Aawas Scheme: ಸ್ವಂತ ಮನೆ ಇಲ್ಲದವರಿಗೆ ಕೇಂದ್ರದಿಂದ ಇನ್ನೊಂದು ಗುಡ್ ನ್ಯೂಸ್, ಇಂದೇ ಅರ್ಜಿ ಸಲ್ಲಿಸಿ ಮನೆ ಪಡೆದುಕೊಳ್ಳಿ.

ಸ್ವಂತ ಮನೆ ಇಲ್ಲದವರಿಗೆ ಆವಾಸ್ ಯೋಜನೆಯಲ್ಲಿ ಮನೆಗಳ ವಿತರಣೆ.

PM Awas Yojana Application: ಸ್ವಂತ ಮನೆ ಹೊಂದುವ ಕನಸು ಪ್ರತಿಯೊಬ್ಬರಲ್ಲೂ ಇರುತ್ತದೆ. ಆದರೆ ಮನೆಯನ್ನು ಕಟ್ಟಿಕೊಳ್ಳುವ ಸಾಮರ್ಥ್ಯ ಎಲ್ಲರಲ್ಲೂ ಇರುವುದಿಲ್ಲ. ಸ್ವಂತ ಮನೆ ಹೊಂದುವುದು ಆಟದ ವಿಷಯವಲ್ಲ, ಯಾಕೆಂದರೆ ಇಂದಿನ ಹಣದುಬ್ಬರ ಕಾಲದಲ್ಲಿ ದುಡಿದ ಹಣದಲ್ಲಿ ಜೀವನ ನಡೆಸುವುದೇ ಕಷ್ಟ, ಅದರಲ್ಲೂ ಮನೆ ಅಂತ ಅಂದರೆ ಇನ್ನು ಬಹಳ ಕಷ್ಟದ ಸಂಗತಿ ಆಗಿರುತ್ತದೆ. ಹಾಗಂತ ಮನೆ ಇಲ್ಲದೇ ಇರಲು ಕೂಡ ಸಾಧ್ಯ ಇಲ್ಲ.

ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದ ಆರ್ಥಿಕವಾಗಿ ದುರ್ಬಲ ಇರುವ ಜನರ ಜೀವನ ಮಟ್ಟವನ್ನು ಸುಧಾರಿಸಲು ಅನೇಕ ಅದ್ಭುತ ಯೋಜನೆಗಳನ್ನು ನಡೆಸುತ್ತಿವೆ. ದೇಶದಲ್ಲಿ ಮನೆ ಇಲ್ಲದ ಅನೇಕ ಜನರಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತ ಸರ್ಕಾರವು ಬಹಳ ದೊಡ್ಡ ಯೋಜನೆಯನ್ನು ನಡೆಸುತ್ತಿದೆ.

Pradhan Mantri Awas Yojana
Image Credit: GP Jankari

ಪ್ರಧಾನ ಮಂತ್ರಿ ಆವಾಸ್ ಯೋಜನೆ

ಭಾರತ ಸರ್ಕಾರದ ಹಲವು ಯೋಜನೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಹಲವು ಜನರ ಮನೆ ಕಟ್ಟುವ ಕನಸನ್ನು ನನಸಾಗಿಸುವಲ್ಲಿ ಬಹಳ ಪ್ರಮುಖ ಆಗಿದೆ. ಈ ಯೋಜನೆಯಡಿ ಮನೆ ಕಟ್ಟುವವರಿಗೆ ಸರಕಾರ ಆರ್ಥಿಕ ನೆರವು ನೀಡಲಿದೆ. ನೀವು ಸಹ ಪ್ರಧಾನ ಮಂತ್ರಿ ವಸತಿ ಯೋಜನೆಯ ಲಾಭವನ್ನು ಪಡೆಯುವ ಮೂಲಕ ಮನೆ ಕಟ್ಟುವುದಿದ್ದಲ್ಲಿ ಪ್ರಧಾನ ಮಂತ್ರಿ ವಸತಿ ಯೋಜನೆಯ ಅರ್ಹತೆ ಮತ್ತು ಷರತ್ತುಗಳ ಬಗ್ಗೆ ತಿಳಿಯುವುದು ಮುಖ್ಯ ಆಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಲು ಈ ದಾಖಲೆಗಳು ಕಡ್ಡಾಯ

ಪ್ರಧಾನ ಮಂತ್ರಿ ವಸತಿ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ವಯಸ್ಸಿನ ಪ್ರಮಾಣಪತ್ರ, ಪಡಿತರ ಚೀಟಿ, ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು ಮತ್ತು ಪಾಸ್ಪೋರ್ಟ್ ಗಾತ್ರದ ಫೋಟೋ ಇತ್ಯಾದಿಗಳು ಕಡ್ಡಾಯ ಆಗಿದೆ.

PM Awas Yojana Details
Image Credit: Economictimes

ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಷರತ್ತುಗಳು

ಪ್ರಧಾನ ಮಂತ್ರಿ ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸುವವರಿಗೆ ಈಗಾಗಲೇ ಸ್ವಂತ ಮನೆ ಇರುವಂತಿಲ್ಲ ಹಾಗು ಈ ಯೋಜನೆಗೆ ಅರ್ಜಿ ಹಾಕುವ ಕುಟುಂಬದಿಂದ ಯಾರೊಬ್ಬರೂ ಕೂಡ ಸರ್ಕಾರೀ ಹುದ್ದೆಯಲ್ಲಿರಬಾರದು. ಪ್ರಧಾನ ಮಂತ್ರಿ ವಸತಿ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಯ ವಯಸ್ಸ್ಯು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು.

ಇಡಬ್ಲ್ಯೂಎಸ್ ಮತ್ತು ಎಲ್‌ಐಜಿ ವಿಭಾಗದಲ್ಲಿ, ಕುಟುಂಬದ ಮುಖ್ಯಸ್ಥರು ಮಾತ್ರ ಈ ಯೋಜನೆಯ ಲಾಭವನ್ನು ಪಡೆಯುತ್ತಾರೆ. ನೀವು ಇಡಬ್ಲ್ಯೂಎಸ್ ವರ್ಗಕ್ಕೆ ಸೇರಿದವರಾಗಿದ್ದರೆ. ಅಂತಹ ಪರಿಸ್ಥಿತಿಯಲ್ಲಿ ನಿಮ್ಮ ವಾರ್ಷಿಕ ಆದಾಯವು 3 ಲಕ್ಷ ರೂ.ಗಿಂತ ಕಡಿಮೆ ಇರಬೇಕು, ಆಗ ಮಾತ್ರ ನೀವು ಈ ಯೋಜನೆಯ ಲಾಭವನ್ನು ಪಡೆಯಬಹುದು.

Leave A Reply

Your email address will not be published.