Aadhar Card: 10 ವರ್ಷಕ್ಕಿಂತ ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಹೊಸ ನಿಯಮ, ಈಗಲೇ ಈ ಕೆಲಸ ಮಾಡಿ.

ನಿಮ್ಮ ಆಧಾರ್ ಕಾರ್ಡ್ ಮಾಡಿಸಿ 10 ವರ್ಷಗಳಾಗಿದ್ದರೆ ಇಂದೇ ನವೀಕರಿಸಿ,

Aadhar Card Update: ಭಾರತದ ನಾಗರಿಕರಿಗೆ ಪ್ರಮುಖ ಮತ್ತು ಅಗತ್ಯವಾದ ಗುರುತಿನ ಚೀಟಿಯಾಗಿ 12ಅಂಕಿಯ ವಿಶಿಷ್ಟ ಆಧಾರ್‌ ಕಾರ್ಡ್‌ (Aadhaar Card)  ಕೆಲಸ ಮಾಡುತ್ತಿದೆ. ಇವಾಗಂತೂ ಆಧಾರ್ ಕಾರ್ಡ್ ಇಲ್ಲದೆ ಯಾವ ಕೆಲಸವೂ ಸಾಧ್ಯವಿಲ್ಲ. ಸರ್ಕಾರಿ ಯೋಜನೆಗಳಿಗೆ ಅರ್ಜಿ ಹಾಕಲು, ಇತರೆ ಕೆಲಸಗಳಿಗೆ ಹಾಗು ಲೈಸೆನ್ಸ್‌ (DL) ಪಡೆಯಲು ಹಿಡಿದು ಬ್ಯಾಂಕ್ ಖಾತೆ ಓಪನ್‌ ಮಾಡುವವರೆಗೂ ಎಲ್ಲದಕ್ಕೂ ಈಗ ಅಧಾರ್‌ ಕಾರ್ಡೇ ಆಧಾರವಾಗಿದೆ.

ಆಧಾರ್ ಸಂಖ್ಯೆಯನ್ನು ಭಾರತ ಸರ್ಕಾರವು ಭಾರತೀಯ ನಿವಾಸಿಗಳಿಗೆ ನೀಡಿದೆ. ಪ್ರತಿಯೊಂದು ಸಂಖ್ಯೆಯು ಆಧಾರ್ ಕಾರ್ಡ್ ಹೊಂದಿರುವವರ ಬಗ್ಗೆ ನಿರ್ದಿಷ್ಟ ಮಾಹಿತಿಯನ್ನು ನೀಡುತ್ತದೆ. ಸಣ್ಣ ಮಕ್ಕಳಿಂದ ಹಿಡಿದು ಎಲ್ಲರ ಬಳಿ ಈ ಕಾರ್ಡ್‌ ಇರಲೇಬೇಕು. ಪ್ರತಿಯೊಂದು ಔಪಚಾರಿಕ ಪ್ರಕ್ರಿಯೆ ಅಥವಾ ದಾಖಲಾತಿಗಾಗಿ ಫೋಟೋ ID ಪುರಾವೆಯಾಗಿ ಇದು ಕೆಲಸ ಮಾಡುತ್ತದೆ.

Old Aadhar Card Update
Image Credit: Etnownews

ಆಧಾರ್ ಕಾರ್ಡ್ ಅಪ್ಡೇಟ್ ಕಡ್ಡಾಯ

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಪ್ರತಿ 10 ವರ್ಷಗಳಿಗೊಮ್ಮೆ ತಮ್ಮ ಆಧಾರ್ ವಿವರಗಳನ್ನು ನವೀಕರಿಸಲು ನಾಗರಿಕರಿಗೆ ಸಲಹೆ ನೀಡುತ್ತದೆ. ಒಮ್ಮೆ ಆಧಾರ್‌ ಕಾರ್ಡ್‌ ಮಾಡಿಸಿದರೆ ಅಲ್ಲಿಗೆ ಕಥೆ ಮುಗೀತು ಅಂದುಕೊಳ್ಳಬೇಡಿ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಇದನ್ನು ಅಪ್ಡೇಟ್‌ ಮಾಡಬೇಕು. ನಿಖರವಾದ ಡೇಟಾ ಮತ್ತು ತೊಂದರೆ ಮುಕ್ತ ದೃಢೀಕರಣ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ನವೀಕರಣಕ್ಕೆ ಆದ್ಯತೆ ನೀಡುತ್ತಿದೆ.

ಯಾರು ತಮ್ಮ ಆಧಾರ್ ಅನ್ನು ನವೀಕರಿಸಬೇಕು?

ಆರಂಭಿಕ ದಾಖಲಾತಿಯ ಸಮಯದಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರು 5 ವರ್ಷ ತುಂಬಿದ ನಂತರ ತಮ್ಮನ್ನು ಮರುನೋಂದಣಿ ಮಾಡಿಕೊಳ್ಳಬೇಕಾಗುತ್ತದೆ ಹಾಗು ದಾಖಲಾತಿ ಸಮಯದಲ್ಲಿ 5 ರಿಂದ 15 ವರ್ಷ ವಯಸ್ಸಿನ ಮಕ್ಕಳು 15 ವರ್ಷ ತುಂಬಿದ ನಂತರ ನವೀಕರಣ ಮಾಡಿಕೊಳ್ಳಬೇಕು ಮತ್ತು ಇದಕ್ಕೆ ಎಲ್ಲಾ ಬಯೋಮೆಟ್ರಿಕ್‌ಗಳನ್ನು ಒದಗಿಸಬೇಕಾಗುತ್ತದೆ ಮತ್ತು ದಾಖಲಾತಿ ಸಮಯದಲ್ಲಿ 15 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ಬಯೋಮೆಟ್ರಿಕ್ ಡೇಟಾವನ್ನು ಪ್ರತಿ 10 ವರ್ಷಗಳಿಗೊಮ್ಮೆ ನವೀಕರಿಸಬೇಕಾಗುತ್ತದೆ.

aadhar card update in online
Image Credit: Haribhoomi

ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ನವೀಕರಿಸುವ ಹಂತಗಳು

ಆರಂಭದಲ್ಲಿ uidai.gov.in ನಲ್ಲಿ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ, ಹೋಮ್‌ಪೇಜ್‌ನಲ್ಲಿ, ‘ಮೈ ಅಧಾರ್’ ಟ್ಯಾಬ್ ಅಡಿಯಲ್ಲಿ, ‘ಅಪ್‌ಡೇಟ್ ಡೆಮೊಗ್ರಾಫಿಕ್ಸ್ ಡೇಟಾ ಮತ್ತು ಚೆಕ್ ಸ್ಟೇಟಸ್’ ಅನ್ನು ಕ್ಲಿಕ್ ಮಾಡಿ, ಲಾಗಿನ್ ಪುಟಕ್ಕೆ ಹೋದ ನಂತರ,

ನಿಮ್ಮ ಆಧಾರ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಲಾಗ್ ಇನ್ ಮಾಡಲು ‘OTP’ ಆಯ್ಕೆಯನ್ನು ಆರಿಸಿ, ನಂತರ ‘ಅಪ್‌ಡೇಟ್ ಆಧಾರ್ ಆನ್‌ಲೈನ್’ ವಿಭಾಗಕ್ಕೆ ಹೋಗಿ ಮತ್ತು ‘Update Aaadhaar’ ಕ್ಲಿಕ್ ಮಾಡಿ. ಈ ವಿಂಡೋದಲ್ಲಿ ನೀವು ನವೀಕರಿಸಲು ಬಯಸುವ ಡೇಟಾವನ್ನು ಆಯ್ಕೆಮಾಡಿ ಮತ್ತು ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ, ಇದೆಲ್ಲಾ ಆದ ಬಳಿಕ ಸಬ್‌ಮಿಟ್‌ ಕೊಡಿ. ಇದಿಷ್ಟು ಮಾಡಿದರೆ ನಿಮ್ಮ ಆಧಾರ್‌ ನವೀಕರಣಗೊಳ್ಳುತ್ತದೆ.

Leave A Reply

Your email address will not be published.