Bank Account: ಜನರ ಬ್ಯಾಂಕ್ ಖಾತೆಗೆ ಸೇರಿದ ಲಕ್ಷ ಲಕ್ಷ ಹಣ, ನಿಮ್ಮ ಖಾತೆಗೆ ಬಂದಿರಬಹುದು ಈಗಲೇ ಚೆಕ್ ಮಾಡಿ.
ನಿಮ್ಮ ಖಾತೆಯಲ್ಲೂ ಇರಬಹುದು ಲಕ್ಷ ಲಕ್ಷ ಹಣ ಇಂದೇ ಚೆಕ್ ಮಾಡಿ,
Odisha Gramya Bank: ಪ್ರಪಂಚದಲ್ಲಿ ದಿನ ಬೆಳಗಾದರೆ ಹಲವು ರೀತಿಯ ವಿಷಯಗಳನ್ನು ನೋಡುತ್ತಿರುತ್ತೇವೆ ಅಥವಾ ಕೇಳಿಸಿಕೊಳ್ಳುತಿರುತ್ತೇವೆ. ಹಾಗೆಯೆ ಕೆಲವು ವಿಚಿತ್ರ ಹಾಗು ನಂಬಲಾರದ ವಿಷಯವು ಇರುತ್ತದೆ. ಆದರೆ ಇಲ್ಲಿದೆ ಒಂದು ಆಕರ್ಷಕ ವಿಷಯ, ಒಡಿಶಾದಲ್ಲಿ ಇದೇ ರೀತಿಯ ಒಂದು ಘಟನೆ ವರದಿಯಾಗಿದ್ದು, ಅಲ್ಲಿ ಅಪರಿಚಿತ ಮೂಲದಿಂದ ಹಲವಾರು ಜನರ ಖಾತೆಗಳಿಗೆ ಲಕ್ಷಾಂತರ ರೂಪಾಯಿಗಳನ್ನ ಜಮಾ ಮಾಡಲಾಗಿದೆ.

ಸಾವಿರಾರು ಜನರ ಖಾತೆಗೆ ಲಕ್ಷಾಂತರ ರೂಪಾಯಿ ಹಣ
ಒಡಿಶಾದಲ್ಲಿಒಬ್ಬರು ಅಥವಾ ಇಬ್ಬರಿಗೆ ಮಾತ್ರವಲ್ಲ, ಸಾವಿರಾರು ಖಾತೆದಾರರ ಖಾತೆಗೆ ಹಣ ಸೇರಿದ ವರದಿಯಾಗಿದೆ. ಗ್ರಾಹಕರು ತಮ್ಮ ಹಣವನ್ನ ಹಿಂಪಡೆಯಲು ಬಯಸಿದ್ದರಿಂದ ಇದು ಬ್ಯಾಂಕಿನಲ್ಲಿ ನೂಕುನುಗ್ಗಲಿಗೆ ಕಾರಣವಾಯಿತು. ಇನ್ನು ಈ ಹಣವನ್ನ ಖಾತೆಗಳಿಗೆ ಯಾರು.? ಹೇಗೆ ಜಮಾ ಮಾಡಲಾಗಿದೆ ಅನ್ನೋದರ ಬಗ್ಗೆ ಬ್ಯಾಂಕಿಗೂ ತಿಳಿದಿಲ್ಲ.
ಒಡಿಶಾ ಗ್ರಾಮೀಣ ಬ್ಯಾಂಕ್’ನಲ್ಲಿ ಈ ಘಟನೆ ನಡೆದಿದೆ. ನಿನ್ನೆ ಬೆಳಿಗ್ಗೆ ಬ್ಯಾಂಕ್ ತೆರೆದಾಗ ಜನಸಂದಣಿಯ ಪ್ರವಾಹವಿತ್ತು. ಎಲ್ಲರೂ ತಮ್ಮ ಖಾತೆಯಿಂದ ಹಣವನ್ನ ಹಿಂಪಡೆಯಲು ಬಂದಿದ್ದರು. ಕೆಲವರಿಗೆ 30,000 ರೂ., ಇನ್ನು ಕೆಲವರಿಗೆ 50,000 ರೂಪಾಯಿ ಜಮೆಯಾಗಿತ್ತು. ಅದು ಅಷ್ಟೆ ಅಲ್ಲ ಕೆಲವರ ಖಾತೆಗೆ ಒಂದರಿಂದ ಎರಡು ಲಕ್ಷ ರೂ.ಗಳನ್ನ ಜಮಾ ಮಾಡಲಾಗಿದೆ.
ಎಲ್ಲಿಂದ ಬಂತು ಇಷ್ಟೊಂದು ಹಣ..?
ಈ ಸುದ್ದಿ ಪ್ರಸ್ತುತ ವೈರಲ್ ಆಗುತ್ತಿದ್ದು, ಚರ್ಚೆಯ ಪ್ರಮುಖ ವಿಷಯವಾಗಿದೆ. ಖಾತೆಗೆ ಇದ್ದಕ್ಕಿದ್ದಂತೆ ಹಣ ಬಂದಿದ್ದರಿಂದ ಬ್ಯಾಂಕಿನ ಗ್ರಾಹಕರು ತುಂಬಾ ಸಂತೋಷಗೊಂಡಿದ್ದಾರೆ. ಮಾಧ್ಯಮ ಸಂವಾದದಲ್ಲಿ ಬ್ಯಾಂಕ್ ವ್ಯವಸ್ಥಾಪಕರು 300 ಖಾತೆಗಳನ್ನ ಪರಿಶೀಲಿಸಿದ್ದಾರೆ ಎಂದು ಹೇಳಿದರು. “ಈ ಹಣ ಎಲ್ಲಿಂದ ಬಂದಿದೆ ಎಂಬುದನ್ನ ಕಂಡುಹಿಡಿಯಲು ನಾವು ಪ್ರಯತ್ನಿಸಿದ್ದೇವೆ.
ಈ ಹಣವನ್ನ ಯಾರು ಅಥವಾ ಏಕೆ ಈ ಖಾತೆಗಳಲ್ಲಿ ಜಮಾ ಮಾಡಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಜನರ ಖಾತೆಗಳಿಗೆ ಇದ್ದಕ್ಕಿದ್ದಂತೆ ಹಣ ಬರುತ್ತಿರುವುದರಿಂದ, ಗ್ರಾಹಕರು ತಮ್ಮ ಹಣವನ್ನ ಹಿಂಪಡೆಯುತ್ತಿದ್ದಾರೆ” ಎಂದು ಅವರು ಹೇಳಿದರು. ಖಾತೆಗಳಿಗೆ 30,000 ರೂ.ಗಳಿಂದ 2 ಲಕ್ಷ ರೂ.ಗಳವರೆಗಿನ ಮೊತ್ತವನ್ನ ಜಮಾ ಮಾಡಲಾಗಿದೆ ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.

ಶೀಘ್ರ ತನಿಖೆ ಕೈಗೊಂಡ ಬ್ಯಾಂಕ್
ಬ್ಯಾಂಕಿನ ಕಡೆಯಿಂದ ಇನ್ನೂ ತನಿಖೆ ನಡೆಯುತ್ತಿದೆ ಮತ್ತು ಹಣವನ್ನ ಈ ಖಾತೆಗಳಲ್ಲಿ ಹೇಗೆ ಮತ್ತು ಏಕೆ ಜಮಾ ಮಾಡಲಾಗಿದೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ ಎಂದು ಬ್ಯಾಂಕ್ ಹೇಳಿದೆ. ವರದಿಗಳ ಪ್ರಕಾರ, ಒಡಿಶಾ ಗ್ರಾಮ ಬ್ಯಾಂಕ್ ಸರ್ಕಾರಿ ಬ್ಯಾಂಕ್ ಆಗಿದ್ದು, ಇದು ಒಡಿಶಾದಲ್ಲಿ ಬಹಳ ಜನಪ್ರಿಯವಾಗಿದೆ.
ಈ ಬ್ಯಾಂಕ್ ದೇಶದಲ್ಲಿ 549 ಶಾಖೆಗಳನ್ನ ಹೊಂದಿದ್ದು, 155 ಎಟಿಎಂಗಳು ಮತ್ತು 2340 ಉದ್ಯೋಗಿಗಳನ್ನ ಹೊಂದಿದೆ. ಬ್ಯಾಂಕಿನ website ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಬ್ಯಾಂಕ್ 55 ಲಕ್ಷಕ್ಕೂ ಹೆಚ್ಚು ಗ್ರಾಹಕರನ್ನ ಹೊಂದಿದೆ. ಆದರು ಒಡಿಶಾ ಜನರಿಗೆ ಇದೊಂದು ಬಿಗ್ ಆಫರ್ ಆಗಿದ್ದು, ಬ್ಯಾಂಕ್ ಮಾತ್ರ ತಲೆ ಕೆಡಿಸಿಕೊಂಡಿದೆ.