Ola: ಓಲಾ ಸ್ಕೂಟರ್ ಖರೀದಿ ಮಾಡುವವರಿಗೆ ಭರ್ಜರಿ ಆಫರ್ ಘೋಷಣೆ, ದಸರಾ ಹಬ್ಬದ ಬೆಸ್ಟ್ ಆಫರ್ ಇದು.
ದಸರಾ ಹಬ್ಬಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿ, ಬಂಪರ್ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಿ.
Ola Electric Scooter Offer: ದೇಶಿಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮೇಲಿನ ಒಲವು ಹೆಚ್ಚಾಗಿದೆ. ಏರಿಕೆ ಆಗುತ್ತಿರುವ ಪೆಟ್ರೋಲ್ ದರಗಳ ನಡುವೆ ಎಲೆಕ್ಟ್ರಿಕ್ ವಾಹನಗಳು ಬೆಸ್ಟ್ ಅನಿಸುತ್ತಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಗ್ರಾಹಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬ್ಯಾಟರಿ ವಾರಂಟಿ ಯೋಜನೆಗಳು, ಗ್ರಾಹಕರಿಗೆ ವಾಹನಗಳ ಮೇಲೆ ರಿಯಾಯಿತಿಗಳು ಹಾಗು ಇನ್ನಿತರ ಅಧಿಕ ಪ್ರಯೋಜನಗಳನ್ನು ನೀಡಲಾಗುತ್ತಿದೆ.
ಹಾಗೆಯೆ ಇತ್ತೀಚಿಗೆ ಹೆಚ್ಚು ಜನಪ್ರಿಯತೆ ಗಳಿಸಿದ ಎಲೆಕ್ಟ್ರಿಕ್ ವಾಹನಗಳ ಪೈಕಿ ಓಲಾ ಎಲೆಕ್ಟ್ರಿಕ್ (Ola Electric) ಸ್ಕೂಟರ್ ರಾಷ್ಟ್ರ ವ್ಯಾಪ್ತಿಯಾಗಿ ಹೆಸರು ಗಳಿಸುತ್ತಿದೆ. ಸದ್ಯ ಓಲಾ ಸ್ಕೂಟರ್ ಖರೀದಿ ಮಾಡುವವರಿಗೆ ಬಂಪರ್ ಆಫರ್ ಘೋಷಣೆ ಆಗಿದ್ದು ಈ ಆಫರ್ ಕೆಲವು ದಿನಗಳಿಗೆ ಮಾತ್ರ ಸೀಮಿತವಾಗಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ (Ola Electric Scooter)
ಈಗ ಹಬ್ಬದ ಸೀಸನ್ ಆರಂಭವಾಗಿದ್ದು, ಸ್ಕೂಟರ್ ಖರೀದಿಸುವ ಪ್ಲಾನ್ ಮಾಡಿದ್ದರೆ ಇದು ಒಂದು ಉತ್ತಮ ಸಮಯವಾಗಲಿದೆ. ನೀವು ಈಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಿದರೆ 5 ವರ್ಷದ ಬ್ಯಾಟರಿ ವಾರಂಟಿ, ವಿನಿಮಯ ಕೊಡುಗೆಗಳು ಮತ್ತು ಯಾವುದೇ ವೆಚ್ಚವಿಲ್ಲದ ಇಎಂಐ ಆಯ್ಕೆಗಳನ್ನು ಒಳಗೊಂಡಂತೆ ಹಣಕಾಸಿನ ಯೋಜನೆಗಳಂತಹ ಪ್ರಯೋಜನಗಳನ್ನು ಪಡೆಯಬಹುದು. ಈ ಹಬ್ಬದ ಸಮಯದಲ್ಲಿ ಓಲಾ ಸ್ಕೂಟರ್ ಅನ್ನು ಟೆಸ್ಟ್ ಡ್ರೈವಿಂಗ್ ಮಾಡುವಾಗ ಅದೃಷ್ಟಶಾಲಿ ಗ್ರಾಹಕರಿಗೆ ಓಲಾ ಎಸ್1 ಎಕ್ಸ್+ ಮತ್ತು ಇತರ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರಿಗೆ ಬಿಗ್ ಕೊಡುಗೆಗಳು
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹಬ್ಬದ ಸೀಸನ್ ನಲ್ಲಿ ಖರೀದಿಸಲು ಬಯಸಿದರೆ 5 ವರ್ಷದ ಬ್ಯಾಟರಿ ಪ್ರಾಮಿಸ್ ನಂತಹ ಕೊಡುಗೆಗಳನ್ನು ಪಡೆಯಬಹುದು. ಅಲ್ಲಿ ಕಂಪನಿಯು ಓಲಾದ ಪ್ರಮುಖ ಉತ್ಪನ್ನವಾದ ಎಸ್1 ಪ್ರೋ (Gen 2) ಮತ್ತು ಎಸ್1 ಏರ್‌ನಲ್ಲಿ ಶೇ.50 ರಷ್ಟು ಉಚಿತ 5 ವರ್ಷಗಳ ವಿಸ್ತೃತ ವಾರಂಟಿಯನ್ನು ನೀಡುತ್ತಿದೆ. ಇದು ಇವಿ ಗಳ ಅಳವಡಿಕೆಯನ್ನು ಉತ್ತೇಜಿಸುವ ಗುರಿಗೆ ಅನುಗುಣವಾಗಿ, ಗ್ರಾಹಕರು ತಮ್ಮ (ICE) 2 ಅನ್ನು ವಿನಿಮಯ ಬೋನಸ್‌ಗೆ 10,000 ರೂ.ವರೆಗೆ ವಿನಿಮಯ ಮಾಡಿಕೊಳ್ಳುವ ಆಯ್ಕೆಯನ್ನು ನೀಡಿದೆ.

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ
ಪ್ರಸ್ತುತ, ಓಲಾ ತಂಡವು ಎಸ್ 1 ಪ್ರೋ ಜನ್-2 (ಬೆಲೆ 1,47,000), ಎಸ್1 ಏರ್ (ರೂ. 1,19,999) ಮತ್ತು ಎಸ್1X – ಎಸ್1 X+, ಎಸ್1 X (2kWh) ಮತ್ತು ಎಸ್1 X (3kWh) 3 ರೂಪಾಂತರಗಳನ್ನು ಒಳಗೊಂಡಿದೆ. ಎಸ್1 X+ ರೂ. 1,09,999 ಬೆಲೆಯಲ್ಲಿ ಲಭ್ಯವಿದೆ. S1X (3kWh) ಮತ್ತು S1X (2kWh) ಅನುಕ್ರಮವಾಗಿ ರೂ. 99,999 ಮತ್ತು 89,999 ರ (ಎಕ್ಸ್ ಶೋ ರೂಂ).ಬೆಲೆಯಲ್ಲಿ ಲಭ್ಯವಿದೆ.
Hi Good Evening