Nita Ambani: ಅಂಬಾನಿಯನ್ನ ಮದುವೆಯಾಗುವ ಮುಂಚೆ ನೀತಾ ಅಂಬಾನಿ ಸಂಬಳ ಎಷ್ಟಾಗಿತ್ತು..? ಇದಪ್ಪ ಅದೃಷ್ಟ.
ಮದುವೆಗೂ ಮುಂಚಿನ ನೀತಾ ಅಂಬಾನಿಯವರ ಸರಳ ಬದುಕು.
Nita Ambani Job Before Marrying Mukesh Ambani: ನೀತಾ ಅಂಬಾನಿ (NitaAmbani) ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಅವರ ಪತ್ನಿ ಆಗಿದ್ದು, ವಿಶ್ವದ ಅತ್ಯಂತ ಪ್ರಸಿದ್ಧ ಮಹಿಳೆಯರಲ್ಲಿ ಒಬ್ಬರು. ಇವರು ಇಂಟರ್ ನ್ಯಾಷನಲ್ ಒಲಂಪಿಕ್ ಕಮಿಟಿಯ ಸದಸ್ಯರಾಗಿ ಆಯ್ಕೆಯಾದ ಮೊದಲ ಭಾರತೀಯ ಮಹಿಳೆ ಆಗಿದ್ಧಾರೆ.
ಕೋಟ್ಯಾಧಿಪತಿ ಕುಟುಂಬದ ಪ್ರತೀಕವಾಗಿರುವ ಇವರು ಸಾಮಾಜಿಕವಾಗಿಯೂ ತೊಡಗಿಸಿಕೊಂಡಿದ್ದಾರೆ. ಆದರೆ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಅಂಬಾನಿಯನ್ನು ಮದುವೆಯಾಗುವ ಮೊದಲು Nita Ambani ಸರಳ ಜೀವನದ ಬಗ್ಗೆ ಅನೇಕರಿಗೆ ತಿಳಿದಿಲ್ಲ.
ನೀತಾ ಅಂಬಾನಿಯವರ ಆರಂಭಿಕ ಜೀವನ
ನೀತಾ ದಲಾಲ್ ಗುಜರಾತಿನ ಮಧ್ಯಮ ಕುಟುಂಬಕ್ಕೆ ಸೇರಿದವರಾಗಿದ್ದು, ನೀತಾ ದಲಾಲ್ ಅವರ ತಂದೆ ರವೀಂದ್ರಭಾಯಿ ದಲಾಲ್ ಹಾಗು ತಾಯಿ ಪೂರ್ಣಿಮಾ. ನೀತಾ ದಲಾಲ್ ಅವರ ತಂದೆ ರವೀಂದ್ರಭಾಯಿ ದಲಾಲ್ ಆದಿತ್ಯ ಬಿರ್ಲಾ ಗ್ರೂಪ್‌ನಲ್ಲಿ ಹಿರಿಯ ವ್ಯವಸ್ಥಾಪಕರಾಗಿದ್ದರು. Nita Ambani ಅವರು ವಾಣಿಜ್ಯ ಪದವಿ ಪಡೆದಿದ್ದರು.
ಕಲೆಯಲ್ಲಿ ತೀವ್ರ ಆಸಕ್ತಿ ಹೊಂದಿದ್ದ ನೀತಾ ಅಂಬಾನಿ 6ನೇ ವಯಸ್ಸಿನಲ್ಲಿ ಭರತನಾಟ್ಯ ಕಲಿಯಲು ಆರಂಭಿಸಿದರು. 20ನೇ ವಯಸ್ಸಿನವರೆಗೂ ನಿರಂತರವಾಗಿ ತರಬೇತಿ ಪಡೆದು ಭರತನಾಟ್ಯದಲ್ಲಿ ಅಪಾರ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡರು.
ಈ ಮಧ್ಯ, ನೀತಾ ಅವರು ಭರತನಾಟ್ಯವನ್ನು ಸಂಪೂರ್ಣವಾಗಿ ಕಲಿತರು ಮತ್ತು ನೃತ್ಯಗಾರ್ತಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅದರೊಂದಿಗೆ ಚಿಕ್ಕ ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಹಣ ಸಂಪಾದಿಸತೊಡಗಿದಳು. Mukesh Ambani ಅನ್ನು ಮದುವೆಯಾಗುವ ಮೊದಲು ಅವರು ಮುಂಬೈನ ಶಾಲೆಯೊಂದರಲ್ಲಿ ನೃತ್ಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.
ನೀತಾ ಅಂಬಾನಿಯವರ ವೈವಾಹಿಕ ಜೀವನ
ರಿಲಯನ್ಸ್ ಗ್ರೂಪ್‌ನ ಮುಖ್ಯಸ್ಥ Mukesh Ambani 1985 ರಲ್ಲಿ ನೀತಾ ಅಂಬಾನಿ ಅವರನ್ನು ವಿವಾಹವಾದರು. ಅವರಿಗೆ ಮೂವರು ಮಕ್ಕಳಿದ್ದಾರೆ. ಅವರಲ್ಲಿ ಆಕಾಶ್ ಅಂಬಾನಿ ಮತ್ತು ಇಶಾ ಅಂಬಾನಿ ಅವಳಿ ಮಕ್ಕಳು. ಕಿರಿಯ ಮಗನ ಹೆಸರು ಅನಂತ್ ಅಂಬಾನಿ. ಈಗ ಕೋಟ್ಯಾಧಿಪತಿ ಕುಟುಂಬಕ್ಕೆ ಸೇರಿದ್ದರೂ, ಅದಕ್ಕೂ ಮೊದಲು Nita Ambani ಅವರ ಜೀವನವು ಅಷ್ಟೊಂದು ಸಮೃದ್ಧವಾಗಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ.
ಮುಕೇಶ್ ಅಂಬಾನಿಯವರನ್ನು ಮದುವೆಯಾದ ನಂತರ ನೀತಾ ಅಂಬಾನಿ ಅವರು ಒಂದು ವಿನಂತಿ ಮಾಡಿಕೊಂಡಿದ್ದರಂತೆ. ಮದುವೆಯಾದ ನಂತರವೂ ತಾವು ಕೆಲಸ ಮಾಡಲು ಅವಕಾಶ ನೀಡಬೇಕು ಅಂತ ಕೇಳಿಕೊಂಡಿದ್ದರಂತೆ. ಇದಕ್ಕೆ Mukesh Ambani ಕುಟುಂಬವೂ ಸಹ ಸಂತಸದಿಂದ ಒಪ್ಪಿಗೆ ಸೂಚಿಸಿತ್ತು.
ಅದರಂತೆ ಮದುವೆಯ ನಂತರವೂ ಸೈಂಟ್ ಫ್ಲವರ್ ನರ್ಸರಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ ಎಂದು Nita Ambani ಅವರೇ ಹೇಳಿದ್ದರು. ಮಿಲಿಯನೇರ್ ಕುಟುಂಬಕ್ಕೆ ಸೊಸೆಯಾಗಿ ಬಂದರೂ ವೃತ್ತಿ ಮುಂದುವರಿಸುವ ಮೂಲಕ ತಿಂಗಳಿಗೆ 800 ರೂಪಾಯಿ ಸಂಬಳ ಪಡೆದಿದ್ದೆ ಎಂದು ಸಂದರ್ಶನವೊಂದರಲ್ಲಿ ನೀತಾ ಅಂಬಾನಿ ತಿಳಿಸಿದ್ದರು.