World Cup: ಹೈದರಾಬಾದ್ ಬಿರಿಯಾನಿ ಮೇಲೆ ಆರೋಪ ಮಾಡಿದ ಪಾಕಿಸ್ತಾನ ಆಟಗಾರರು, ಇದಕ್ಕೆ ಹೈದರಾಬಾದ್ ಬಿರಿಯಾನಿ ಕಾರಣ.

ಪಾಕ್ ಆಟಗಾರ ನಮ್ಮ ಸೋಲಿಗೆ ಹೈದರಾಬಾದಿ ಬಿರಿಯಾನಿ ಕಾರಣ ಎಂದಿದ್ದಾರೆ, ಏನಿದು ಬಿರಿಯಾನಿ ಕಥೆ?

Pakistan Cricket Players About Hyderabad Biryani:ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ಏಕದಿನ ವಿಶ್ವಕಪ್‌ ಗುರುವಾರ ಅ.5 ರಿಂದ ಆರಂಭಗೊಳ್ಳಲಿದೆ. ಪಂದ್ಯಾಟ ಆರಂಭಕ್ಕೂ ಮುನ್ನ ಎಲ್ಲಾ ತಂಡಗಳಿಗೂ ಅಭ್ಯಾಸ ಪಂದ್ಯಗಳಿತ್ತು. ಈ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ಎರಡೂ ಪಂದ್ಯಗಳನ್ನು ಸೋತಿದೆ.

ನ್ಯೂಜೆಲೆಂಡ್‌ ಹಾಗೂ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯಗಳನ್ನು ಪಾಕಿಸ್ತಾನ ಸೋತಿದೆ. ಸೋತಿರುವುದು ಮಾತ್ರವಲ್ಲದೆ ಕಳಪೆ ಫೀಲ್ಡಿಂಗ್‌ ನಿಂದ ಪಾಕಿಸ್ತಾನ ಮುಜುಗರಕ್ಕೊಳಗಾಗಿದೆ. ಪಾಕ್‌ ತಂಡದ ಕಳಪೆ ಕ್ಷೇತ್ರ ರಕ್ಷಣೆಯ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

Pakistan Cricket Players
Image Credit: Asianetnews

ಕಳಪೆ ಫೀಲ್ಡಿಂಗ್‌ ಗೆ ʼ ಹೈದರಾಬಾದಿ ಬಿರಿಯಾನಿʼ ಕಾರಣ”

ಅಭ್ಯಾಸ ಪಂದ್ಯದಲ್ಲಿ ಬಾಬರ್‌ ಅಜಂ ಸಂಪೂರ್ಣ ಇನ್ನಿಂಗ್ಸ್‌ ನಲ್ಲಿ ಮೈದಾನಕ್ಕಿಳಿಯದ ಕಾರಣ ತಂಡವನ್ನು ಶಾದಾಬ್‌ ಖಾನ್‌ ಮುನ್ನಡೆಸಿದ್ದರು. ನಿರೂಪಕ ಹರ್ಷಾ ಭೋಗ್ಲೆ ಕಳಪೆ ಫೀಲ್ಡಿಂಗ್‌ ನಿಂದ ಮುಜುಗರಕ್ಕೊಳಗಾದ ಪಾಕ್‌ ತಂಡಕ್ಕೆ ಈ ಬಗ್ಗೆ ಪ್ರಶ್ನೆ ಕೇಳಿದಾಗ “ನಮ್ಮ ಕಳಪೆ ಫೀಲ್ಡಿಂಗ್‌ ಗೆ ʼ ಹೈದರಾಬಾದಿ ಬಿರಿಯಾನಿʼ ಕಾರಣ”ವೆಂದು ಹೇಳಿದ್ದಾರೆ. ಪಾಕ್‌ ತಂಡ ಭಾರತಕ್ಕೆ ಬಂದಾಗಿನಿಂದ ಪ್ರತಿನಿತ್ಯ ಆಟಗಾರರು ʼಹೈದರಾಬಾದಿ ಬಿರಿಯಾನಿʼಯನ್ನು ಸೇವಿಸುತ್ತಿದ್ದಾರೆ. ಬಿರಿಯಾನಿಯ ರುಚಿ ಹಚ್ಚಿದ್ದರಿಂದ ಕೆಲ ಆಟಗಾರರಿಗೆ ಅದು ಹೆಚ್ಚು ಬೇಕಾಗಿದೆ. ʼ ಹೈದರಾಬಾದಿ ಬಿರಿಯಾನಿʼಯ ರುಚಿ ನಮ್ಮನ್ನು ಸುಲಭವಾಗಿ ಬಿಡುತ್ತಿಲ್ಲ ಎಂದು ಶಾದಾಬ್‌ ಹೇಳಿದ್ದಾರೆ.

Pakistan Cricket Players About Hyderabad Biryani
Image Credit: Timesnownews

ಪಾಕ್ ತಂಡವನ್ನು ಸೋಲಿಸಿದ ಹೈದರಾಬಾದಿ ಬಿರಿಯಾನಿ

ಕೇಳಲು ಸ್ವಲ್ಪ ತಮಷೆ ಅನ್ನಿಸಿದರೂ ನಿಜ ಕೂಡ ಆಗಿರಬಹುದು ಎನ್ನಲಾಗಿದೆ. ಅಭ್ಯಾಸ ಪಂದ್ಯಗಳಲ್ಲಿ ಹೀನಾಯವಾಗಿ ಸೋತ ಪಾಕ್ ತಮ್ಮ ಸೋಲಿಗೆ ಹೈದರಾಬಾದಿ ಬಿರಿಯಾನಿ ಕಾರಣ ಅಂದಿದ್ದಾರೆ. ಬಿರಿಯಾನಿ ರುಚಿ ತುಂಬ ಚೆನ್ನಾಗಿರುವುದರಿಂದ ಜಾಸ್ತಿನೇ ಊಟ ಮಾಡುತ್ತಿದ್ದೀವಿ ಹಾಗಾಗಿ ನಾವು ನಿಧಾನವಾಗಿರಬಹುದು ಎಂದು ಸೋಲಿಗೆ ಕಾರಣವನ್ನು ಪಾಕ್ ತಂಡದ ಆಟಗಾರ ನೀಡಿದ್ದಾರೆ.

Leave A Reply

Your email address will not be published.