Onion Price: ದೀಪಾವಳಿ ಹತ್ತಿರ ಬರುತ್ತಿದ್ದಂತೆ ಈರುಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ, ದೀಪಾವಳಿಗೆ ಕಣ್ಣೀರು ತರಿಸುತ್ತಾ ಈರುಳ್ಳಿ…?
ಈರುಳ್ಳಿ ಬೆಲೆಯಲ್ಲಿ ಬಾರಿ ಏರಿಕೆ, ಜನ ಸಾಮಾನ್ಯರಿಗೆ ಈರುಳ್ಳಿ ಬೆಲೆಯ ಬಿಸಿ ತಾಕಲಿದೆ
Onion Price Hike: ಇತೀಚಿನ ದಿನಗಳ ಹಿಂದೆ ದಿನಸಿ ಹಾಗು ತರಕಾರಿಗಳ ಬೆಲೆ ಗಗನಕ್ಕೇರಿದ್ದು ನೋಡಿದ್ದೇವೆ . ಅಷ್ಟೇ ಅಲ್ಲದೇ ಟೊಮೆಟೊ ಅಂತು ಜನ ತಿನ್ನುವುದನ್ನು ನಿಲ್ಲಿಸುವ ಹಂತಕ್ಕೆ ಬಂದಿತ್ತು. ದಿನದಿಂದ ದಿನಕ್ಕೆ ದಿನಸಿ ತರಕಾರಿಗಳ ಬೆಲೆ ಏರಿಕೆ ಆಗುತ್ತಿರುವುದು ಜನ ಸಾಮಾನ್ಯರಿಗೆ ಜೀವನ ನೆಡೆಸುವುದೇ ಕಷ್ಟಕರವಾಗಿತ್ತು.
ಈಗ ಸ್ವಲ್ಪ ದಿನಗಳಿಂದ ಟೊಮೇಟೊ ಬೆಲೆ ಕಡಿಮೆ ಆಗಿದ್ದು, ಜನ ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡಿದ್ದು, ಈಗ ಇನ್ನೊಂದು ಶಾಕ್ ಎದುರಾಗಿದೆ. ಬಹಳ ದಿನಗಳಿಂದ ಸ್ಥಿರವಾಗಿದ್ದ ತರಕಾರಿ ಬೆಲೆ ಈಗ ಗಗನಕ್ಕೆ ಏರುವ ನಿರೀಕ್ಷೆ ಇದೆ ಎನ್ನಲಾಗಿದೆ. ಅದರಲ್ಲೂ ಈರುಳ್ಳಿ ಬೆಲೆ ಈಗಾಗಲೇ ಏರಿಕೆಯತ್ತ ಸಾಗುತ್ತಿದೆ.
ಕಣ್ಣೀರು ತರಿಸಿದ ಈರುಳ್ಳಿ
ಇನ್ನು ಕೆಲ ದಿನಗಳಲ್ಲಿ ಹಬ್ಬ ಪ್ರಾರಂಭವಾಗಲಿದ್ದು, ದೀಪಾವಳಿಗೆ ಈರುಳ್ಳಿ ಕೈ ಕೊಡುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ ಎನ್ನಲಾಗಿದೆ. ಕಳೆದ ಎರಡು ವಾರಗಳಲ್ಲಿ ದೇಶದ್ಯಂತ ಈರುಳ್ಳಿ ಬೆಲೆ ಕೆ.ಜಿ.ಗೆ 30 ರಿಂದ 70 ಕ್ಕೆ ವೇಗವಾಗಿ ಏರಿಕೆಯಾಗಿದೆ. ಟೊಮೆಟೊ ನಂತರ, ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ಪ್ರಸ್ತುತ ಪ್ರತಿ ಕೆ.ಜಿ.ಗೆ 70 ರೂ.ಗೆ ಮಾರಾಟವಾಗುತ್ತಿರುವುದರಿಂದ ಬೆಲೆ ಏರಿಕೆಯ ಪ್ರವೃತ್ತಿಯನ್ನು ಪಡೆದುಕೊಂಡಿದೆ.
ಈರುಳ್ಳಿ ಬೆಲೆಯಲ್ಲಿ ಬಾರಿ ಏರಿಕೆ
ಕೆಲ ದಿನಗಳಿಂದ ಈರುಳ್ಳಿ ಬೆಲೆ ಏರಿಕೆಯತ್ತ ಸಾಗುತ್ತಿದ್ದು, ಇನ್ನು ಕೆಜಿಗೆ 100 ರೂಪಾಯಿ ದಾಟುವ ಅಂದಾಜಿದೆ. ಕಳೆದ ಕೆಲವು ದಿನಗಳಿಂದ, ನಗರದ ಸಗಟು ಮಾರುಕಟ್ಟೆ ಪ್ರಾಂಗಣಗಳಲ್ಲಿ ಈರುಳ್ಳಿ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಅದರಂತೆ, ಪ್ರತಿ ಕ್ವಿಂಟಾಲ್ ದರವು ಈಗ 4,000 ಕ್ಕೆ ಏರಿದೆ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಬೆಲೆಗಳು ಹೆಚ್ಚಾಗಿದೆ. ನವೆಂಬರ್ ಮೊದಲ ವಾರದ ವೇಳೆಗೆ ಈರುಳ್ಳಿ ಬೆಲೆ ಕೆ.ಜಿ.ಗೆ 100 ರೂ.ಗೆ ತಲುಪಬಹುದು ಎಂದು ಹೇಳಲಾಗುತ್ತಿದೆ.