Flodable Phone: ಇದೆ ಮೊದಲ ಬಾರಿಗೆ ಫೋಲ್ಡ್ ಮಾಡುವ ಮೊಬೈಲ್ ಲಾಂಚ್ ಮಾಡಿದ OnePlus, ಕಡಿಮೆ ಬೆಲೆಗೆ.
ಮೊಟ್ಟ ಮೊದಲು ಫೋಲ್ಡಬಲ್ ಫೋನ್ ಲಾಂಚ್ ಮಾಡಿದ ಒನ್ಪ್ಲಸ್ ಕಂಪನಿ.
OnePlus Open Smart Phone: ಈಗಿನ ಕಾಲದಲ್ಲಿ ಪ್ರತಿಯೊಬ್ಬ ವ್ಯಕ್ತಿ ಮೊಬೈಲ್ ಅನ್ನು ಬಳಸುತ್ತಾನೆ. ಅದರಲ್ಲಿ ಕೆಲವರಿಗೆ ದೊಡ್ಡ ಆಂಡ್ರಾಯ್ಡ್ ಫೋನ್ ಬೇಕು, ಆದರೆ ಅದನ್ನು ಹಿಡಿದುಕೊಂಡು ತಿರುಗಾಡುವುದು ಕಷ್ಟ. ಅಂತಹ ಜನರಿಗೆ ಇಲ್ಲಿದೆ ಹೊಸ ಫೋನ್ ಮಡಚಿಡುವ OnePlus Open. OnePlus ಕಂಪನಿಯು ತನ್ನ ಪ್ರಮುಖ ಫೋಲ್ಡಬಲ್ ಫೋನ್ ‘OnePlus Open’ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿದೆ.
ಅಕ್ಟೋಬರ್ 19 ರಂದು, ಈ ಫೋನ್ ಭಾರತದಲ್ಲಿ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. OnePlus ಅಕ್ಟೋಬರ್ 19 ರಂದು ಮುಂಬೈನಲ್ಲಿ Open release program ನಡೆಯಲಿದೆ. ಲಾಂಚ್ ಈವೆಂಟ್ ಅನ್ನು ಕಂಪನಿಯ ಸಾಮಾಜಿಕ ಮಾಧ್ಯಮ ಪುಟಗಳಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ.

OnePlus Open ಫೋನ್ ನ ವೈಶಿಷ್ಟತೆಗಳು
ಈಗಾಗಲೇ Oppo ಹಾಗು Samsung ಕಂಪನಿಯು ಮಡಚುವ ಫೋನ್ ಅನ್ನು ಪರಿಚಯಿಸಿದ್ದು, ಈಗ OnePlus ಓಪನ್ ಫೋಲ್ಡಬಲ್ ಫೋನ್ ಅನ್ನು ಪರಿಚಯಿಸಲು ಮುಂದಾಗಿದೆ. ಈ ಫೋನ್ 7.8 ಇಂಚಿನ ಒಳಗಿನ ಡಿಸ್ಪ್ಲೇಯೊಂದಿಗೆ ಬರಬಹುದು. 2K AMOLED ಆಂತರಿಕ ಡಿಸ್ಪ್ಲೇಯನ್ನು ಹೊಂದಿರಬಹುದು. ಡಿಸ್ಪ್ಲೇ ರಿಫ್ರೆಶ್ ರೇಟ್ 120Hz ವರೆಗೆ ಇರುತ್ತದೆ. ಈ ಸಾಧನವು 12GB RAM ಅನ್ನು ಹೊಂದಿದೆ.
OnePlus Open ಫೋನ್ ನ ಕ್ಯಾಮೆರಾ ಹಾಗು ಬ್ಯಾಟರಿ ಪವರ್
OnePlus Open ಫೋನ್ನ ಹಿಂಬದಿ ಕ್ಯಾಮರಾ ಸೆಟಪ್ 48MP, 48MP ಅಲ್ಟ್ರಾವೈಡ್ ಲೆನ್ಸ್, 64MP 3x ಟೆಲಿಫೋಟೋ ಶೂಟರ್ ಕ್ಯಾಮೆರಾಗಳನ್ನು ಒಳಗೊಂಡಿರಬಹುದು. ಫೋನ್ 32MP ಬಾಹ್ಯ ಮತ್ತು 20MP ಆಂತರಿಕ ಸೆಲ್ಫಿ ಕ್ಯಾಮೆರಾಗಳೊಂದಿಗೆ ಡ್ಯುಯಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರಬಹುದು.ಇನ್ನು 4,800mAh ಬ್ಯಾಟರಿಯನ್ನು ಹೊಂದಿದ್ದು ಅದು 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

OnePlus Open ಫೋನ್ ನ ಬೆಲೆ
OnePlus Open ಫೋಲ್ಡಬಲ್ ಫೋನ್ ಬೆಲೆ ಸೋರಿಕೆಯ ಪ್ರಕಾರ, ಸುಮಾರು ರೂ.1 ಲಕ್ಷದಿಂದ ರೂ. 1.2 ಲಕ್ಷದವರೆಗೆ ಇರಬಹುದು. ಆದರೆ ಅಧಿಕೃತ ಬಿಡುಗಡೆಯ ನಂತರವೇ ಫೋನ್ನ ಬೆಲೆಯನ್ನು ಬಹಿರಂಗಪಡಿಸಲಾಗುವುದು ಎಂದು ಕಂಪನಿ ತಿಳಿಸಿದೆ.ನಿಮಗೆ ಹೆಚ್ಚಿನ ಗುಣಮಟ್ಟದ ಫೀಚರ್ಸ್ ಬೇಕಾದರೆ ಈ ಫೋನ್ ಅನ್ನು ಖರೀದಿಸಬಹುದಾಗಿದೆ