Nokia: 128 GB ಸ್ಟೋರೇಜ್ ಮತ್ತು 50 MP ಕ್ಯಾಮೆರಾ ಇರುವ ನೋಕಿಯಾ ಮೊಬೈಲ್ ಕೇವಲ 8999 ಕ್ಕೆ, ಇಂದೇ ಬುಕ್ ಮಾಡಿ.
128 GB ಸ್ಟೋರೇಜ್ ಮತ್ತು 50 MP ಕ್ಯಾಮೆರಾ ಇರುವ ನೋಕಿಯಾ ಮೊಬೈಲ್ ಕಡಿಮೆ ಬೆಲೆಗೆ ನೂಕ್ ಮಾಡಿ.
Nokia C32 Smartphone: ನೋಕಿಯಾ ಸ್ಮಾರ್ಟ್‌ಫೋನ್‌ಗಳು (Nokia smartphone) ಇತ್ತೀಚಿನ ದಿನಗಳಲ್ಲಿ ಗ್ರಾಹಕರಿಗೆ ಇಷ್ಟವಾಗುತ್ತಿವೆ ಹಾಗೆ ನೋಕಿಯಾ ಸ್ಮಾರ್ಟ್‌ಫೋನ್‌ಗಳು ಇಂದು ಸ್ಮಾರ್ಟ್‌ಫೋನ್ ಮಾರುಕಟ್ಟೆಯನ್ನು ನಿಧಾನವಾಗಿ ವ್ಯಾಪಿಸಿಕೊಳ್ಳುತ್ತಾ ಬರುತ್ತಿವೆ. ಅದರಂತೆ ನೋಕಿಯಾ ಅಗ್ಗದ ಬೆಲೆಯಲ್ಲಿ ಅತ್ಯುತ್ತಮ ಫೀಚರ್ಸ್ ಆಯ್ಕೆ ಇರುವ ಹೊಸ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಿದ್ದು, ಈ ನಡುವೆ ನೋಕಿಯಾದ ಈ ಅಗ್ಗದ ಫೋನ್ ಇನ್ನೂ ಅಗ್ಗದ ಬೆಲೆಗೆ ಲಭ್ಯ ಇದೆ.
ಇದರ ಭಾಗವಾಗಿಯೇ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ( Amazon Great Indian Festival Sale) ನಲ್ಲಿ ನೋಕಿಯಾ C32 (Nokia C32) ಸ್ಮಾರ್ಟ್‌ಫೋನ್ ಗೆ ರಿಯಾಯಿತಿ ನೀಡಲಾಗಿದೆ. ಈ ಫೋನ್ 128GB ಸ್ಟೋರೇಜ್ ಹಾಗೂ 50mp ಮುಖ್ಯ ಕ್ಯಾಮೆರಾ ಆಯ್ಕೆ ಸೇರಿದಂತೆ ವಿಶೇಷ ಫೀಚರ್ಸ್ ಅನ್ನು ಪಡೆದುಕೊಂಡಿದೆ.

ನೋಕಿಯಾ C32 ಬೆಲೆ ಹಾಗು ರಿಯಾಯಿತಿ ಕೊಡುಗೆ
ನೋಕಿಯಾ C32 ಸ್ಮಾರ್ಟ್‌ಫೋನ್‌ಗೆ 18 % ರಷ್ಟು ರಿಯಾಯಿತಿ ನೀಡಲಾಗಿದೆ. ಇದರಿಂದಾಗಿ ನೀವು ಈಗ ಈ ಫೋನ್ ಅನ್ನು ಕೇವಲ 8,999 ರೂ.ಗಳಿಗೆ ಖರೀದಿ ಮಾಡಬಹುದು. ಅಷ್ಟೇ ಅಲ್ಲದೆ ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಈ ಫೋನ್ ಖರೀದಿಸುವ ಬಳಕೆದಾರರು 899ರೂ. ವರೆಗೆ ತ್ವರಿತ ರಿಯಾಯಿತಿ ಸಹ ಸಿಗಲಿದೆ. ಈ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಮೊಬೈಲ್ ಅನ್ನು ಖರೀದಿ ಮಾಡಬಹುದಾಗಿದೆ.
ನೋಕಿಯಾ C32 ಸ್ಮಾರ್ಟ್‌ಫೋನ್ ನ ವಿಶೇಷತೆಗಳು
ನೋಕಿಯಾ C32 ಸ್ಮಾರ್ಟ್‌ಫೋನ್ 6.5-ಇಂಚಿನ ಎಲ್‌ಸಿಡಿ V-ನಾಚ್ ಡಿಸ್‌ಪ್ಲೇ ಹೊಂದಿದ್ದು, ಇದಲ್ಲದೆ ಈ ಫೋನ್ 1600×720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ, 20:9 ಆಕಾರ ಅನುಪಾತವನ್ನು ಹೊಂದಿದೆ. ಫಿಂಗರ್‌ಫ್ರಿಂಟ್ ಸೆನ್ಸರ್, 4G VoltE, ವೈ-ಫೈ 802.11, ಬ್ಲೂಟೂತ್ ಆವೃತ್ತಿ 5.2, ಜಿಪಿಎಸ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಅನೇಕ ಕನೆಕ್ಟಿವಿಟಿ ಬೆಂಬಲ ಪಡೆದುಕೊಂಡಿದೆ. ಇದು ಚಾರ್ಕೋಲ್, ಬ್ರಾಸಿ ಮಿಂಟ್ ಮತ್ತು ಪಿಂಕ್ ಬಣ್ಣಗಳಲ್ಲಿ ಕಾನಿಸಿಕೊಂಡಿದ್ದು, ಬಜೆಟ್ ಬೆಲೆಯಲ್ಲಿ ಫೋನ್ ಖರೀದಿ ಮಾಡುವವರಿಗೆ ಅತ್ಯುತ್ತಮ ಆಯ್ಕೆ ಆಗಿದೆ.

ನೋಕಿಯಾ C32 ಕ್ಯಾಮೆರಾ ಮಾಹಿತಿ
ನೋಕಿಯಾ C32 ಫೋನ್ 50MP ಪ್ರಾಥಮಿಕ ಕ್ಯಾಮೆರಾ + 2MP ಮ್ಯಾಕ್ರೋ ಕ್ಯಾಮೆರಾ ಸೆನ್ಸರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 8MP ಕ್ಯಾಮೆರಾದೊಂದಿಗೆ ಈ ಫೋನ್ ಪ್ಯಾಕ್ ಆಗಿದೆ. ಇದಿಷ್ಟೇ ಅಲ್ಲದೆ ಎಲ್‌ಇಡಿ ಫ್ಲ್ಯಾಶ್ ಮತ್ತು ಇತರ ಹಲವು ಕ್ಯಾಮೆರಾ ಫೀಚರ್ಸ್ ಅನ್ನು ಈ ಫೋನ್ ಹೊಂದಿದೆ.
ನೋಕಿಯಾ C32 ಉತ್ತಮ ಸಾಮರ್ಥ್ಯದ ಬ್ಯಾಟರಿ ಹೊಂದಿದೆ
ನೋಕಿಯಾ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಪ್ಯಾಕ್ ಆಗಿದ್ದು, ನೋಕಿಯಾ ಫೋನ್ ಬ್ಯಾಟರಿ ಸಾಮರ್ಥ್ಯಕ್ಕೆ ಹೆಸರುವಾಸಿ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ ಎನ್ನಬಹುದು. ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಬಳಕೆದಾರರು 3 ದಿನಗಳ ಬ್ಯಾಕಪ್ ಪಡೆದುಕೊಳ್ಳಬಹುದಾಗಿದೆ ಹಾಗೂ ಈ ನೋಕಿಯಾ ಫೋನ್ 10 ವ್ಯಾಟ್ಸ್ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ.

ನೋಕಿಯಾ C32 ಪ್ರೊಸೆಸರ್ ವಿವರ
ಈ ಫೋನ್ 1.6GHz ಆಕ್ಟಾ-ಕೋರ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಸೌಲಭ್ಯದೊಂದಿಗೆ ಹೊರಬಂದಿದೆ. 4GB RAM + ಹಾಗೂ 3GB ವರ್ಚುವಲ್ RAM ಆಯ್ಕೆಯನ್ನು ಹೊಂದಿದ್ದು, 64GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಕಂಡುಬಂದಿದೆ. ಈ ಫೋನ್‌ನಲ್ಲಿ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಆಯ್ಕೆ ನೀಡಲಾಗಿದೆ.