Bank Holiday: ನವೆಂಬರ್ ನಲ್ಲಿ 15 ದಿನ ಬ್ಯಾಂಕ್ ರಜೆ, ಬ್ಯಾಂಕ್ ರಜಾ ದಿನಗಳ ಪಟ್ಟಿ ಇಲ್ಲಿದೆ.
ನವೆಂಬರ್ ತಿಂಗಳಲ್ಲಿ 15 ದಿನ ಬ್ಯಾಂಕ್ ರಜೆ ಇರುತ್ತದೆ, ಆದರಿಂದ ಬ್ಯಾಂಕ್ ಕೆಲಸಗಳನ್ನು ಬೇಗ ಬೇಗನೆ ಮುಗಿಸಿಕೊಳ್ಳಿ.
November Bank Holiday List: ಅಕ್ಟೋಬರ್ 24 ನಿನ್ನೆ ದಸರಾ ರಜೆ ಮುಗಿದಿದ್ದು, ಈ ತಿಂಗಳಿನಲ್ಲಿ ಇದ್ದ ಹಲವು ರಜೆಗಳು ಮುಗಿದಿದೆ. ಹಾಗೆ ಈ ತಿಂಗಳ ಅಂತ್ಯ ಒಂದು ವಾರದಲ್ಲಿ ಆಗಲಿದ್ದು, ಮುಂದಿನ ನವೆಂಬರ್ ತಿಂಗಳು ಕೂಡ ಅಧಿಕ ದಿನ ಬ್ಯಾಂಕ್ ಗಳು ಮುಚ್ಚಲ್ಪಟ್ಟಿರುತ್ತದೆ.
ನವೆಂಬರ್ 15 ರಿಂದ ಹಬ್ಬಗಳು ಪ್ರಾರಂಭ ಆಗಲಿದ್ದು, ಭಾನುವಾರ , ಶನಿವಾರದ ರಜೆಗಳಲೆಲ್ಲ ಸೇರಿ 15 ದಿನ ಬ್ಯಾಂಕ್ ರಜೆ ಇರುತ್ತದೆ. ಮುಂದಿನ ತಿಂಗಳು ಕೂಡ ಸಾಲು ಸಾಲು ರಜೆ ಗಳಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ನೀವು ಸಹ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಬೇಕಿದ್ದರೆ ರಜಾ ದಿನಗಳ ಪಟ್ಟಿಯನ್ನು ಪರಿಶೀಲಿಸಿ ಆದಷ್ಟು ಬೇಗ ಕೆಲಸಗಳನ್ನು ಮುಗಿಸಿಕೊಳ್ಳಿ.
ನವೆಂಬರ್ ತಿಂಗಳ ಬ್ಯಾಂಕ್ ರಜೆ ದಿನಗಳ ಪಟ್ಟಿ ನವೆಂಬರ್ 1, 2023, ಬುಧವಾರ: ಕನ್ನಡ ರಾಜ್ಯೋತ್ಸವ / ಕುಟ್ / ಕರ್ವಾ ಚೌತ್
10 ನವೆಂಬರ್ 2023, ಶುಕ್ರವಾರ: ವಂಗಲಾ ಉತ್ಸವ
13 ನವೆಂಬರ್ 2023, ಸೋಮವಾರ: ಗೋವರ್ಧನ್ ಪೂಜಾ / ಲಕ್ಷ್ಮಿ ಪೂಜಾ (ದೀಪಾವಳಿ) / ದೀಪಾವಳಿ
14 ನವೆಂಬರ್ 2023, ಮಂಗಳವಾರ: ದೀಪಾವಳಿ, ಲಕ್ಷ್ಮಿ ಪೂಜೆ
15 ನವೆಂಬರ್ 2023 ಬುಧವಾರ, : ಭಾಯಿ ದೂಜ್ / ಚಿತ್ರಗುಪ್ತ ಜಯಂತಿ / ಲಕ್ಷ್ಮಿ ಪೂಜೆ (ದೀಪಾವಳಿ) / ನಿಂಗೋಲ್ ಚಕ್ಕೋಬಾ
20 ನವೆಂಬರ್ 2023 ಸೋಮವಾರ : ಛತ್ (ಬೆಳಿಗ್ಗೆ ಅರ್ಘ್ಯ)
23 ನವೆಂಬರ್ 2023ಗುರುವಾರ : ಸೆಂಗ್ ಕುಟ್ಸ್ನಾಮ್ / ಎಗಾಸ್-ಬಗ್ವಾಲ್
27 ನವೆಂಬರ್ 2023, ಸೋಮವಾರ: ಗುರುನಾನಕ್ ಜಯಂತಿ / ಕಾರ್ತಿಕ ಪೂರ್ಣಿಮಾ / ರಾಹ್ಸ್
30 ನವೆಂಬರ್ 2023, ಗುರುವಾರ: ಕನಕದಾಸ ಜಯಂತಿ
ಶನಿವಾರ ಮತ್ತುಭಾನುವಾರ
11 ನವೆಂಬರ್ 2023 – ಎರಡನೇ ಶನಿವಾರ
25 ನವೆಂಬರ್ 2023 – ನಾಲ್ಕನೇ ಶನಿವಾರ
5, 12, 19, 26 ನವೆಂಬರ್2023, ಭಾನುವಾರ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿಕೆ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಜಾ ದಿನಗಳ ಪಟ್ಟಿಯ ಪ್ರಕಾರ, ಮುಂದಿನ ತಿಂಗಳಲ್ಲಿ ಒಟ್ಟು 15 ದಿನ ರಜಾ ದಿನಗಳಿವೆ. ಇದು ಶನಿವಾರ ಮತ್ತು ಭಾನುವಾರ ರಜಾ ದಿನಗಳನ್ನು ಸಹ ಒಳಗೊಂಡಿದೆ. ವಾಸ್ತವವಾಗಿ, ನವೆಂಬರ್ ತಿಂಗಳಲ್ಲಿ 4 ಭಾನುವಾರಗಳಿವೆ.
ಇದರೊಂದಿಗೆ, ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ರಜಾದಿನವಿದೆ, ಅಂದರೆ, ಈ 6 ರಜಾ ದಿನಗಳನ್ನು ಇಡೀ ದೇಶದಲ್ಲಿ ನಿಗದಿಪಡಿಸಲಾಗಿದೆ. ಎಲ್ಲಾ ಸಾರ್ವಜನಿಕ ರಜಾ ದಿನಗಳಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ ಮತ್ತು ನಿರ್ದಿಷ್ಟ ರಾಜ್ಯವನ್ನು ಅವಲಂಬಿಸಿ ಕೆಲವು ಪ್ರಾದೇಶಿಕ ರಜಾ ದಿನಗಳು ಇರುತ್ತವೆ. ಪ್ರಾದೇಶಿಕ ರಜಾ ದಿನಗಳನ್ನು ರಾಜ್ಯ ಸರ್ಕಾರ ನಿರ್ಧರಿಸುತ್ತದೆ.