Passport: ಹೊಸ ಪಾಸ್ಪೋರ್ಟ್ ಮಾಡುವವರಿಗೆ ಕೇಂದ್ರದಿಂದ ಹೊಸ ನಿಯಮ, ಇನ್ನುಮುಂದೆ ಬಹಳ ಸುಲಭ.
ಪಾಸ್ಪೋರ್ಟ್ ಮಾಡುವವರಿಗೆ ಹೊಸ ನಿಯಮ ಜಾರಿಗೊಳಿಸಿದ ಕೇಂದ್ರ ಸರ್ಕಾರ.
Passport Verification: ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗಲು ಪಾಸ್ಪೋರ್ಟ್ ಬಹಳ ಅವಶ್ಯಕ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ. ಹಲವು ದೇಶದಲ್ಲಿ ಹಲವು ರೀತಿಯ ಪಾಸ್ಪೋರ್ಟ್ ನಿಯಮ ಜಾರಿಯಲ್ಲಿ ಇದ್ದು ಕೆಲವು ನಿಯಮಗಳ ಅಡಿಯಲ್ಲಿ ಜನರಿಗೆ ಪಾಸ್ಪೋರ್ಟ್ ವಿತರಣೆ ಮಾಡಲಾಗುತ್ತದೆ.
ಅದೇ ರೀತಿಯಲ್ಲಿ ನಮ್ಮ ಭಾರತ ದೇಶದಲ್ಲಿ ಪಾಸ್ಪೋರ್ಟ್ ವಿತರಣೆ ಮಾಡಲು ಹಲವು ನಿಯಮಗಳು ಜಾರಿಯಲ್ಲಿ ಇದೆ ಎಂದು ಹೇಳಬಹುದು. ಸದ್ಯ ಕೇಂದ್ರ ಸರ್ಕಾರ ಹೊಸ ಪಾಸ್ಪೋರ್ಟ್ ಮಾಡಿಸುವವರಿಗೆ ಕೆಲವು ಅಗತ್ಯ ನಿಯಮಗಳನ್ನ ಜಾರಿಗೆ ತಂದಿದ್ದು ಈ ನಿಯಮಗಳನ್ನ ಪಾಲಿಸದೆ ಇದ್ದರೆ ಹೊಸ ಪಾಸ್ಪೋರ್ಟ್ ಪಡೆಯಲು ಸಾಧ್ಯವಿಲ್ಲ ಎಂದು ಹೇಳಬಹುದು.

ವಿದೇಶಕ್ಕೆ ಹೋಗಲು ಪಾಸ್ಪೋರ್ಟ್ ಕಡ್ಡಾಯ
ಸದ್ಯ ದೇಶದಲ್ಲಿ ಪಾಸ್ಪೋರ್ಟ್ ನಿಯಮ ಜಾರಿಯಲ್ಲಿ ಇದ್ದು ಸಾಕಷ್ಟು ಜನರು ಹೊಸ ಪಾಸ್ಪೋರ್ಟ್ ಖರೀದಿ ಮಾಡುವ ಸಮಯದಲ್ಲಿ ಕೆಲವು ಅಗತ್ಯ ದಾಖಲೆ ನೀಡದೆ ಪಾಸ್ಪೋರ್ಟ್ ಪಡೆಯುವಲ್ಲಿ ವಂಚಿತರಾಗಿದ್ದಾರೆ. ಇನ್ನು ಈಗ ಕೇಂದ್ರ ಸರ್ಕಾರದ ಪಾಸ್ಪೋರ್ಟ್ ನಿಯಮದಲ್ಲಿ ಐತಿಹಾಸಿಕವೂ ಬದಲಾವಣೆಯನ್ನ ಮಾಡಿದ್ದು ಇನ್ನುಮುಂದೆ ಪಾಸ್ಪೋರ್ಟ್ ಪಡೆಯುವುದು ಬಹಳ ಕಷ್ಟಕರ ಎಂದು ಹೇಳಬಹುದು.
ಪಾಸ್ಪೋರ್ಟ್ ಪಡೆಯುವವರಿಗೆ ಹೊಸ ನಿಯಮ ಹೊರಡಿಸಿದ ಕೇಂದ್ರ
ಹೌದು ಇನ್ನುಮುಂದೆ ಪಾಸ್ಪೋರ್ಟ್ ಸಮಯದಲ್ಲಿ ಅರ್ಜಿಯನ್ನು ಸಲ್ಲಿಸಲು ಜನರು ಡಿಜಿಲಾಕರ್ ಬಳಸಿದರೆ ಯಾವುದೇ ಹಾರ್ಡ್ ಕಾಪಿ ನೀಡುವ ಅಗತ್ಯ ಇರುವುದಿಲ್ಲ. ವೆರಿಫಿಕೇಷನ್ ಸಮಯದಲ್ಲಿ ಡಿಜಿಲಾಕರ್ ಮೂಲಕ ನಿಮ್ಮ ದಾಖಲೆಗಳ ಪರಿಶೀಲನೆ ಮಾಡಲಾಗುತ್ತದೆ ಮತ್ತು ನೀವು ಆ ಸಮಯದಲ್ಲಿ ಯಾವುದೇ ಹಾರ್ಡ್ ಕಾಪಿ ತಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಪಾಸ್ಪೋರ್ಟ್ ವೆರಿಫಿಕೇಷನ್ ಪ್ರಕ್ರಿಯೆಯನ್ನ ಕಡಿಮೆ ಮಾಡುವ ಉದ್ದೇಶದಿಂದ ಈಗ ಕೇಂದ್ರ ಸರ್ಕಾರ ಈ ನಿಯಮವನ್ನ ಜಾರಿಗೆ ತಂದಿರುತ್ತದೆ.

ಡಿಜಿಲಾಕರ್ ಬಳಸಿದರೆ ಕೆಲಸ ಬೇಗನೆ ಆಗುತ್ತದೆ
ಹೌದು ಜನರು ಡಿಜಿಲಿಕಾರ್ ಲಾಗಿನ್ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ಡಿಜಿಲಿಕಾರ್ ನಿಮ್ಮ ನಿಮ್ಮ ದಾಖಲೆಯನ್ನ ಪರಿಶೀಲನೆ ಮಾಡುವ ಕಾರಣ ಕಚೇರಿಯಲ್ಲಿ ವೆರಿಫಿಕೇಷನ್ ಸಮಯ ಬಹಳ ಉಳಿತಾಯ ಆಗುತ್ತದೆ. ಬೌತಿಕ ದಾಖಲೆಗಳ ಪರಿಶೀಲನೆ ಸಮಯ ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈಗ ಹೊಸ ನಿಯಮ ಜಾರಿಗೆ ತಂದಿದ್ದು ಎಲ್ಲಾ ಜನರು ಡಿಜಿಲಾಕರ್ ಬಳಸಿ ಎಂದು ಕೇಂದ್ರ ಮನವಿಯನ್ನ ಕೂಡ ಮಾಡಿಕೊಂಡಿದೆ.
ಡಿಜಿಲಾಕರ್ ಅಂದರೆ ಏನು
ಡಿಜಿಲಿಕಾರ್ ಸರ್ಕಾರ ರಚನೆ ಮಾಡಿರುವ ಒಂದು ಅಪ್ಲಿಕೇಶನ್ ಆಗಿದ್ದು ಈ ಅಪ್ಲಿಕೇಶನ್ ನಲ್ಲಿ ನಿಮ್ಮ ಅಗತ್ಯ ದಾಖಲೆಗಳನ್ನ ಸೇವ್ ಮಾಡಿ ಇಟ್ಟುಕೊಳ್ಳಬಹುದು. ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಜುಕೇಷನಲ್ ದಾಖಲೆ ಹೀಗೆ ಎಲ್ಲಾ ರೀತಿಯ ದಾಖಲೆಗಳನ್ನ ಬಹಳ ಸುರಕ್ಷಿತಾವಾಗಿ ಇಟ್ಟುಕೊಳ್ಳಬಹುದು. ಈ ಅಪ್ಲಿಕೇಶನ್ ಬಳಸುವುದರಿಂದ ಹಲವು ಸರ್ಕಾರೀ ಕೆಲಸಗಳನ್ನ ಹಾರ್ಡ್ ಕಾಪಿ ಮತ್ತು ಜೆರಾಕ್ಸ್ ಇಲ್ಲದೆ ಮಾಡಬಹುದು.