Nissan Cars: 6.5 ಲಕ್ಷಕ್ಕೆ ಆಕರ್ಷಕ SUV ಕಾರ್ ಲಾಂಚ್, ಕೆಲವೇ ದಿನದಲ್ಲಿ ದಾಖಲೆಯ ಬುಕಿಂಗ್.

ಅಗ್ಗದ ಬೆಲೆಯಲ್ಲಿ ಉತ್ತಮ ಕಾರು ಮಾರುಕಟ್ಟೆಗೆ, ಇಂದೇ ಬುಕ್ ಮಾಡಿ.

Nissan Magnite EZ-Shift launch: ಮಾರುಕಟ್ಟೆಯಲ್ಲಿ ಅನೇಕ ಕಂಪನಿಯ ಕಾರುಗಳು ಪರಿಚಯವಿದ್ದು, ಕಾರು ಪ್ರಿಯರು ಕಾರಿನ ಬೆಲೆ, ಲುಕ್ ಹಾಗು ಮೈಲೇಜ್ ಗೆ ಹೆಚ್ಚಿನ ಪ್ರಾಮುಖ್ಯ ನೀಡುವುದು ಸಹಜ. ಹಾಗೆಯೆ ಅಗ್ಗದ ಬೆಲೆಗೆ ಸೂಪರ್ ಕಾರು ಮಾರುಕಟ್ಟೆಗೆ ಬಂದಿದ್ದು ಆ ಕಾರಿನ ಸಂಪೂರ್ಣ ಮಾಹಿತಿ ಇಲ್ಲಿ ಪಡೆಯಿರಿ. ನಿಸ್ಸಾನ್ ಮೋಟಾರ್ (Nissan Motors) ಕಂಪನಿ ಪರಿಚಯಿಸಿದ ಈ ಹೊಸ ಕಾರಿನ ಹೆಸರು ನಿಸ್ಸಾನ್ ಮ್ಯಾಗ್ನೈಟ್ EZ-Shift AMT (NISSAN MAGNITE EZ-Shift AMT). 

Nissan Magnite EZ-Shift launch
Image Credit: Financialexpress

ನಿಸ್ಸಾನ್ ಮ್ಯಾಗ್ನೈಟ್ EZ-Shift AMT ಕಾರಿನ ವಿಶೇಷತೆಗಳು

ನಿಸ್ಸಾನ್ ಮ್ಯಾಗ್ನೈಟ್ EZ-Shift 5-ಸ್ಪೀಡ್ ಆಟೋಮ್ಯಾಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಜ್ಜುಗೊಂಡಿದೆ. ನಿಸ್ಸಾನ್ ಮ್ಯಾಗ್ನೈಟ್ 1.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್ ಅನ್ನು ಮ್ಯಾನುಯಲ್ ಮತ್ತು EZ-Shift ಟ್ರಾನ್ಸ್‌ಮಿಷನ್ ಎರಡಕ್ಕೂ ವರ್ಧಿತ ಇಂಧನ ದಕ್ಷತೆಯನ್ನು ನೀಡಲು ಟ್ಯೂನ್ ಮಾಡಲಾಗಿದೆ. ಮ್ಯಾನುಯಲ್ ರೂಪಾಂತರವು ARAI ಪ್ರಕಾರ 19.35 kmpl ನೀಡಿದ್ರೆ, EZ-Shift 19.70 kmpl ಮೈಲೇಜ್ ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ನಿಸ್ಸಾನ್ ಮ್ಯಾಗ್ನೈಟ್ EZ-Shift AMT ಕಾರಿನ ಎಂಜಿನ್‌ ಸಾಮರ್ಥ್ಯ

ಮ್ಯಾಗ್ನೈಟ್ EZ-Shift ಆಂಟಿ-ಸ್ಟಾಲ್ ಮತ್ತು ಕಿಕ್-ಡೌನ್‌ನಂತಹ ವೈಶಿಷ್ಟ್ಯಗಳನ್ನು ಆಕರ್ಷಕ ಚಾಲನಾ ಅನುಭವಕ್ಕಾಗಿ ನೀಡಲಾಗಿದೆಯಂತೆ. ಇನ್ನು ಇದು ಮಾತ್ರವಲ್ಲದೆ ಮ್ಯಾಗ್ನೈಟ್ EZ-Shift ಅನ್ನು 1.0-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಎಂಜಿನ್‌ನೊಂದಿಗೆ ಸಂಯೋಜಿಸಲಾದ ಟ್ರಾನ್ಸ್‌ಮಿಷನ್ ಆಯ್ಕೆಯಾಗಿಯು ಪರಿಚಯಿಸಲಾಗುವುದು. 1.0-ಲೀಟರ್ ಟರ್ಬೊ ಎಂಜಿನ್‌ನಲ್ಲಿ ಮ್ಯಾನುವಲ್ ಮತ್ತು ಸಿವಿಟಿ ಸೇರಿದಂತೆ ನಾಲ್ಕು ಪವರ್‌ಟ್ರೇನ್ ಆಯ್ಕೆಗಳಿಗೆ ವಿಸ್ತರಿಸಲಾಗುವುದು.

Nissan Magnite EZ-Shift Price
Image Credit: News24online

ಹಲವು ಬಣ್ಣಗಳಲ್ಲಿ ನಿಸ್ಸಾನ್ ಮ್ಯಾಗ್ನೈಟ್ EZ-Shift AMT ಕಾರು ಲಭ್ಯ

ನಿಸ್ಸಾನ್ ಅಪ್ಪರ್ ಮತ್ತು ಟಾಪ್ ಟ್ರಿಮ್ ಮಟ್ಟದಲ್ಲಿ EZ-Shift ರೂಪಾಂತರಗಳಿಗಾಗಿ ಎಲ್ಲಾ ಹೊಸ ಡ್ಯುಯಲ್-ಟೋನ್ ಆಯ್ಕೆಯಾದ ನೀಲಿ ಮತ್ತು ಕಪ್ಪು ಬಣ್ಣವನ್ನು ಪರಿಚಯಿಸುತ್ತಿದೆ. ಜೊತೆಗೆ ಕಪ್ಪು ಡ್ಯುಯಲ್ ಟೋನ್ ರೂಫ್‌ನೊಂದಿಗೆ ಅತ್ಯಾಕರ್ಷಕ ಹೊಸ ವಿವಿಡ್ ಬ್ಲೂ ಬಣ್ಣದೊಂದಿಗೆ ನೀಡಲಾಗುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಮ್ಯಾಗ್ನೈಟ್ KURO ವಿಶೇಷ ಆವೃತ್ತಿಯನ್ನು ಆಯ್ಕೆ ಮಾಡಲು ಬಯಸುವ ಗ್ರಾಹಕರಿಗೆ EZ-Shift ಸಹ ಲಭ್ಯವಾಗುತ್ತದೆ.

ನಿಸ್ಸಾನ್ ಮ್ಯಾಗ್ನೈಟ್ EZ-Shift AMT ಕಾರಿನ ಬೆಲೆ

ನಿಸ್ಸಾನ್ ಮೋಟಾರ್ ಇಂಡಿಯಾ (NMIPL) ಇಂದು ನಿಸ್ಸಾನ್ ಮ್ಯಾಗ್ನೈಟ್ EZ-Shift (ಆಟೋಮ್ಯಾಟೆಡ್ ಮ್ಯಾನುಯಲ್ ಟ್ರಾನ್ಸ್‌ಮಿಷನ್) ಬಿಡುಗಡೆಯಾಗಿದ್ದು, ಮುಂಗಡ ಬುಕಿಂಗ್‌ಗಳನ್ನು ಪ್ರಾರಂಭಿಸಿದೆ. ಈ ಕಾರಿನ ಪರಿಚಯಾತ್ಮಕ ಬೆಲೆ 6,49,900 ರೂ.ಗೆ ಪರಿಚಯಿಸಲಾಗಿದ್ದು, ಈ ಬೆಲೆಯು ನವೆಂಬರ್ 10 ರ ವರೆಗೆ ಮಾನ್ಯವಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.

Leave A Reply

Your email address will not be published.