Niveditha Gowda: ಲಾಂಗ್ ಫ್ರಾಕ್ ನಲ್ಲಿ ನಿವೇದಿತಾ ಮಿಂಚಿಂಗ್, ಇನ್ಸ್ಟಾಗ್ರಾಮ್ ನಲ್ಲಿ ಫೋಟೋಗಳು ವೈರಲ್.
ಹೊಸ ಡ್ರೆಸ್ಸಿಂಗ್ ನಲ್ಲಿ ನಿವೇದಿತಾ, ಸೂಟ್ ಆಗತಿಲ್ಲ ಎಂದ ಅಭಿಮಾನಿಗಳು
Niveditha Gowda Instagram Post: ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ (Chandan Shetty) ಯವರ ಪತ್ನಿ ನಿವೇದಿತಾ ಗೌಡ (Niveditha Gowda) ಆಗಾಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿರುತ್ತಾರೆ. ಬಾರ್ಬಿಡಾಲ್ ಎಂದು ಪ್ರಖ್ಯಾತಿ ಹೊಂದಿರುವ ಇವರು ಬಿಗ್ ಬಾಸ್ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದು.
ತದನಂತರ ಅನೇಕ ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿದ್ದಾರೆ. ಅವರ ಮಾತು ಹಾಗು ಅವರ ಡ್ರೆಸ್ಸಿಂಗ್ ವಿಚಾರದಲ್ಲಿ ಆಗಾಗ ಸುದ್ದಿಯಾಗುತ್ತಾರೆ. ನಿವೇದಿತಾ ದಿನಕ್ಕೊಂದು ಡ್ರೆಸ್ ಅಲ್ಲಿ ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಇನ್ಸ್ಟಾಗ್ರಾಮ್(Instagram) ನಲ್ಲಿ ಅಧಿಕ ಫಾಲ್ಲೋರ್ಸ್ ಅನ್ನು ಕೂಡ ಹೊಂದಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿಯಾಗಿದ್ದಾರೆ.
ದಿನಕ್ಕೊಂದು ಅವತಾರದಲ್ಲಿ ರೀಲ್ಸ್ ಮಾಡೋ ಇವರು ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು ಸುದ್ದಿ ಆಗೇ ಇರುತ್ತಾರೆ. ಅವರ ಹೆಚ್ಚಿನ ವಿಡಿಯೋ ಗಳಿಗೆ ಒಳ್ಳೆಯ ಕಾಮೆಂಟ್ ಗಿಂತ ಕೆಟ್ಟ ಕಾಮೆಂಟ್ ಹೆಚ್ಚಾಗಿರುತ್ತದೆ. ಯಾರೇ ಎಷ್ಟೇ ಟ್ರೊಲ್ ಮಾಡಿದರು ಇವರು ಮಾತ್ರ ನಗು ನಗುತ ಎಲ್ಲವನ್ನು ಸ್ವೀಕರಿಸುತ್ತಾರೆ . ಅಷ್ಟೇ ಅಲ್ಲದೆ ಟ್ರೆಂಡಿಯಾಗಿ ಎಲ್ಲ ವಿಡಿಯೋಗಳನ್ನೂ share ಮಾಡಿ ಅಭಿಮಾನಿಗಳನ್ನು ರಂಜಿಸುತ್ತಾರೆ. ಪರ ವಿರೋಧಗಳಿಗೆ ತಲೆ ಕೆಡಿಸಿಕೊಳ್ಳದೇ ಆಕ್ಟಿವ್ ಆಗಿರುತ್ತಾರೆ.
ಲಾಂಗ್ ಪ್ರಾಕ್ ಹಾಕಿಕೊಂಡು ಮಿಂಚಿದ ನಿವೇದಿತಾ ಗೌಡ
ಹೆಚ್ಚಾಗಿ ಷಾರ್ಟ್ ಬಟ್ಟೆ ಹಾಕಿ ರೀಲ್ಸ್ ಮಾಡುವ ನಿವೇದಿತಾ ಇತೀಚಿಗೆ ಲಾಂಗ್ ಪ್ರಾಕ್ ಹಾಕಿ ಮಿಂಚಿದ್ದಾರೆ. ಲಾಂಗ್ ಪ್ರಾಕ್ ನಲ್ಲಿ ನಿವೇದಿತಾರನ್ನು ನೋಡಿದ ಅಭಿಮಾನಿಗಳು ನೀವು ಯಾವಾಗಲು ಈ ತರ ಡ್ರೆಸ್ ಹಾಕಿ ತುಂಬ ಚೆನ್ನಾಗಿ ಕಾಣುತ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಹಾಗು ಈ ತರ ಡ್ರೆಸ್ ನಲ್ಲಿ ನೀವು ನಿಜವಾಗಿಯೂ ಬಾರ್ಬಿ ಡಾಲ್ ತರ ಕಾಣುತ್ತೀರಿ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಕೆಲವರು ಡ್ರೆಸ್ ಏನೋ ಚೆನ್ನಾಗಿದೆ ಆದ್ರೆ ಮೇಲಿಂದು ಯಾಕೋ ಸೂಟ್ ಆಗ್ತಾ ಇಲ್ಲ. ಡ್ರೆಸ್ ತುಂಬಾ heavy ಇದ್ದು ನಿವೇದಿತಾ ತುಂಬ ವೀಕ್ ಇರುವುದರಿಂದ ಏನೋ ಒಂತರ, ಅವರ ದೇಹಕ್ಕೆ ಪಿಟ್ ಆಗಿಲ್ಲ ಆದ್ದರಿಂದ ಈ ಡ್ರೆಸ್ ಅಷ್ಟು ಚೆನ್ನಾಗಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ .
ನಿವೇದಿತಾ ಡಾನ್ಸ್ ನೋಡಿ ಅದೇನ್ ಬಾಳು ಅಂತ ಬಾಳುತ್ತೀರ ಎಂದ ನೆಟ್ಟಿಗರು
ಚಂದನ್ ಶೆಟ್ಟಿ ಅನ್ನು ಪ್ರೀತಿಸಿ ಮದುವೆ ಆದ ನಿವೇದಿತಾ ಕನ್ನಡ ಕಿರುತರೆಯ ಮನೋರಂಜನ ಲೋಕದಲ್ಲಿ ಮಿಂಚುತಿದ್ದಾರೆ. ಅದೇನೇ ಇದ್ದರು Instagram Video ದಲ್ಲಿ ಮಿಂಚುತಿರುವುದಂತೂ ನಿಜ. ಆದ್ರೆ ಇತೀಚೆಗಷ್ಟೇ ಹಿಂದಿ ಹಾಡಿಗೆ ಸೊಂಟ ಬಳುಕಿಸಿದ ನಿವೇದಿತಾಳಿಗೆ ಅಭಿಮಾನಿಗಳು ಗರಂ ಆಗಿ ಕಮೆಂಟ್ ಮಾಡಿದ್ದಾರೆ.
View this post on Instagram
ನಿನಗೆ ನಿನ್ನ ಗಂಡನ ಹಾಡು ಹಿಡಿಸುವುದಿಲ್ಲವೇ ಹಿಂದಿ ಹಾಡೇ ಆಗಬೇಕಾ ಎಂದಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಆಗಿರುವ ಹುಡುಗಿ ಹಣೆಯಲ್ಲಿ ಕುಂಕುಮವಿಲ್ಲಾ, ತಾಳಿ ಇಲ್ಲ, ಕಾಲುಂಗುರ ಇಲ್ಲ ನಮ್ಮ ಸಂಸ್ಕ್ರತಿಗೆ ನೀನು ವಿರುದ್ಧ ಎಂದು ಒಬ್ಬ ಅಭಿಮಾನಿ ಅಸಮಾಧಾನ ವ್ಯಕ್ತಪಡಿಸಿದುಂಟು. ಇನ್ನು ಒಬ್ಬ ಅಭಿಮಾನಿ ಅದೇನ್ ಬಾಳು ಅಂತ ಬಾಳುತ್ತೀರ ನೀವೆಲ್ಲ ಎಂದು ಪ್ರಶ್ನಿಸಿದ್ದಾನೆ . ಅದೇನೇ ಇರಲಿ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿವೇದಿತಾ ರೀಲ್ಸ್ ಮಾಡಿಕೊಂಡು ಆರಾಮಾಗಿ ಇದ್ದಾರೆ ಎನ್ನಬಹುದು.