Google Pixel: ಆಪಲ್ ವಾಚ್ ಗೆ ಪೈಪೋಟಿ ಕೊಡಲು ಬಂತು ಗೂಗಲ್ ವಾಚ್, ಕಡಿಮೆ ಬೆಲೆ ಆಕರ್ಷಕ ಫೀಚರ್.
ಆಪಲ್ ವಾಚ್ ಗೆ ಪೈಪೋಟಿ ಕೊಡಲು ಬಂತು ಗೂಗಲ್ ವಾಚ್.
Pixel 8 series and Pixel Watch 2: ಗೂಗಲ್ (Google) ತನ್ನ ಮೇಡ್ ಬೈ ಗೂಗಲ್ ಅನ್ನು ಇಂದು ಸಂಜೆ ಹೋಸ್ಟ್ ಮಾಡಲು ಸಿದ್ಧವಾಗಿದೆ. ಪಿಕ್ಸೆಲ್ ವಾಚ್ 2 (Google Pixel Watch 2) ಜೊತೆಗೆ ಪಿಕ್ಸೆಲ್ 8, ಪಿಕ್ಸೆಲ್ 8 ಪ್ರೊ ಅನ್ನು ಬಿಡುಗಡೆ ಮಾಡುವುದಾಗಿ ಗೂಗಲ್ ಈ ಹಿಂದೆ ದೃಢಪಡಿಸಿತ್ತು. ಆದಾಗ್ಯೂ, ಗೂಗಲ್ ಪಿಕ್ಸೆಲ್ ಬಡ್ಸ್ ಅನ್ನು ಸಹ ಅನಾವರಣಗೊಳಿಸುತ್ತದೆ ಎಂಬ ವದಂತಿಗಳು ಇವೆ.
ಈವೆಂಟ್ನಲ್ಲಿ ಪ್ರೊ 2 ಸಹ ಇದೆ. ಆದರೆ, ಅಧಿಕೃತ ದೃಢೀಕರಣಕ್ಕೆ ಕಾಯಬೇಕಿದೆ. ಈ ಈವೆಂಟ್ ಅನ್ನು ಗೂಗಲ್ನ ಸಾಮಾಜಿಕ ಮಾಧ್ಯಮ ಸೈಟ್ನಲ್ಲಿ ಲೈವ್ಸ್ಟ್ರೀಮ್ ಮಾಡಲಾಗುತ್ತದೆ. ಈವೆಂಟ್ 7:30 PM ಗೆ ಆ ಪ್ರಾರಂಭವಾಗುತ್ತದೆ ಮತ್ತು ಗೂಗಲ್ ನ ವೆಬ್ಸೈಟ್, ಯೂಟ್ಯೂಬ್ ಚಾನಲ್ ಮೂಲಕವೂ ವೀಕ್ಷಣೆ ಮಾಡಲು ಅನುಕೂಲ ಮಾಡಿಕೊಡಲಾಗಿದೆ.

ಭಾರತದಲ್ಲಿ ಪಿಕ್ಸೆಲ್ 8 ಸರಣಿ ಮತ್ತು ಪಿಕ್ಸೆಲ್ ವಾಚ್ 2 ಲಾಂಚ್
ಗೂಗಲ್ ತನ್ನ ಮೇಡ್ ಬೈ ಗೂಗಲ್ ಈವೆಂಟ್ನಲ್ಲಿ ಬಹು ನಿರೀಕ್ಷಿತ 2 Pixel 8 series and Pixel Watch 2 ಅನ್ನು ಭಾರತದಲ್ಲಿ ಅನಾವರಣಗೊಳಿಸಲು ಸಿದ್ಧವಾಗಿದೆ. ಈಗಾಗಲೇ ಭಾರತದಲ್ಲಿ ಈ ಡಿವೈಸ್ಗಳ ಸಂಬಂಧ ಸಾಕಷ್ಟು ಲೀಕ್ ಮಾಹಿತಿ ಹೊರಬಿದ್ದಿದೆ. ಗೂಗಲ್ನ ಮೇಡ್ ಬೈ ಗೂಗಲ್ ಈವೆಂಟ್ನಲ್ಲಿ (Made by Google) ಮೇಲೆ ತಿಳಿಸಿದ ಡಿವೈಸ್ಗಳೊಂದಿಗೆ ಇತರೆ ಡಿವೈಸ್ಗಳ ಬಗ್ಗೆಯೂ ಘೋಷಣೆ ಮಾಡುವ ಸಾಧ್ಯತೆ ಇದೆ. ಅಂದರೆ ಪಿಕ್ಸೆಲ್ ಬಡ್ಸ್ ಪ್ರೊ 2 ಅನ್ನು ಅನ್ನು ಸಹ ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ.
ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್ಫೋನ್ಗಳ ವಿಶೇಷತೆ
ಲಾಂಚ್ ಆಗಲಿರುವ ಫೋನ್ಗಳ ಅಂದರೆ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್ಫೋನ್ಗಳ ಕೆಲವು ಲೀಕ್ ಮಾಹಿತಿ ಗಮನಿಸಿವುದಾದರೆ ಇವು OLED ಡಿಸ್ಪ್ಲೇಗಳೊಂದಿಗೆ ತಲ್ಲೀನಗೊಳಿಸುವ ದೃಶ್ಯ ಅನುಭವವನ್ನು ನೀಡಲು ಸಿದ್ಧವಾಗಿವೆ ಎನ್ನಲಾಗಿದೆ. ಪಿಕ್ಸೆಲ್ 8 6.17 ಇಂಚಿನ ಪರದೆಯನ್ನು ಹೊಂದಿದ್ದರೆ ಪಿಕ್ಸೆಲ್ 8 ಪ್ರೊ 6.8 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ ಎನ್ನಲಾಗಿದೆ. ಉಳಿದಂತೆ ಈ ಎರಡೂ ಫೋನ್ಗಳು ಗೂಗಲ್ ನ ಅತ್ಯಾಧುನಿಕ ಟೆನ್ಸರ್ G3 ಚಿಪ್ನಿಂದ ಕಾರ್ಯನಿರ್ವಹಿಸಲಿವೆ.

ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಸ್ಮಾರ್ಟ್ಫೋನ್ಗಳ ಕ್ಯಾಮೆರಾ ಸಾಮರ್ಥ್ಯ
ಪಿಕ್ಸೆಲ್ 8 ಪ್ರೊ ತನ್ನ ಕ್ಯಾಮೆರಾ ಸೆಟಪ್ ಅನ್ನು 48 MP ಅಲ್ಟ್ರಾವೈಡ್ ಲೆನ್ಸ್ನೊಂದಿಗೆ ಇನ್ನಷ್ಟು ಹೆಚ್ಚಿಗೆ ಮಾಡಿಕೊಂಡಿದೆ. ಆದರೆ, ಪಿಕ್ಸೆಲ್ 8 12 MP ಅಲ್ಟ್ರಾವೈಡ್ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.
ಹೆಚ್ಚುವರಿಯಾಗಿ ಪಿಕ್ಸೆಲ್ 8 ಪ್ರೊ 48MP ಟೆಲಿಫೋಟೋ ಲೆನ್ಸ್ 5x ಜೂಮ್ ಸಾಮರ್ಥ್ಯವನ್ನು ಹೊಂದಿರಲಿದ್ದು, ಬೆರಗುಗೊಳಿಸುವ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಎರಡೂ ಫೋನ್ಗಳು 10.5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿವೆ ಎಂದು ಲೀಕ್ ಆದ ಮಾಹಿತಿಯಿಂದ ತಿಳಿದುಬಂದಿದೆ. ಈ ಸ್ಮಾರ್ಟ್ಫೋನ್ಗಳ ಬೆಲೆ ಕ್ರಮವಾಗಿ $699 (ಅಂದಾಜು 58,000ರೂ.) ಮತ್ತು $899 (ಅಂದಾಜು 75,000ರೂ. ) ಆಗಿರಬಹುದು.