Modi Whatsapp: ಜನರಿಗಾಗಿ ವಾಟ್ಸಾಪ್ ಚಾನೆಲ್ ಆರಂಭಿಸಿದ ನರೇಂದ್ರ ಮೋದಿ, ಈ ರೀತಿಯಾಗಿ ಜಾಯಿನ್ ಆಗಿ.
ಪ್ರಧಾನಿ ನರೇಂದ್ರ ಮೋದಿಯವರ ಹೊಸ ವಾಟ್ಸಾಪ್ ಚಾನಲ್, ಲಕ್ಷಾಂತರ followers.
PM Narendra Modi Whatsapp Channel: ಇತ್ತೀಚಿಗಷ್ಟೇ ವಾಟ್ಸಪ್ (WhatsApp) ಚಾನೆಲ್ ಪ್ರಾಂಭವಾಗಿದ್ದು, ಹೆಚ್ಚಿನ ವಾಟ್ಸಪ್ಪ್ ಬಳಕೆಗಾರರು ಚಾನೆಲ್ ಅನ್ನು ಉಪಯೋಗಿಸಲು ಪ್ರಾಂಭಿಸಿದ್ದಾರೆ. ಹಾಗೆಯೆ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ನಿನ್ನೆಯಷ್ಟೇ ಹೊಸ ವಾಟ್ಸಾಪ್ ಚಾನಲ್ ಪ್ರಾಂಭಿಸಿದ್ದು, ಒಂದೇ ದಿನದಲ್ಲಿ 10 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಹೊಂದಿದ್ದಾರೆ .
ಹೊಸ ಸಂಸತ್ ಭವನದ ಬಗ್ಗೆ ಅವರು ಹಾಕಿದ ಮೊದಲ ಪೋಸ್ಟ್ಗೆ ಲಕ್ಷಕ್ಕೂ ಹೆಚ್ಚು ಮಂದಿ ರಿಯಾಕ್ಟ್ ಮಾಡಿದ್ದಾರೆ. ಇದು ನರೇಂದ್ರ ಮೋದಿ (Narendra Modi) ಅವರ ಜನಪ್ರಿಯತೆಗೆ ಕನ್ನಡಿ ಹಿಡಿದಂತಿದೆ.
ಲಕ್ಷಾಂತರ followers ಹೊಂದಿರುವ ಪ್ರಧಾನಿ ಮೋದಿ
ಸೆಪ್ಟೆಂಬರ್ 20 ,2023 ರಂದು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಗೆ ಕನ್ನಡಿ ಹಿಡಿಯುಂತೆ ಅವರ ಹೊಸ Whatsapp Channels ಭರ್ಜರಿ ಸ್ಪಂದನೆ ಸಿಕ್ಕಿದೆ. ಒಂದೇ ದಿನದಲ್ಲಿ ಪ್ರಧಾನಿಯವರ ವಾಟ್ಸಾಪ್ ಚಾನಲ್ಗೆ 10 ಲಕ್ಷಕ್ಕೂ ಹೆಚ್ಚು ಫಾಲೋಯರ್ಸ್ ಬಂದಿದ್ದಾರೆ. ಜನರ ಜೊತೆ ಸಂಪರ್ಕದಲ್ಲಿರಲು ಮತ್ತು ಸಂವಾದ ನಡೆಸಲು ಪ್ರಧಾನಿಗಳು ಸಾಧ್ಯವಿರುವ ಎಲ್ಲಾ ಸಂವಹನ ಮಾಧ್ಯಮಗಳನ್ನು ಬಳಸುತ್ತಿದ್ದಾರೆ.
ವಾಟ್ಸಾಪ್ನಿಂದ ಹಿಡಿದು ರೇಡಿಯೋವರೆಗೂ ಅವರು ನಿಯಮಿತವಾಗಿ ಪೋಸ್ಟ್ ಮಾಡುತ್ತಿರುತ್ತಾರೆ. ನರೇಂದ್ರ ಮೋದಿ ಅವರ ಆ ಮೊದಲ ಪೋಸ್ಟ್ಗೆ ಸುಮಾರು ಒಂದೂವರೆ ಲಕ್ಷದಷ್ಟು ಮಂದಿ ರಿಯಾಕ್ಷನ್ ಕೊಟ್ಟಿದ್ದಾರೆ. ಇಲ್ಲಿಯವರೆಗೆ ಅವರ ಚಾನಲ್ ಅನ್ನು ಫಾಲೋ ಮಾಡುತ್ತಿರುವವರ ಸಂಖ್ಯೆ 10 ಲಕ್ಷ ಗಡಿದಾಟಿ ಹೋಗಿದೆ.
ಸಂಸತ್ ಭವನದ ಹೊಸ ಪೋಸ್ಟ್
ಪ್ರಧಾನಿಗಳು ನಿನ್ನೆ ವಾಟ್ಸಾಪ್ ಚಾನಲ್ನಲ್ಲಿ ಹಾಕಿದ ಮೊದಲ ಪೋಸ್ಟ್ ಹೊಸ ಸಂಸತ್ ಭವನದ್ದಾಗಿತ್ತು. ಕಟ್ಟಡದ ಚಿತ್ರವನ್ನು ಲಗತ್ತಿಸಿದ ಅವರು, ‘ವಾಟ್ಸಾಪ್ ಕಮ್ಯೂನಿಟಿಯ ಭಾಗವಾಗಲು ಖುಷಿ ಆಗುತ್ತಿದೆ. ನಮ್ಮ ನಡುವಿನ ಸಂವಾದವನ್ನು ಮುಂದುವರಿಸಲು ಇದು ಒಂದು ಹೆಜ್ಜೆ ಮುಂದೆ ತರುತ್ತದೆ. ಈ ಸಂಪರ್ಕವನ್ನು ಹೀಗೆ ಜೀವಂತವಾಗಿರಿಸೋಣ. ಹೊಸ ಸಂಸದತ್ ಭವನದ ಚಿತ್ರ ಇಲ್ಲಿದೆ’ ಎಂದು ಬರೆದಿದ್ದಾರೆ.
ವಾಟ್ಸಾಪ್ ಚಾನಲ್ ಆರಂಭಿಸುವುದು ಹೇಗೆ?
ಈ ಫೀಚರ್ ಇನ್ನೂ ಎಲ್ಲರಿಗೂ ನೀಡಿಲ್ಲ. ನಿಮಗೆ ಈ ಫೀಚರ್ ಲಭ್ಯವಾಗಿದೆಯಾ ಎಂಬುದನ್ನು ನೋಡಲು ವಾಟ್ಸಾಪ್ನ ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಆಗಬೇಕು. ವಾಟ್ಸಾಪ್ ವೆಬ್ ಓಪನ್ ಮಾಡಿದರೆ ಚಾನಲ್ ಐಕಾನ್ ಕಾಣುತ್ತದೆ. ಅದನ್ನು ಕ್ಲಿಕ್ ಮಾಡಿ ಪ್ಲಸ್ ಚಿಹ್ನೆ (+) ಮೇಲೆ ಕ್ಲಿಕ್ ಮಾಡಿ ಚಾನಲ್ ಕ್ರಿಯೇಟ್ ಮಾಡಬಹುದು. ಚಾನಲ್ ಹೆಸರು, ವಿವರ, ಐಕಾನ್ ಇತ್ಯಾದಿಯನ್ನು ಸೇರಿಸಿ ನಿಮ್ಮದೇ ಹೊಸ ವಾಟ್ಸಾಪ್ ಚಾನಲ್ ಆರಂಭಿಸಬಹುದು.
ವಾಟ್ಸಾಪ್ ಚಾನಲ್ ಅನ್ನು ನೀವು ಫಾಲೋ ಮಾಡಿದರೆ ನಿಮ್ಮ ಫೋನ್ ನಂಬರ್ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಚಾನಲ್ ಅಡ್ಮಿನ್ಗೂ ಕೂಡ ನಿಮ್ಮ ಫೋನ್ ನಂಬರ್ ಗೊತ್ತಾಗುವುದಿಲ್ಲ. ಅಷ್ಟರಮಟ್ಟಿಗೆ ಇದು ಗೌಪ್ಯತೆ ಹೊಂದಿರುತ್ತದೆ. ಈ ವಿಚಾರದಲ್ಲಿ ವಾಟ್ಸಾಪ್ ಕಮ್ಯೂನಿಟಿಗಿಂತ ಚಾನಲ್ಸ್ ಭಿನ್ನ ಎನಿಸುತ್ತದೆ.