PM Kisan: ಕಿಸಾನ್ ಸಮ್ಮಾನ್ ಖಾತೆ ಇದ್ದವರಿಗೆ ಗುಡ್ ನ್ಯೂಸ್, ಈ ದಿನದಂದು ಖಾತೆಗೆ ಬರಲಿದೆ 15 ನೇ ಕಂತಿನ ಹಣ.

ಪಿಎಂ ಕಿಸಾನ್ ಫಲಾನುಭವಿಗಳಿಗೆ ಶುಭ ಸುದ್ದಿ, ಮುಂದಿನ ಕಂತಿನ ಹಣ ಶೀಘ್ರದಲ್ಲಿ ಸಿಗಲಿದೆ.

PM Kisan Yojana 15th Installment: ಪಿಎಂ ಕಿಸಾನ್ ಯೋಜನೆ 2019 ರಲ್ಲಿ (PM Kisan Scheme) ಆರಂಭವಾಗಿದ್ದು, ಇಂದಿಗೂ ಕೂಡ ಈ ಯೋಜನೆಯಡಿ ಜನರ ಖಾತೆಗೆ ಹಣ ಜಮೆ ಆಗುತ್ತಿದೆ. ಒಂದು ವರ್ಷದಲ್ಲಿ ತಲಾ 2,000 ರೂಗಳ ಮೂರು ಕಂತುಗಳ ಹಣ ಬಿಡುಗಡೆ ಮಾಡಲಾಗುತ್ತದೆ. 

ಪಿಎಂ ಕಿಸಾನ್ ಯೋಜನೆಯಲ್ಲಿ ಈವರೆಗೂ 14 ಕಂತುಗಳನ್ನು ರೈತರ ಖಾತೆಗಳಿಗೆ ಕಳುಹಿಸಲಾಗಿದೆ.ಈಗ ನವೆಂಬರ್ 30 ರೊಳಗೆ 15ನೇ ಕಂತಿನ ಹಣ ಬಿಡುಗಡೆ ಆಗಬೇಕಿದೆ.ರೈತರ ವ್ಯವಸಾಯ ಕಾರ್ಯಗಳಿಗೆ ಧನಸಹಾಯ ಒದಗಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ PM Kisan Yojana 15th Installment ಹಣ ಈ ತಿಂಗಳೇ ಬಿಡುಗಡೆ ಆಗುವ ಸಾಧ್ಯತೆ ದಟ್ಟವಾಗಿದೆ.

PM Kisan Yojana 15th Installment
Image Credit: Rajneetpg2022

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಶೀಘ್ರದಲ್ಲಿ ಖಾತೆಗೆ ಜಮೆ ಆಗಲಿದೆ

ಪಿಎಂ ಕಿಸಾನ್ ಯೋಜನೆಯಲ್ಲಿ ಒಂದು ವರ್ಷದಲ್ಲಿ ತಲಾ 2,000 ರೂಗಳ ಮೂರು ಕಂತುಗಳ ಹಣ ಬಿಡುಗಡೆ ಮಾಡಲಾಗುತ್ತದೆ. ಯೋಜನೆಯ 14ನೇ ಕಂತಿನ ಹಣ ಜುಲೈ 27 ರಂದು ಬಿಡುಗಡೆ ಆಗಿತ್ತು. ಈಗ 15ನೇ ಕಂತಿನ ಹಣ ನವೆಂಬರ್ 30 ರೊಳಗೆ ರಿಲೀಸ್ ಆಗಲಿದೆ. ಕೆಲ ವರದಿಗಳ ಪ್ರಕಾರ ನವೆಂಬರ್ 27 ಅಥವಾ 30ರಂದು ರೈತರ ಖಾತೆಗಳಿಗೆ 2,000 ರೂ ಹಣ ಬಿಡುಗಡೆ ಆಗಬಹುದು ಎನ್ನಲಾಗಿದೆ. ಆದರೆ ಸರ್ಕಾರದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಒದಗಿಸಲಾಗಿಲ್ಲ. ಪಿಎಂ ಕಿಸಾನ್ ಪೋರ್ಟಲ್ ​ನಲ್ಲೂ ಮಾಹಿತಿ ನೀಡಲಾಗಿಲ್ಲ.

ಪಿಎಂ ಕಿಸಾನ್ ಯೋಜನೆ ರೈತರ ಯೋಜನೆ ಆಗಿದೆ

ಪಿಎಂ ಕಿಸಾನ್ ಯೋಜನೆ ವ್ಯವಸಾಯ ಮಾಡುವ ರೈತರಿಗೆಂದು ಮಾಡಲಾದ ಸ್ಕೀಮ್ ಇದು. ಅಂದರೆ ಜಮೀನು ಹೊಂದಿರುವ ರೈತರು ಇದರ ಫಲಾನುಭವಿಗಳಾಗಲು ಅರ್ಹರಾಗಿರುತ್ತಾರೆ. ವೃತ್ತಿಪರರು, ಸರ್ಕಾರಿ ನೌಕರರು, ಜನಪ್ರತಿನಿಧಿಗಳು ಇತ್ಯಾದಿಯವರು ಫಲಾನುಭವಿಗಳ ಕುಟುಂಬದಲ್ಲಿ ಇರಬಾರದು ಎಂಬ ಕೆಲ ನಿರ್ಬಂಧಗಳಿವೆ. ಈ ಯೋಜನೆಯು ರೈತರಿಗೆ ಬಹಳ ಉಪಯುಕ್ತವಾಗಿದೆ.

PM Kisan Yojana latest update
Image Credit: Zeebiz

ಇ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಪಟ್ಟಿಯನ್ನು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್​ಸೈಟ್​ ವಿಳಾಸ pmkisan.gov.in ಇದರಲ್ಲಿ ನೋಡಬಹುದಾಗಿದೆ ಹಾಗು ಪಟ್ಟಿಯಲ್ಲಿ ಹೆಸರಿಲ್ಲದಿದ್ದರೆ E-KYC ಮಾಡಿಸಿ ಒಂದು ವೇಳೆ ನೀವು ಯೋಜನೆಗೆ ನೊಂದಾಯಿಸಿದ್ದೂ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಇ ಕೆವೈಸಿ ಮಾಡದೇ ಹೋಗಿರುವ ಸಾಧ್ಯತೆ ಇರುತ್ತದೆ. ಹಾಗಾಗಿ E-KYC ಮಾಡಿಸಿ ಪ್ರತಿ ರೈತರು ಈ ಯೋಜನೆಯಡಿ ಫಲಾನುಭವಿಗಳಾಗಬಹುದು.

Leave A Reply

Your email address will not be published.