Cabinet Meeting: ದೇಶದ ರೈತರಿಗೆ ಗುಡ್ ನ್ಯೂಸ್ ನೀಡಿದ ಮೋದಿ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ.

ರೈತರ ಬೆಳೆಗೆ ಕನಿಷ್ಠ ಬೆಲೆ ನಿಗದಿ ಪಡಿಸಿದ ಕೇಂದ್ರ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಹೇಳಿಕೆ.

PM Modi Cabinet Updates: ಕೇಂದ್ರ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ರೈತರಿಗಾಗಿ ಒಂದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಯಿತು. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ರೈತರ ಕಷ್ಟಗಳಿಗೆ ಬೆಲೆ ನೀಡಲಾಯಿತು.

ಈ ವರ್ಷದ ಹಿಂಗಾರು ಬೆಳೆ ನಷ್ಟದ ಬಗ್ಗೆ ಸಮಾಲೋಚನೆ ನಡೆಸಿ ಬೆಳೆಗಳ ಕನಿಷ್ಠ ದರವನ್ನು ಹೆಚ್ಚಿಸಲಾಗುವುದು ಎಂದು ಹೇಳಲಾಗಿದ್ದು, ಇದು ದೇಶದ ರೈತರಿಗೆ ಕೇಂದ್ರ ಸರ್ಕಾರದಿಂದ ಹಬ್ಬದ ಕೊಡುಗೆ ಆಗಿದೆ. ಹಿಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನ ಹೆಚ್ಚಿಸಿದೆ. 2024-25 ರ ಮಾರುಕಟ್ಟೆ ಋತುವಿನಲ್ಲಿ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ ನೀಡಿದೆ.

Cabinet Meeting 2023
Image Credit: News 18

ಹಿಂಗಾರು ಬೆಳೆ ನಷ್ಟಕ್ಕೆ ಕನಿಷ್ಠ ಬೆಲೆ ಬೆಂಬಲ ನೀಡಿದ ಕೇಂದ್ರ ಸರ್ಕಾರ

ಈ ವರ್ಷದ ಮಳೆ ರೈತರಿಗೆ ಕೈ ಕೊಟ್ಟಿದ್ದು, ಅನೇಕ ಬೆಳೆ ನಾಶವಾಗಿರುತ್ತದೆ. ಇದರಿಂದ ರೈತರಿಗೆ ಬಹಳ ಕಷ್ಟ ಆಗುತ್ತದೆ. ಇದನ್ನು ಮನಗಂಡ ಸರ್ಕಾರ ಹಿಂಗಾರು ಬೆಳೆ ನಷ್ಟಕ್ಕೆ ಬೆಂಬಲ ಬೆಲೆ ನೀಡುವುದಾಗಿ ಕ್ಯಾಬಿನೆಟ್ ಸಭೆಯ ಮುಕ್ತಾಯದ ನಂತರ ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ನಿರ್ಧಾರವನ್ನ ಪ್ರಕಟಿಸಿದ್ದಾರೆ. ಇನ್ನು ಇದೇ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ “ನಾವು ವಿವಿಧ ಕಾರ್ಯಕ್ರಮಗಳನ್ನ ಪ್ರಾರಂಭಿಸಿದ್ದೇವೆ, ಇದು ಬೆಳೆ ಉತ್ಪಾದನೆಯ ಯಶಸ್ಸಿಗೆ ಕಾರಣವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯು 31% ಹೆಚ್ಚಾಗಿದೆ ” ಎಂದು ಹೇಳಿದರು.

ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೀಗಿದೆ

2024-25ನೇ ಸಾಲಿಗೆ ಬಾರ್ಲಿಗೆ ಪ್ರತಿ ಕ್ವಿಂಟಾಲ್ ಗೆ 1,850 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ

* 2024-25ನೇ ಸಾಲಿಗೆ ಪ್ರತಿ ಕ್ವಿಂಟಾಲ್ ಗೆ 6,425 ರೂ.ಗಳ ಕನಿಷ್ಠ ಬೆಂಬಲ ಬೆಲೆ ನೀಡಲು ಸಂಪುಟದ ಅನುಮೋದನೆ

PM Modi Cabinet Updates
Image Credit: Nammakpsc

* 2024-25ನೇ ಸಾಲಿಗೆ ಗೋಧಿಗೆ ಪ್ರತಿ ಕ್ವಿಂಟಾಲ್ ಗೆ 2,275 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ

* 2024-25ನೇ ಸಾಲಿಗೆ ಕುಸುಬೆಗೆ ಪ್ರತಿ ಕ್ವಿಂಟಾಲ್ ಗೆ 5,880 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆ

* 2024-25ನೇ ಸಾಲಿಗೆ ರೇಪ್ ಸೀಡ್, ಸಾಸಿವೆಗೆ ಪ್ರತಿ ಕ್ವಿಂಟಾಲ್ ಗೆ 5,650 ರೂ.ಗಳ ಕನಿಷ್ಠ ಬೆಂಬಲ ಬೆಲೆ ನೀಡಲು ಸಂಪುಟದ ಅನುಮೋದನೆ

* 2024-25ನೇ ಸಾಲಿಗೆ ಪ್ರತಿ ಕ್ವಿಂಟಾಲ್ ಕಡಲೆಗೆ 5,440 ರೂ.ಗಳ ಕನಿಷ್ಠ ಬೆಂಬಲ ಬೆಲೆಗೆ ಸಂಪುಟದ ಅನುಮೋದನೆಈ ರೀತಿಯಾಗಿ ರೈತರ ಬೆಳೆಗಳಿಗೆ ಬೆಲೆ ನಿಗದಿ ಪಡಿಸಲಾಗಿದೆ ಎನ್ನಲಾಗಿದೆ .

Leave A Reply

Your email address will not be published.