Nipah Virus: ರಾಜ್ಯಕ್ಕೆ ಬಂತು ಇನ್ನೊಂದು ಭಯಾನಕ ವೈರಸ್, ಹೈ ಅಲರ್ಟ್ ಘೋಷಿಸಿದ ಆರೋಗ್ಯ ಇಲಾಖೆ.

ರಾಜ್ಯಕ್ಕೆ ಇನ್ನೊಂದು ಮಾರಕ ಸೋಂಕು ಕಾಣಿಸಿಕೊಂಡಿದ್ದು ಅರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

Nipah Virus In Karnataka: ಇತ್ತೀಚಿಗಷ್ಟೇ ಕೊರೊನ ವೈರಸ್ (Corona virus) ನಿಂದ ರಿಲೀಫ್ ಸಿಕ್ಕಿದ್ದು, ಜನಜೀವನ ಸ್ವಲ್ಪ ಮಟ್ಟಿಗೆ ಸುಧಾರಣೆಗೆ ಬಂದಿರುತ್ತದೆ. ಈಗ ಮತ್ತೆ ವೈರಸ್ ಭೀತಿ ಎದುರಾಗಿದ್ದು ಸಾರ್ವಜನಿಕರು ಭಯ ಪಡುವಂತಾಗಿದೆ. ನೆರೆ ರಾಜ್ಯ ಕೇರಳದಲ್ಲಿ ಈಗಾಗಲೇ ನಿಫಾ ವೈರಸ್ (Nipah Virus) ಹೆಚ್ಚುತ್ತಿದ್ದು ಇಬ್ಬರು ಬಲಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಆರೋಗ್ಯ ಇಲಾಖೆ ಕಟ್ಟೆಚ್ಚರ ಘೋಷಿಸಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಚಾಮರಾಜನಗರ, ಕೊಡಗು ಜಿಲ್ಲೆಗಳಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿದ್ದು, ಇದೀಗ ಮೈಸೂರು ಜಿಲ್ಲೆಯಲ್ಲಿಯೂ ನಿಫಾ ಆತಂಕ ಎದುರಾಗಿದೆ.

Nipah Virus In Karnataka
Image Credit: Timesnownews

ವಾಹನಗಳ ತಪಾಸಣೆ
ರಾಜ್ಯಕ್ಕೆ ಪ್ರವೇಶಿಸುವ ಪ್ರಯಾಣಿಕರ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಹೆಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್ ಪೋಸ್ಟ್ ನಲ್ಲಿ ಗಡಿ ಪ್ರವೇಶಿಸುವ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಪ್ರತಿ ವಾಹನದ ವಿವರ ಪಡೆದುಕೊಂಡು ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗುತ್ತಿದೆ.

ಆರೋಗ್ಯ ಇಲಾಖೆಯಿಂದ ಜನ ಜಾಗ್ರತಿ ಕಾರ್ಯಕ್ರಮ 
ನಿಫಾ ವೈರಸ್ ಎಲ್ಲ ಕಡೆ ಹರಡುತ್ತಿದ್ದು ಕನಾರ್ಟಕದಲ್ಲೂ ಇದರ ಭೀತಿ ಹೆಚ್ಚಾಗಿದೆ. ಆ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ತನ್ನ ಸಿಬ್ಬಂದಿಗಳ ಮುಖಾಂತರ ಜನರಲ್ಲಿ ಜಾಗ್ರತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆರಂಭದಲ್ಲಿ ಜಾಗರೂಕರಾಗಿರುವುದರಿಂದ ವೈರಸ್ ಹರಡದಂತೆ ಮಾಡಬಹುದಾಗಿದೆ.

Leave A Reply

Your email address will not be published.