World Cup Trophy: ವಿಶ್ವಕಪ್ ಟ್ರೋಫಿಯಲ್ಲಿ ಎಷ್ಟು ಚಿನ್ನ ಮತ್ತು ಎಷ್ಟು ಬೆಳ್ಳಿ ಇದೆ….? ವಿಶ್ವಕಪ್ ಬೆಲೆ ಎಷ್ಟು…?

ವಿಶ್ವಕಪ್ ನಲ್ಲಿ ಎಷ್ಟು ಮತ್ತು ಎಷ್ಟು ಬೆಳ್ಳಿ ಅಳವಡಿಸಲಾಗಿದೆ.

ODI Cricket World Cup Trophy Information: ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಎಲ್ಲಾರ ಕಣ್ಣು ಇರುವುದು ವಿಶ್ವಕಪ್ ಟ್ರೋಫಿ ಮೇಲೆಯೇ. ಈ ಟ್ರೋಫಿ ಗೆಲ್ಲಲೇಬೇಕು ಎಂದು, ಟ್ರೋಫಿಯನ್ನು ನೋಡಿದ ಕೂಡಲೇ ಅನಿಸಿಬಿಡುತ್ತದೆ. ಅಷ್ಟೊಂದು ಸುಂದವಾದ ಹಾಗು ಬೆಲೆ ಬಾಳುವ ಟ್ರೋಫಿ ಇದಾಗಿದೆ.

2023ರ ಏಕದಿನ ವಿಶ್ವಕಪ್ ಟೂರ್ನಿಯನ್ನು ಟೀಮ್ ಇಂಡಿಯಾ ನಿರಾಶಾದಾಯಕ ಸೋಲಿನೊಂದಿಗೆ ಅಭಿಯಾನ ಮುಗಿಸಿದೆ. ಆಸ್ಟ್ರೇಲಿಯಾ ವಿಶ್ವದಾಖಲೆಯ ಆರನೇ ಟ್ರೋಫಿ ಗೆದ್ದಿದೆ. ಸದ್ಯ ಟ್ರೊಫಿ ವಿಶೇಷತೆಗಳ ಕುರಿತು ಗೂಗಲ್​ನಲ್ಲಿ ಹೆಚ್ಚು ಹುಡುಕಾಟ ನಡೆಯುತ್ತಿದೆ‌.

World Cup Trophy Information
Image Credit: Sportsadda

ಏಕದಿನ ವಿಶ್ವಕಪ್ ಟ್ರೋಫಿಯ ವಿನ್ಯಾಸ ಹಾಗು ರಚನೆ

1975ರಲ್ಲಿ ಏಕದಿನ ವಿಶ್ವಕಪ್ ಆರಂಭಗೊಂಡರೂ ಅಧಿಕೃತ ಟ್ರೋಫಿ ವಿನ್ಯಾಸಗೊಳಿಸಿದ್ದು 1999ರಲ್ಲಿ. ಅದಕ್ಕೂ ಮುನ್ನ 1975-1996ರ ನಡುವೆ ಜರುಗಿದ 6 ವಿಶ್ವಕಪ್‌ ಗಳಲ್ಲಿ ವಿಭಿನ್ನ ವಿಭಿನ್ನ ವಿನ್ಯಾಸ ಹೊಂದಿದ್ದ ಟ್ರೋಫಿಗಳನ್ನು ನೀಡಲಾಗಿತ್ತು. 1999ರ ವಿಶ್ವಕಪ್‌ನಲ್ಲಿ ಟ್ರೋಫಿಯನ್ನು ವಿನ್ಯಾಸಗೊಳಿಸಿ, ಅಧಿಕೃತವಾಗಿ ಬಳಸಲಾಯಿತು. ಅಂದಿನಿಂದ ಈವರೆಗೂ ಇದೇ ಟ್ರೋಫಿಯನ್ನು ಬಳಸಲಾಗುತ್ತಿದೆ. ಲಂಡನ್‌ನ ಗೆರಾರ್ಡ್ ಮತ್ತು ಕಂಪೆನಿ ಕ್ರಿಕೆಟ್​ ವಿಶ್ವಕಪ್ ಟ್ರೋಫಿಯನ್ನು ವಿನ್ಯಾಸಗೊಳಿಸಿದೆ. 24 ವರ್ಷಗಳಿಂದ ODI ವಿಶ್ವಕಪ್ ಟ್ರೋಫಿಯಾಗಿ ಇದನ್ನೇ ಬಳಸಲಾಗುತ್ತಿದೆ.

ಈ ಟ್ರೋಫಿ ಚಿನ್ನ ಹಾಗು ಬೆಳ್ಳಿಯನ್ನು ಹೊಂದಿದೆ

ಬೆಳ್ಳಿ ಮತ್ತು ಚಿನ್ನದಿಂದ ಟ್ರೋಫಿಯನ್ನು ತಯಾರಿಸಲಾಗಿದೆ.ಟ್ರೋಫಿಯಲ್ಲಿ ಕಾಣುವ ಗೋಳವು ಕ್ರಿಕೆಟ್ ಚೆಂಡನ್ನು ಪ್ರತಿನಿಧಿಸುತ್ತದೆ. ಟ್ರೋಫಿಯಲ್ಲಿರುವ ಚೆಂಡಿನ ಆಕಾರವಿರುವ ಗೋಳವು ಚಿನ್ನದ ಬಣ್ಣದಿಂದ ಮತ್ತು ಮೂರು ಕಂಬಗಳನ್ನು (ವಿಕೆಟ್​ಗಳ ರೂಪ) ಬೆಳ್ಳಿಯಿಂದ ತಯಾರಿಸಲಾಗಿದೆ.

World Cup Trophy Features
Image Credit: India Times

ವಿಶ್ವಕಪ್ ಟ್ರೋಫಿಯ ತೂಕ, ಎತ್ತರದ ಬಗ್ಗೆ ಮಾಹಿತಿ

ವಿಶ್ವಕಪ್ ಟ್ರೋಫಿ ವಿಕಿಪೀಡಿಯಾದ ಪ್ರಕಾರ ಅಂದಾಜು ತೂಕ 11.567 ಕಿಲೋಗ್ರಾಮ್ ಇದೆ. 650 ಮಿಲಿಮೀಟರ್ ಎತ್ತರ ಇದೆ. ಇನ್ನು ವಿಶ್ವಕಪ್ ಗೆದ್ದಾಗ ಮೂಲ ಟ್ರೋಫಿಯನ್ನು ವಿಜೇತರಿಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ವಿಜೇತರಿಗೆ ಅದೇ ಮಾದರಿಯಲ್ಲಿರುವ ಪ್ರತಿಕೃತಿ ಟ್ರೋಫಿ ನೀಡಲಾಗುತ್ತದೆ. ಟ್ರೋಫಿಯನ್ನು ಯುನೈಟೆಡ್ ಸ್ಟೇಟ್ಸ್​ ಎಮಿರೇಟ್ಸ್​ನಲ್ಲಿರುವ (ಯುಎಇ) ಪ್ರಧಾನ ಕಚೇರಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಮರಳಿಸಲಾಗುತ್ತದೆ.

ವಿಶ್ವಕಪ್ ಟ್ರೋಫಿ ಬೆಲೆ

ವಿಶ್ವದ ಅತ್ಯಂತ ದುಬಾರಿ ಕ್ರೀಡಾ ಟ್ರೋಫಿಗಳ ಅಗ್ರ 10ರಲ್ಲಿ ವಿಶ್ವಕಪ್ ಟ್ರೋಫಿ ಕೂಡ ಒಂದು. ಈ ಟ್ರೋಫಿಯು ಕ್ರಿಕೆಟ್ ಶ್ರೇಷ್ಠತೆಯ ಸಂಕೇತವಾಗಿದೆ. ಈವರೆಗೂ ನೀಡಲಾಗಿರುವ ದುಬಾರಿ ಕ್ರೀಡಾ ಟ್ರೋಫಿಗಳ ಪಟ್ಟಿಯಲ್ಲಿ ಈ ಟ್ರೋಫಿಗೆ ಅಗ್ರಸ್ಥಾನ ಸಿಕ್ಕಿದೆ. ಈ ಟ್ರೋಫಿಯ ಅಂದಾಜು ವೆಚ್ಚ 30,000 ಡಾಲರ್. ಭಾರತದ ಕರೆನ್ಸಿಯಲ್ಲಿ 25 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

Leave A Reply

Your email address will not be published.