OnePlus: ಭಾರತಕ್ಕೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಒನ್‌ಪ್ಲಸ್‌ ಒಪನ್‌ ಫೋಲ್ಡಬಲ್‌ ಫೋನ್‌! ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಾ!

ಒನ್‌ಪ್ಲಸ್‌ ಒಪನ್‌ ಫೋಲ್ಡಬಲ್‌ ಫೋನ್‌ ಭಾರತದ ಮಾರುಕಟ್ಟೆಗೆ ಬರಲಿದೆ, ಇಂದೇ ಬುಕ್ ಮಾಡಿಕೊಳ್ಳಿ

OnePlus Open Smart Phone: ಇತೀಚಿನ ದಿನಗಳಲ್ಲಿ ಫೋಲ್ಡಬಲ್‌ (ಮಡಚುವ) ಫೋನ್‌ ಹವಾ ಹೆಚ್ಚುತ್ತಿದೆ. ಈ ಫೋನ್ ಗಳನ್ನೂ ಕೈಯಲ್ಲಿ ಹಿಡಿದುಕೊಳ್ಳಲು ಬಹಳ ಸುಲಭವಾಗುವುದರಿಂದ ಈ ಫೋನ್ ಉತ್ತಮ ಬೇಡಿಕೆಯನ್ನು ಕೂಡ ಪಡೆದುಕೊಳ್ಳುತ್ತಿದೆ. ಅಷ್ಟೇ ಅಲ್ಲದೇ ಈಗ ಭಾರತದಲ್ಲಿ ಒನ್‌ಪ್ಲಸ್‌ ಕಂಪೆನಿ ಮೊದಲ ಫೋಲ್ಡಬಲ್‌ Smart Phone ಅನ್ನು ಪರಿಚಯಿಸಿದ್ದು, ಇನ್ನು ಈ ಫೋನ್ ಗಳು ಇನ್ನಷ್ಟು ಹೆಚ್ಚು ಬೇಡಿಕೆಯನ್ನು ಪಡೆದುಕೊಳ್ಳಲಿದೆ ಎನ್ನಬಹುದು.

ಒನ್‌ಪ್ಲಸ್‌ ಒಪನ್‌ ಹೆಸರಿನೊಂದಿಗೆ ಎಂಟ್ರಿ ನೀಡಿರುವ ಈ ಸ್ಮಾರ್ಟ್‌ಫೋನ್‌ ಈ ಭಾರಿಯ ಹಬ್ಬದ ಸಂಭ್ರಮವನ್ನು ಇನ್ನಷ್ಟು ರಂಗೇರುವಂತೆ ಮಾಡಿದೆ.ಈ ಫೋಲ್ಡಬಲ್‌ Smart Phone ಮೊಬೈಲ್‌ ಮಾರುಕಟ್ಟೆಗೆ ಹೊಸ ದಿಕ್ಕನ್ನು ತೋರಿಸುವ ಸೂಚನೆ ನೀಡಿದೆ.

OnePlus Open
Image Credit: Digitaltrends

ಒನ್‌ಪ್ಲಸ್‌ ಒಪನ್‌ ಪ್ರೊಸೆಸರ್‌ ಸಾಮರ್ಥ್ಯ

ಒನ್‌ಪ್ಲಸ್‌ ಒಪನ್‌ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ವೇಗವು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 8 Gen 2 SoC ಆಗಿದ್ದು, . ಆಂಡ್ರಾಯ್ಡ್‌ 13 ಔಟ್-ಆಫ್-ದಿ-ಬಾಕ್ಸ್ ಆಧಾರಿತ ಆಕ್ಸಿಜನ್‌OS 13.2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 16GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಮೆಮೊರಿಯನ್ನು 4GB, 8GB ಮತ್ತು 12GB ಯ ಏರಿಕೆಗಳಲ್ಲಿ ವಿಸ್ತರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಒನ್‌ಪ್ಲಸ್‌ ಒಪನ್‌ ಡಿಸ್‌ಪ್ಲೇ ರಚನೆ

OnePlus Open Smart Phone ಹಲವು ವಿಭಿನ್ನತೆಯನ್ನು ಹೊಂದಿದೆ. ಒನ್‌ಪ್ಲಸ್‌ ಒಪನ್‌ ಸ್ಮಾರ್ಟ್‌ಫೋನ್‌ 7.82 ಇಂಚಿನ 2K ಫ್ಲೆಕ್ಸಿ-ಫ್ಲೂಯಿಡ್ LTPO 3.0 ಅಮೋಲೆಡ್‌ ಇನ್ನರ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 2,268×2,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಡಿಸ್‌ಪ್ಲೇ 2,800 ನೀಟ್ಸ್‌ ವರೆಗಿನ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.31 ಇಂಚಿನ ಔಟರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು 1,116×2,484 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ನೀಡಲಿದೆ.

OnePlus Open Smart Phone
Image Credit: Indianexpress

ಒನ್‌ಪ್ಲಸ್‌ ಒಪನ್‌ ವಿಶೇಷ ಕ್ಯಾಮೆರಾ ಹೊಂದಿದೆ

ಒನ್‌ಪ್ಲಸ್‌ ಒಪನ್‌ ಸ್ಮಾರ್ಟ್‌ಫೋನ್‌ Hasselblad-ಬ್ರಾಂಡ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದು 1/1.43-ಇಂಚಿನ Sony LYT-T808 “Pixel Stacked” CMOS ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 64 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ ಹೊಂದಿದೆ. ಇದಲ್ಲದೆ ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಒಳಗೊಂಡಿದೆ. ಇದರೊಂದಿಗೆ ಇನ್ನರ್‌ ಡಿಸ್‌ಪ್ಲೇಯಲ್ಲಿ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಪ್ರೈಮರಿ ಸೆಲ್ಫಿ ಕ್ಯಾಮೆರಾ ಹಾಗೂ ಔಟರ್‌ ಡಿಸ್‌ಪ್ಲೇಯಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಒನ್‌ಪ್ಲಸ್‌ ಒಪನ್‌ ವಿಶೇಷತೆ ಹಾಗು ಬ್ಯಾಟರಿ ಸಾಮರ್ಥ್ಯ

ಒನ್‌ಪ್ಲಸ್‌ ಒಪನ್‌ ಸ್ಮಾರ್ಟ್‌ಫೋನ್‌ ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, GPS/ A-GPS, NFC, Beidou, GPS, GLONASS, Galileo, QZSS ಮತ್ತು USB 3.1 ಸಂಪರ್ಕದೊಂದಿಗೆ USB ಟೈಪ್-C ಪೋರ್ಟ್ ಸೇರಿವೆ. ಈ ಫೋನ್‌ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಜೊತೆಗೆ ಫೇಸ್ ಅನ್‌ಲಾಕ್ ಫೀಚರ್ಸ್‌ ಅನ್ನು ಸಹ ಬೆಂಬಲಿಸುತ್ತದೆ. ಈ Smart Phone 4,800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 67W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಜೊತೆಗೆ ಸ್ಮಾರ್ಟ್‌ಫೋನ್‌ ಬಾಕ್ಸ್‌ನಲ್ಲಿ 80W ವೇಗದ ಚಾರ್ಜರ್‌ನೊಂದಿಗೆ ಬರಲಿದೆ.

OnePlus Open Smart Phone Price
Image Credit: Wired

ಭಾರತದಲ್ಲಿ ಒನ್‌ಪ್ಲಸ್‌ ಒಪನ್‌ ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒನ್‌ಪ್ಲಸ್‌ ಓಪನ್ ಸ್ಮಾರ್ಟ್‌ಫೋನ್‌ ಎಮರಾಲ್ಡ್ ಡಸ್ಕ್ ಮತ್ತು ವಾಯೇಜರ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಒನ್‌ಪ್ಲಸ್‌ ಓಪನ್ ಸ್ಮಾರ್ಟ್‌ಫೋನ್‌ 16GB RAM + 512GB ಮತ್ತು ಸ್ಟೋರೇಜ್ ಕಾನ್ಫಿಗರೇಶನ್‌ ಆಯ್ಕೆಗೆ 1,39,999ರೂ.ಬೆಲೆಯನ್ನು ಹೊಂದಿದೆ. ಈ ಫೋನ್ ಅಕ್ಟೋಬರ್ 27 ರಂದು ಮಾರಾಟಕ್ಕೆ ಲಭ್ಯವಾಗಲಿದೆ.ಈ ಸ್ಮಾರ್ಟ್ ಫೋನ್ ಅನ್ನು ಒನ್‌ಪ್ಲಸ್‌ ಕಂಪೆನಿಯ ಅಧಿಕೃತ ವೆಬ್‌ಸೈಟ್ ನಲ್ಲಿ , ಅಮೆಜಾನ್‌ ಮತ್ತು ದೇಶದಾದ್ಯಂತದ ಚಿಲ್ಲರೆ ಅಂಗಡಿಗಳ ಮೂಲಕ ಖರೀದಿ ಮಾಡಬಹುದು.

Leave A Reply

Your email address will not be published.