೈರ್‌ಬೋಲ್ಟ್ ಕಂಪನಿಯ ನಿಂಜಾ ಫಿಟ್ ವಾಚ್ ತೆಳುವಾದ ರಚನೆ ಹೊಂದಿದ್ದು, ಸ್ಟೈಲಿಶ್ ಲುಕ್ ಹೊಂದಿದೆ. ನಿಂಜಾ ಫಿಟ್ ವಾಚ್ 1.69 ಇಂಚಿನ ಫುಲ್ ಟಚ್ ಹೆಚ್‌ಡಿ ಡಿಸ್‌ಪ್ಲೇ ಅನ್ನು ಪಡೆದುಕೊಂಡಿದ್ದು, ಸ್ಕ್ರೀನ್ ಆಕರ್ಷಕ ಲುಕ್‌ನಲ್ಲಿದೆ. ಡಿಸ್‌ಪ್ಲೇಯು 240 x 280 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿ ಇದ್ದು, ಈ ಡಿಸ್‌ಪ್ಲೇ ಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 218 ppi ಹೊಂದಿದೆ. ಈ ವಾಚ್ ಹಾರ್ಟ್ ರೇಟ್ ಮಾನಿಟರಿಂಗ್, SpO2 ಮಾನಿಟರ್, ಕ್ಯಾಲೋರಿ ಕೌಂಟ್, ಸ್ಟೆಪ್ ಕೌಂಟ್, ಸ್ಲಿಪ್ ಮಾನಿಟರ್ ನಂತಹ ಕೆಲವು ಅಗತ್ಯ ಸೇವೆ ಹಾಗೂ ಆಯ್ಕೆಗಳ ಕೂಡಾ ಇದು ಪಡೆದಿದೆ.
ನಿಂಜಾ ಫಿಟ್ ವಾಚ್ ಫೇಸ್‌ಗಳಲ್ಲಿ ಅನಿಯಮಿತ ವಾಗಿ ಕಸ್ಟಮೈಸ್ ಹೊಂದಿದ್ದು ಮತ್ತು ಆಪ್ ಮೂಲಕ ಬಹು ವಾಚ್ ಫೇಸ್‌ಗಳು, ಇನ್‌ಬಿಲ್ಟ್ ಸೋಶೀಯಲ್ ಮೀಡಿಯಾ ನೋಟಿಫೀಕೇಶನ್ ಆಯ್ಕೆ ಇದೆ. ಇದರ ಜೊತೆಗೆ ಅಲಾರಾಂ ಕ್ಲಾಕ್, ಸ್ಟಾಪ್‌ವಾಚ್, ಟೈಮರ್ ಹಾಗೂ ರಿಮೈಂಡರ್ ಸೌಲಭ್ಯಗಳು ಇವೆ. ಅಷ್ಟೇ ಅಲ್ಲದೆ ಸುಮಾರು 100 ಕ್ಕೂ ಅಧಿಕ ವಾಚ್‌ಫೇಸ್‌ಗಳ ಆಯ್ಕೆ ಬಳಕೆದಾರರಿಗೆ ಲಭ್ಯವಿದೆ . ಸ್ಮಾರ್ಟ್‌ವಾಚ್ ಮೂಲಕ ಫೋನಿನ ಕ್ಯಾಮೆರಾ, ಮ್ಯೂಸಿಕ್ ಕಂಟ್ರೋಲ್ ಆಯ್ಕೆಗಳು ಕೂಡಾ ಇವೆ. ವಾಕ್, ಡ್ರಿಂಕ್ ವಾಟರ್ ನಂತಹ ರಿಮೈಂಡರ್‌ಗಳ ಆಯ್ಕೆ ಪಡೆದಿದೆ.

ನಿಂಜಾ ಫಿಟ್ ವಾಚ್ ಬ್ಯಾಟರಿ ಪವರ್
ಫೈರ್‌ಬೋಲ್ಟ್ ಕಂಪನಿಯ ಈ ವಾಚ್ ಲಿಥೀಯಂ ಬ್ಯಾಟರಿ ಪಡೆದಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 7 ದಿನಗಳ ವರೆಗೆ ಬ್ಯಾಟರಿ ಬ್ಯಾಕ್‌ಅಪ್ ನೀಡುವ ಸಾಮರ್ಥ್ಯ ಒಳಗೊಂಡಿದೆ. ಇನ್ನು ಸ್ಟ್ಯಾಂಡ್‌ಬೈ ಟೈಮ್ 1.31 ತಿಂಗಳು ಆಗಿದ್ದು, ಇದಲ್ಲದೇ ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕರೆ ಮಾಡುವ ಸೌಲಭ್ಯ ಸಹ ಪಡೆದಿದೆ. ಈ ಸಾಧನವು ಆಂಡ್ರಾಯ್ಡ್ ಮತ್ತು ಐಓಎಸ್ ಗೂ ಸಪೋರ್ಟ್ ಪಡೆದಿದೆ.
ನಿಂಜಾ ಫಿಟ್ ವಾಚ್ ನ ಬೆಲೆ
ಫೈರ್‌ಬೋಲ್ಟ್ ನಿಂಜಾ ಫಿಟ್ ಸ್ಮಾರ್ಟ್‌ವಾಚ್ ಶೇ. 88% ರಷ್ಟು ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಆಫರ್‌ನಲ್ಲಿ ಈ ಸ್ಮಾರ್ಟ್ ವಾಚ್ ಅನ್ನು ಗ್ರಾಹಕರು 999ರೂ. ಗಳ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಹೆಚ್ಚುವರಿ ಕೊಡುಗೆಗಳು ಸಹ ದೊರೆಯುತ್ತವೆ.