Nokia: 7899 ರೂಪಾಯಿಗೆ 256 GB ಸ್ಟೋರೇಜ್ ಮೊಬೈಲ್ ಲಾಂಚ್ ಮಾಡಿದರೆ ನೋಕಿಯಾ, ಇಂದೇ ಬುಕ್ ಮಾಡಿ.

ಕೈ ಗೆಟಕುವ ಬೆಲೆಯಲ್ಲಿ ನೋಕಿಯಾ ಮೊಬೈಲ್, ಈ ಮೊಬೈಲ್ ಖರೀದಿಸಲು ಮುಗಿಬಿದ್ದ ಜನರು.

Nokia C12 Pro Smartphone: ನೋಕಿಯಾ (Nokia) ಫೋನ್ ಗಳು ಎಂದ ಕೂಡಲೇ ನೆನಪಿಗೆ ಬರುವುದು ಹಳೆಯ ಫೋನ್ ಗಳು . ಮೊಬೈಲ್ ಎಂದರೆ ಹೇಗಿರುತದೆ ಎಂಬುವುದು ಭಾರತೀಯರಿಗೆ ತಿಳಿದ್ದಿದ್ದೇ ನೋಕಿಯಾ ಕಂಪನಿಯಿಂದ. ಭಾರತದಲ್ಲಿ ಅಗ್ಗದ ಫೋನ್ ನಲ್ಲಿ ನೋಕಿಯಾ ಫೋನ್ ಮೊದಲ ಸ್ಥಾನದಲ್ಲಿದೆ. ಅಷ್ಟೇ ಅಲ್ಲದೆ ನೋಕಿಯಾ ಈಗ ಅಗ್ಗದ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಅನ್ನು ಕೂಡ ತನ್ನ ಗ್ರಾಹಕರಿಗೆ ಪರಿಚಯಿಸುತ್ತಿದೆ.

ಇದರ ಜೊತೆಗೆ ಈಗ ಪ್ರಮುಖ ಇ-ಕಾಮರ್ಸ್‌ ಸೈಟ್‌ವೊಂದರಲ್ಲಿ ನೋಕಿಯಾದ ಈ ಜನಪ್ರಿಯ ಫೋನ್‌ಗೆ ಆಫರ್ ನೀಡಲಾಗಿದೆ. ಈ ಮೂಲಕ ಗ್ರಾಹಕರು ತಮಗೆ ಅಗತ್ಯ ಇರುವ ಸ್ಮಾರ್ಟ್‌ಫೋನ್‌ ಅನ್ನು ಖರೀದಿ ಮಾಡಬಹುದು. ಈ ನಡುವೆ ನಿತ್ಯ ಬಳಕೆಗೆ ಸಾಮಾನ್ಯ ಫೋನ್‌ ಬೇಕು ಎಂದವರು ಈ ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ (Nokia C12 Pro Smartphone) ಖರೀದಿ ಮಾಡಬಹುದಾಗಿದೆ.

Nokia C12 Pro Price
Image Credit: News 18

ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ (Nokia C12 Pro Smartphone)  ವಿಶೇಷತೆ  

ನೋಕಿಯಾ C12 ಪ್ರೊ ಸ್ಮಾರ್ಟ್‌ ಫೋನ್ ನ ಡಿಸ್‌ಪ್ಲೇ 6.3 ಇಂಚಿನ ಐಪಿಎಸ್‌ ಎಲ್‌ಸಿಡಿ  ಆಯ್ಕೆ ಪಡೆದುಕೊಂಡಿದ್ದು, ರೆಸಲ್ಯೂಶನ್ ಸಾಮರ್ಥ್ಯ 1600 x 720 ಪಿಕ್ಸೆಲ್‌ ಸ್ಕ್ರೀನ್‌  ಪಡೆದಿದೆ. ಹಾಗು 278 ppi ಪಿಕ್ಸೆಲ್ ಸಾಂದ್ರತೆ ಆಯ್ಕೆ ಇರುವುದರಿಂದ ಈ ಫೋನ್‌ ಬಳಕೆದಾರರು ಅದ್ಭುತವಾದ ಚಿತ್ರಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಇಷ್ಟೇ ಅಲ್ಲದೆ 64GB ಇಂಟರ್‌ ಸ್ಟೋರೇಜ್‌ ಆಯ್ಕೆಯ ಈ ಫೋನ್‌ನಲ್ಲಿ ಎಸ್‌ಡಿ ಕಾರ್ಡ್ ಬಳಕೆ ಮಾಡುವ ಮೂಲಕ 256GB ವರೆಗೆ ವಿಸ್ತರಣೆ ಮಾಡಿಕೊಳ್ಳಬಹುದು.

ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ

ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದ್ದು, ಇದು 3264 x 2448 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ ಚಿತ್ರಗಳನ್ನು ಸೆರೆಹಿಡಿಯುತ್ತದೆ. ಜೊತೆಗೆ ಹೆಚ್ಚಿನ ಡೈನಾಮಿಕ್ ರೇಂಜ್ (HDR) ಶೂಟಿಂಗ್ ಸೆಟ್ಟಿಂಗ್‌ ಆಯ್ಕೆಯನ್ನೂ ಸಹ ಪಡೆದುಕೊಂಡಿದೆ. ಇದರೊಂದಿಗೆ 5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾದಲ್ಲಿ ಈ ಫೋನ್‌ ಕಾಣಿಸಿಕೊಂಡಿದ್ದು, 4000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದೆ.

Nokia C12 Pro Smartphone Price
Image Credit: Business-standard

ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ ನ ಬೆಲೆ

ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ 9,999 ರೂ.ಗಳ ಸಾಮಾನ್ಯ ಬೆಲೆಯಲ್ಲಿ ಫ್ಲಿಪ್‌ಕಾರ್ಟ್‌ನಲ್ಲಿ ಕಾಣಿಸಿಕೊಂಡಿದೆ. ಈ ಫೋನ್ ಗೆ 21% ರಿಯಾಯಿತಿ ನೀಡಲಾಗಿದೆ. ಆದ್ದರಿಂದ ಈ ಮೊಬೈಲ್ ಅನ್ನು ಕೇವಲ 7,899 ರೂ. ಗಳಿಗೆ ಖರೀದಿ ಮಾಡಬಹುದು. ಇಷ್ಟೇ ಅಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೇಲೂ ಭಾರೀ ಆಫರ್ ಇದ್ದು, ಈ ಮೂಲಕ ಹೆಚ್ಚಿನ ಹಣ ಉಳಿತಾಯ ಮಾಡಬಹುದಾಗಿದೆ.

ನೋಕಿಯಾ C12 ಪ್ರೊ ಸ್ಮಾರ್ಟ್‌ಫೋನ್‌ ನ ಆಫರ್ ಕೊಡುಗೆಗಳು

ಈ ಸ್ಮಾರ್ಟ್‌ಫೋನ್‌ ಅನ್ನು ಪಾರ್ಟನರ್‌ಶಿಫ್ ಆಫರ್‌ಗೆ ಸೈನ್ ಅಪ್ ಮಾಡಿ ಫ್ಲಿಪ್‌ಕಾರ್ಟ್‌ ಪೇ ಲೇಟರ್‌ ಮೂಲಕ ಖರೀದಿ ಮಾಡಿದ್ರೆ 20,000 ರೂ. ಮೌಲ್ಯದ ಉಚಿತ ಟೈಮ್ಸ್ ಪ್ರೈಮ್ ಬೆನಿಫಿಟ್‌ಗಳನ್ನು ಪಡೆದುಕೊಳ್ಳಬಹುದು ಈ ಫೋನ್ ಅನ್ನು ನೀವು  ಖರೀದಿ ಮಾಡುವಾಗ Flipkart Axis Bank Card ಬಳಕೆ ಮಾಡಿದರೆ 5% ಕ್ಯಾಶ್‌ಬ್ಯಾಕ್ ಸಿಗಲಿದೆ. ಉಳಿದಂತೆ ಡೆಬಿಟ್ ಕಾರ್ಡ್ EMI ಮೂಲಕ ನೀವು ತಿಂಗಳಿಗೆ 490ರೂ.ಗಳನ್ನು ಪಾವತಿ ಮಾಡಿ ಈ ಫೋನ್‌ ಖರೀದಿ ಮಾಡಬಹುದು.

Leave A Reply

Your email address will not be published.