OnePlus: OnePlus ಈ ಮೊಬೈಲ್ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದ ಮುಕೇಶ್ ಅಂಬಾನಿ, ಖರೀದಿಸಲು ಜನಸಂದಣಿ.

ಒನ್‌ಪ್ಲಸ್‌ ಓಪನ್ ಫೋಲ್ಡಬಲ್ ಫೋನ್‌ ಅನ್ನು ಅಗ್ಗದ ಬೆಲೆಯಲ್ಲಿ ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಖರೀದಿ ಮಾಡಿ, ಬಂಪರ್ ಆಫರ್ ಕೊಡುಗೆ ನಿಮ್ಮದಾಗಲಿದೆ

OnePlus Foldable Smart Phone In Reliance Digital: ಒನ್‌ಪ್ಲಸ್‌ ಓಪನ್ ಫೋಲ್ಡಬಲ್ (OnePlus Open Foldable) ಫೋನ್‌ ಬಹು ಬೇಡಿಕೆಯನ್ನು ಹೊಂದಿದೆ. ಈ ಫೋನ್ ಬಹಳ ದುಬಾರಿ ಆಗಿದ್ದು, ಅಧಿಕ ವೈಶಿಷ್ಟತೆಯನ್ನು ಹೊಂದಿದೆ. ಅಕ್ಟೋಬರ್ 20 ರಿಂದ ಗ್ರಾಹಕರು ಹತ್ತಿರದ ಯಾವುದೇ ರಿಲಯನ್ಸ್ ಡಿಜಿಟಲ್ (Reliance Digital) ಸ್ಟೋರ್‌ ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಮೊದಲೇ ಬುಕ್ ಮಾಡಿಕೊಳ್ಳಬಹುದು.

ಹಾಗು ಈ ಫೋನ್ ಅನ್ನು ಬಹಳ ಕಡಿಮೆ ಬೆಲೆಯಲ್ಲಿ ಖರಿಸಬಹುದಾಗಿದೆ.ಈ ಅಪ್‌ಡೇಟೆಡ್ ಒನ್‌ಪ್ಲಸ್ ಓಪನ್ ಫೋನ್ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಫೋಲ್ಡಬಲ್ ಡಿಸ್‌ಪ್ಲೇಯ ವಿನ್ಯಾಸ ಹೊಂದಿದೆ.

OnePlus Open Foldable Smartphone
Image Credit: Telecomtalk

ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಒನ್‌ಪ್ಲಸ್‌ ಓಪನ್ ಫೋಲ್ಡಬಲ್ ಫೋನ್‌ ಅನ್ನು ಬುಕ್ ಮಾಡಿ

ರಿಲಯನ್ಸ್ ಡಿಜಿಟಲ್ ಸ್ಟೋರ್‌ನಲ್ಲಿ ಒನ್‌ಪ್ಲಸ್‌ ಓಪನ್ ಫೋಲ್ಡಬಲ್ ಫೋನ್‌ ಅನ್ನು ಅಕ್ಟೋಬರ್ 20 ರಂದು ಬುಕ್ಕಿಂಗ್ ಗೆ ಅವಕಾಶ ಮಾಡಿಕೊಟ್ಟಿದ್ದು, ಅಧಿಕೃತವಾಗಿ ಅಕ್ಟೋಬರ್ 27, 2023 ರಂದು ಮಾರಾಟವು ಪ್ರಾರಂಭವಾಗುತ್ತದೆ.

ರಿಲಯನ್ಸ್ ಡಿಜಿಟಲ್ ಸಿಇಒ ಬ್ರಿಯಾನ್ ಬೇಡ್, “ಒನ್‌ಪ್ಲಸ್‌ನ ವಿಶೇಷವಾದ ಒನ್‌ಪ್ಲಸ್ ಓಪನ್ ಸ್ಮಾರ್ಟ್‌ಫೋನ್ ಬಿಡುಗಡೆಗಾಗಿ ನಾವು ಪಾಲುದಾರರಾಗಲು ಸಂತಸಪಡುತ್ತೇವೆ,” ಎಂದು ಹೇಳಿದ್ದಾರೆ. “ಈ ಲಾಂಚ್‌ನೊಂದಿಗೆ ನಾವು ಭಾರತದಲ್ಲಿ ನಮ್ಮ ಗ್ರಾಹಕರಿಗೆ ನೂತನ ತಂತ್ರಜ್ಞಾನ ಪರಿಚಯಿಸುವ ಭರವಸೆಯನ್ನು ನಿಜವಾಗಿಯೂ ಮುಂದುವರಿಸುತ್ತೇವೆ,” ಎಂದು ತಿಳಿಸಿದರು.

ಒನ್‌ಪ್ಲಸ್‌ ಓಪನ್ ಫೋಲ್ಡಬಲ್ ಫೋನ್‌ ವಿಶೇಷತೆ

ಒನ್‌ಪ್ಲಸ್‌ ಓಪನ್ ಫೋಲ್ಡಬಲ್ ಫೋನ್‌ ಬಳಕೆದಾರರಿಗೆ ಟ್ಯಾಬ್ಲೆಟ್ ಮತ್ತು ಫೋನ್ ಮೋಡ್‌ಗಳ ನಡುವೆ ಪರಿವರ್ತನೆಯನ್ನು ಸುಲಭಗೊಳಿಸುತ್ತದೆ. ಸ್ಮಾರ್ಟ್‌ಫೋನ್ 512 ಜಿಬಿ ಸ್ಟೋರೆಜ್ ಅನ್ನು ಹೊಂದಿದೆ. 12 ಜಿಬಿ RAM ಇದೆ. ಹೊಸದಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಹೊಂದಿದೆ ಮತ್ತು ವಾಟರ್‌ ಡ್ರಾಪ್ ಹಿಂಜ್ ಇದೆ.

600 ಕ್ಕೂ ಹೆಚ್ಚು ರಿಲಯನ್ಸ್ ಡಿಜಿಟಲ್ ಸ್ಟೋರ್‌ಗಳು ಮತ್ತು 1800 ಮೈ ಜಿಯೋ ಸ್ಟೋರ್‌ಗಳು 800 ಕ್ಕೂ ಹೆಚ್ಚು ನಗರಗಳಲ್ಲಿ ಇದೆ. ರಿಲಯನ್ಸ್ ಡಿಜಿಟಲ್ ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ಸ್ ರಿಟೇಲ್ ವ್ಯಾಪಾರ ಸಂಸ್ಥೆಯಾಗಿದ್ದು, ರಾಷ್ಟ್ರವ್ಯಾಪಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ.

OnePlus Foldable Smart Phone
Image Credit: Tomsguide

ಒನ್‌ಪ್ಲಸ್‌ ಓಪನ್ ಫೋಲ್ಡಬಲ್ ಫೋನ್‌ ನ ಬೆಲೆ ಹಾಗು ಆಫರ್ ಕೊಡುಗೆ

ಒನ್‌ಪ್ಲಸ್‌ನ ಫೋನ್‌ನ ಬೆಲೆಯು 1,39,999 ರೂಪಾಯಿಗೆ ಕಂಪನಿ ನಿಗದಿ ಪಡಿಸಿದೆ. ಗ್ರಾಹಕರು ಮುಂಚಿತವಾಗಿಯೇ ಈ ಫೋನ್ ಅನ್ನು ಬುಕ್ ಮಾಡಿದರೆ 8,000 ರೂಪಾಯಿವರೆಗೆ ಎಕ್ಸ್‌ಚೇಂಜ್ ಬೋನಸ್‌ಗಳನ್ನು ಪಡೆಯಬಹುದು. ಐಸಿಐಸಿಐ ಬ್ಯಾಂಕ್ ಕಾರ್ಡ್‌ ಮತ್ತು ಒನ್‌ ಕಾರ್ಡ್‌ನಲ್ಲಿ ಪಾವತಿ ಮಾಡಿ ಈ ಫೋನ್ ಬುಕ್ ಮಾಡುವುದಾದರೆ ಸುಮಾರು 5,000 ರೂಪಾಯಿವರೆಗೆ ರಿಯಾಯಿತಿ ಲಭಿಸುತ್ತದೆ. ಅಷ್ಟು ಮಾತ್ರವಲ್ಲದೆ ಒನ್‌ಪ್ಲಸ್ ಬಡ್ಸ್‌ ಪ್ರೋ 2 ಮತ್ತು ಸುರಕ್ಷಿತಾ ವಿಮೆ ಕೂಡ ಲಭ್ಯವಾಗಲಿದೆ.

Leave A Reply

Your email address will not be published.