Kisan Samman Money: ಎಲ್ಲಾ ರೈತರ ಖಾತೆಗೆ ಕೇಂದ್ರ ಸರ್ಕಾರದಿಂದ 2,000 ರೂ ಜಮಾ, ಈಗ ಬ್ಯಾಂಕ್ ಖಾತೆ ಚೆಕ್ ಮಾಡಿ.

ರೈತರಿಗೆ ಕೇಂದ್ರದಿಂದ ಗುಡ್ ನ್ಯೂಸ್, ಖಾತೆಗೆ ಜಮಾ ಆಗಲಿದೆ ಕಿಸಾನ್ ಸಮ್ಮಾನ್ ಹಣ.

Kisan Samman Scheme Money Credit: ಭಾರತದಲ್ಲಿ ಪ್ರಧಾನಿ ಮೋದಿ (Narendra Modi) ಸರಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತರಲಾಯಿತು ಅದರಲ್ಲಿ ಬಹಳ ಮುಖ್ಯವಾದ ಯೋಜನೆ ಅಂತ ಅಂದರೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆ ಆಗಿದೆ.

ಈ ಯೋಜನೆಯು ಬಹಳ ವರ್ಷಗಳಿಂದ ಸುಸಜ್ಜಿತವಾಗಿ ನಡೆಯುತ್ತಿದ್ದು, ದೇಶದ ಪ್ರತಿಯೊಬ್ಬ ರೈತನ್ನು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಈಗಾಗಲೇ ಈ ಯೋಜನೆಯ 14 ಕಂತಿನ ಹಣ ಫಲಾನುಭವಿಗಳ ಖಾತೆ ಸೇರಿದ್ದು, ಈ ಯೋಜನೆಯ 15 ನೇ ಕಂತಿನ ನಿರೀಕ್ಷೆಯಲ್ಲಿದ್ದವರಿಗೆ ಈಗ ಸರಕಾರ ಸಿಹಿ ಸುದ್ದಿ ನೀಡಿದೆ . ಯೋಜನೆಯ 15ನೇ ಕಂತಿನ ಹಣವನ್ನು ರೈತರ ಖಾತೆಗಳಿಗೆ ವರ್ಗಾಯಿಸಲಾಗಿದೆ.

PM Kisan Samman Nidhi Latest Update
Image Credit: India

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ ಮಾಹಿತಿ

ಕೆಲವು ವಿನಾಯಿತಿಗಳಿಗೆ ಒಳಪಟ್ಟು ಕೃಷಿಯೋಗ್ಯ ಭೂಮಿ ಹೊಂದಿರುವ ದೇಶಾದ್ಯಂತ ಎಲ್ಲಾ ಭೂಮಾಲೀಕ ರೈತ ಕುಟುಂಬಗಳಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯ ಮುಖ್ಯ ಉದ್ದೇಶವೇ ರೈತರಿಗೆ ಆದಾಯ ಬೆಂಬಲವನ್ನು ಒದಗಿಸುವುದಾಗಿದೆ. ಯೋಜನೆಯಡಿಯಲ್ಲಿ, ಪ್ರತಿ ವರ್ಷಕ್ಕೆ 6000 ರೂಪಾಯಿಯನ್ನು ಮೂರು ಮಾಸಿಕ ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಬಿಡುಗಡೆ ಮಾಡಲಾಗುತ್ತದೆ.

ಕಿಸಾನ್ ಸಮ್ಮಾನ್ ನಿಧಿ (PM-KISAN) ಯೋಜನೆಯ 15 ನೇ ಕಂತಿನ ಹಣ ಬಿಡುಗಡೆ

ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ತಮ್ಮ ಹೆಸರಿನಲ್ಲಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಭೂಹಿಡುವಳಿ ರೈತರ ಕುಟುಂಬಗಳು ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಜಾರ್ಖಂಡ್‌ ಭೇಟಿ ವೇಳೆಯಲ್ಲಿ ಪಿಎಂ ಕಿಸಾನ್ ಯೋಜನೆಯ 15 ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂಬ ವರದಿ ಆಗಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಅಡಿಯಲ್ಲಿ 8 ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಹಣವನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಅರ್ಹ ರೈತರಿಗೆ ಸುಮಾರು 18,000 ಕೋಟಿ ರೂ.ಯನ್ನು ಬಿಡುಗಡೆ ಮಾಡಲಾಗಿದೆ.

Kisan Samman Nidhi Yojana
Image Credit: Abplive

ಪಿಎಂ ಕಿಸಾನ್ ಸಮ್ಮಾನ್ ನಿಧಿ 15ನೇ ಕಂತಿನ ಹಣ ಬಂದ ಕುರಿತು ಮಾಹಿತಿ ಪಡೆಯುವ ವಿಧಾನ

ಮೊದಲನೇದಾಗಿ ಅಧಿಕೃತ PM KISAN ವೆಬ್‌ಸೈಟ್ https://pmkisan.gov.in/ ಗೆ ಭೇಟಿ ನೀಡಿ, Payment Success tab ಅಡಿಯಲ್ಲಿ ಭಾರತದ ನಕ್ಷೆ ಕಾಣಿಸುತ್ತದೆ, ಬಲಭಾಗದಲ್ಲಿ, “ಡ್ಯಾಶ್‌ಬೋರ್ಡ್” ಎಂಬ ಹಳದಿ ಬಣ್ಣದ ಟ್ಯಾಬ್ ಇರುತ್ತದೆ, ಡ್ಯಾಶ್‌ಬೋರ್ಡ್ ಮೇಲೆ ಕ್ಲಿಕ್ ಮಾಡಿ, ಕ್ಲಿಕ್ ಮಾಡಿದ ನಂತರ, ಹೊಸ ಪುಟ ತೆರೆಯುತ್ತದೆ, ವಿಲೇಜ್ ಡ್ಯಾಶ್‌ಬೋರ್ಡ್ ಟ್ಯಾಬ್‌ನಲ್ಲಿ, ನಿಮ್ಮ ಸಂಪೂರ್ಣ ವಿವರಗಳನ್ನು ಭರ್ತಿ ಮಾಡಬೇಕು, ರಾಜ್ಯ, ಜಿಲ್ಲೆ, ಉಪಜಿಲ್ಲೆ ಮತ್ತು ಪಂಚಾಯತ್ ಆಯ್ಕೆಮಾಡಿ, ನಂತರ ಶೋ ಬಟನ್ ಕ್ಲಿಕ್ ಮಾಡಿ, ಇದರ ನಂತರ ನೀವು ನಿಮ್ಮ ವಿವರಗಳನ್ನು ಆಯ್ಕೆ ಮಾಡಬಹುದು, ಗೆಟ್ ರಿಪೋರ್ಟ್ ಬಟನ್ ಕ್ಲಿಕ್ ಮಾಡಿ, ಈಗ ನೀವು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಬಹುದು.

PM-KISAN ಯೋಜನೆಗೆ ಇಂಥವರು ಅರ್ಹರಲ್ಲ

PM-KISANನಿಂದ ಹೊರಗಿಡಲ್ಪಟ್ಟವರಲ್ಲಿ ವೈದ್ಯರು, ಇಂಜಿನಿಯರ್‌ಗಳು ಮತ್ತು ವಕೀಲರಂತಹ ವೃತ್ತಿಪರರು ಹಾಗೂ 10,000 ರೂ.ಗಿಂತ ಹೆಚ್ಚಿನ ಮಾಸಿಕ ಪಿಂಚಣಿ ಹೊಂದಿರುವ ನಿವೃತ್ತ ಪಿಂಚಣಿದಾರರು ಮತ್ತು ಕಳೆದ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆ ಪಾವತಿಸಿದವರು, ಸಾಂಸ್ಥಿಕ ಭೂಮಿ ಹೊಂದಿರುವವರು, ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ ರೈತ ಕುಟುಂಬಗಳು, ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತ ಅಧಿಕಾರಿಗಳು ಮತ್ತು ರಾಜ್ಯ ಅಥವಾ ಕೇಂದ್ರ ಸರ್ಕಾರದ ನೌಕರರು ಹಾಗೂ ಸರ್ಕಾರಿ ಸ್ವಾಯತ್ತ ಸಂಸ್ಥೆಗಳು ಸರ್ಕಾರದ ಈ ಯೋಜನೆಯ ಲಾಭ ಪಡೆಯುವಂತಿಲ್ಲ.

Leave A Reply

Your email address will not be published.