Actor Pratham: ಕನ್ನಡಿಗರ ಮೆಚ್ಚುಗೆಗೆ ಕಾರಣದ ಒಳ್ಳೆ ಹುಡುಗ ಪ್ರಥಮ್, ಮದುವೆಯಲ್ಲಿ ಸರಳತೆ ಮೆರೆದ ನಟ ಪ್ರಥಮ್.

ಬಹಳ ಸರಳವಾಗಿ ಮದುವೆ ಆಗಲಿರುವ ನಟ ಪ್ರಥಮ್, ಅಭಿಮಾನಿಗಳಿಗೆ ನೀಡಿದ ಸಂದೇಶವೇನ...?

Olle Huduga Pratham Marriage: ನೇರ ನುಡಿಯ ವ್ಯಕ್ತಿ ಒಳ್ಳೆ ಹುಡುಗ ಪ್ರಥಮ್ ಆಗಾಗ ಸುದ್ದಿಯಲ್ಲಿರುತ್ತಾರೆ. ಸಧ್ಯಕ್ಕೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿರುವ ಇವರು, ಆಗಾಗ ಸಾಮಾಜಿಕ ಕಾರ್ಯಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ. ಬಿಗ್ ಬಾಸ್ ಸೀಸನ್ 4 ರ ವಿನ್ನರ್ ಆಗಿ ಜನರ ಮೆಚ್ಚುಗೆಗೆ ಪಾತ್ರರಾದ ಇವರು, ನಂತರ ನಟರಾಗಿ, ನಿರ್ದೇಶಕರಾಗಿ ಜೀವನದಲ್ಲಿ ಸೆಟ್ಲ್ ಆಗಿದ್ದಾರೆ.

ನಟ ಪ್ರಥಮ್ ಅವರು ಮಂಡ್ಯದ ಭಾನುಶ್ರೀ ಎನ್ನುವವರ ಜೊತೆ ಜೂನ್ ತಿಂಗಳಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಪ್ರಥಮ್​ ಮುಂದಿನ ವಾರ ಮದುವೆಯಾಗಲಿದ್ದಾರಂತೆ.

Olle Huduga Pratham Marriage
Image Credit: Vistaranews

ಸಿಂಪಲ್ ಆಗಿ ನಿಶ್ಚಿತಾರ್ಥ ಮಾಡಿಕೊಂಡ ಒಳ್ಳೆ ಹುಡುಗ ಪ್ರಥಮ್
ಪ್ರಥಮ್ ಅವರು, ಮನೆಯವರು ನೋಡಿ ಇಷ್ಟ ಪಟ್ಟ ಹುಡುಗಿಯಾದ ಭಾನುಶ್ರೀ ಅವರ ಜೊತೆ ಕೆಲವು ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಬಹಳ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡ ಇವರ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತ ಪಡಿಸಿದರೆ ಇನ್ನು ಕೆಲವರು ನಿಶ್ಚಿತಾರ್ಥ ಕ್ಕೆ ನಾಲ್ಕು ಜನರನ್ನು ಕರೆದು ಊಟ ಹಾಕಿಸಬೇಕಿತ್ತು ಅಂತ ಹೇಳಿದ್ರು. ಈ ವಿಚಾರವಾಗಿ ಪ್ರತ್ಯುತರ ಕೊಟ್ಟ ಪ್ರಥಮ್ ವೃದ್ಧಾಶ್ರಮವೊಂದರ 138 ಜನರಿಗೆ ಸಿಹಿ ಊಟ ಹಾಕಿಸ್ತೀವಿ. ಚಳಿಗಾಲದ ಆಸರೆಗಾಗಿ ಒಂದು ಶಾಲು ಕೊಡ್ತೀವಿ ಎಂದು ಕೊಂಕು ಮಾತನಾಡಿದವರ ಬಾಯಿ ಮುಚ್ಚಿಸಿದರು.

ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟ ಪ್ರಥಮ್​

ಪ್ರಥಮ್ ಅವರು ತನ್ನ ಮದುವೆ ವಿಚಾರವಾಗಿ  ಅಭಿಮಾನಿಗಳಿಗೆ ಒಂದು ಸಂದೇಶ ಕಳುಹಿಸಿದ್ದಾರೆ ಅದೇನೆಂದರೆ ಮುಂದಿನ ವಾರ ನನ್ನ ಮದುವೆ ಅಲ್ಲೇ ಬಂದು ಆಶೀರ್ವಾದ ಮಾಡ್ಬೇಕಂತೇನೂ ಇಲ್ಲ.ಕರೆಯೋಕೆ ಸಂಭ್ರಮವೂ ಇಲ್ಲ. ಆಹ್ವಾನ ಪತ್ರಿಕೆ ತಲುಪಿಸೋದೇ ಹರಸಾಹಸ ಹಾಗಂತ ಸುಮ್ಮನೆ ಮೆಸ್ಸೇಜ್ ಹಾಕಿ ನಿಮ್ಮನ್ನ ಮದುವೆಗೆ ಕಾಟಾಚಾರಕ್ಕೆ ಕರೆಯೋದಿಲ್ಲ.

ಈಗ ಎಲ್ಲಿರ್ತೀರೋ ಅಲ್ಲಿಂದಲೇ ಹಾರೈಸಿ. ಅದ್ದೂರಿ ಆಗಿ ಮದುವೆ ಆಗಬಹುದಿತ್ತು. ನನಗೆ ಆಸಕ್ತಿ ಇಲ್ಲ,ಸರಳವಾಗಿ ಆಗ್ತಿರೋ ಕಾರಣ ನೀವು ಇದ್ದಲಿಯೇ ಹಾರೈಸಿ ಎಂದು ತಾವು ಮದುವೆಯಾಗುತ್ತಿರುವ ಬಗ್ಗೆ ನಟ ಪ್ರಥಮ್​ ಹೇಳಿಕೊಂಡಿದ್ದಾರೆ. ಪ್ರಥಮ್ ಅವರು ಸದಾ ಸರಳತೆ, ನ್ಯಾಯ, ಧರ್ಮ ಎಂದು ಹೇಳುತ್ತಲೇ ಬಂದಿದ್ದರು. ಈಗ ಅವರು ಹೇಳಿದಂತೆ ಸರಳವಾಗಿ ಮದುವೆ ಆಗುತ್ತಿದ್ದಾರೆ. ಪ್ರಥಮ್ ಅವರ ಪೋಸ್ಟ್ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ, ಅನೇಕರು ಇದು ಉತ್ತಮ ನಡೆ ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.

Leave A Reply

Your email address will not be published.