ID Card: ದೇಶದ ಎಲ್ಲಾ ಶಾಲಾ ಮಕ್ಕಳಿಗೆ ಕೇಂದ್ರದ ಮೋದಿ ಸರ್ಕಾರದಿಂದ ಹೊಸ ನಿಯಮ, ಹೊಸ ಗುರುತಿನ ಕಾರ್ಡ್.

ದೇಶದ ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ರೀತಿಯ ID ಕಾರ್ಡ್ ಪರಿಚಯಿಸಿದ ಕೇಂದ್ರ ಸರ್ಕಾರ.

One Nation One Student ID: ವಿದ್ಯಾರ್ಥಿಗಳಿಗಾಗಿ ಕೇಂದ್ರ ಸರಕಾರ ಹೊಸ ನಿಯಮವನ್ನು ಜಾರಿಗೆ ತರುತ್ತಿದೆ. ಅದೇನೆಂದರೆ ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ರ ಭಾಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ಪ್ರತಿ ವಿದ್ಯಾರ್ಥಿಗೆ ‘ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿ (APAAR) ಎಂಬ ‘ಒನ್ ನೇಷನ್, ಒನ್ ಸ್ಟೂಡೆಂಟ್ ಐಡಿ’ ರಚಿಸಲು ಯೋಜಿಸಿದೆ ಎನ್ನಲಾಗಿದೆ.

ಇನ್ನು ಈ ನಿಯಮ ಜಾರಿಗೆ ಬರಲು ಪೋಷಕರು ಒಪ್ಪಿಗೆ ಮುಖ್ಯವಾಗಿದ್ದು, ಪೋಷಕರು ಒಪ್ಪಿಗೆ ಸೂಚಿಸಿದರೆ ಶಾಲಾ ವಿದ್ಯಾರ್ಥಿಗಳು ಶೀಘ್ರದಲ್ಲೇ ತಮ್ಮದೇ ಆದ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಲಿದ್ದಾರೆ ಎಂದು ಸರ್ಕಾರ ಹೇಳಿದೆ.

One Nation One Student ID
Image Credit: Original Source

ವಿದ್ಯಾರ್ಥಿಗಳ ಸಾಧನೆಯ ಅಂಗವಾಗಿ ಈ ನಿಯಮ

ಕೇಂದ್ರ ಸರ್ಕಾರವು ವಿದ್ಯಾರ್ಥಿಗಳಿಗೆಂದು ಯಾವುದೇ ನಿಯಮ ಜಾರಿಗೆ ತಂದರು ಅದು ಅವರ ಭವಿಷ್ಯಕ್ಕೆ ಉತ್ತಮ ಹೆಜ್ಜೆ ಆಗಲಿದೆ ಎನ್ನಬಹುದು. ಪ್ರತಿಯೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತರುತ್ತದೆ ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ APAAR ID ಜಾರಿಗೆ ತಂದಿದೆ. APAAR ID, ಎಜುಕೇಶನ್ ಇಕೋಸಿಸ್ಟಮ್ ರಿಜಿಸ್ಟ್ರಿ ಅಥವಾ ಎಜುಲಾಕರ್ ಅನ್ನು ಆಜೀವ ಐಡಿ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣ ಮತ್ತು ಸಾಧನೆಗಳನ್ನು ಟ್ರ್ಯಾಕ್ ಮಾಡುತ್ತದೆ.

One Nation One Student ID Card
Image Credit: Keralakaumudi

ಶಿಕ್ಷಣ ಸಚಿವಾಲಯದ ಆದೇಶದಂತೆ ಐಡಿಗಳನ್ನು ರಚಿಸುವ ಪ್ರಕ್ರಿಯೆಗೆ ಚಾಲನೆ

ವಿದ್ಯಾರ್ಥಿಗಳಿಗೆ APAAR ID ಗಳನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ಶಿಕ್ಷಣ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿದೆ. ಎಐಸಿಟಿಇ ಅಧ್ಯಕ್ಷ ಟಿ ಜಿ ಸೀತಾರಾಮನ್ ಅವರ ಹೇಳಿಕೆ ಪ್ರಕಾರ “ಎಪಿಎಎಆರ್ ಮತ್ತು ನ್ಯಾಷನಲ್ ಕ್ರೆಡಿಟ್ ಫ್ರೇಮ್ವರ್ಕ್ ಭಾರತದಾದ್ಯಂತ ಕಲಿಯುವವರಿಗೆ ಕ್ಯೂಆರ್ ಕೋಡ್ ಆಗಿರುತ್ತದೆ. ಅವರು ತೆಗೆದುಕೊಳ್ಳುವ ಪ್ರತಿಯೊಂದು ಕೌಶಲ್ಯವನ್ನು ಇಲ್ಲಿ ಕ್ರೆಡಿಟ್ ಮಾಡಲಾಗುತ್ತದೆ ” ಎಂದು ಹೇಳಿದ್ದಾರೆ.

Leave A Reply

Your email address will not be published.