Pneumonia Disease: ಸಾವಿರಾರು ಮಕ್ಕಳಲ್ಲಿ ಕಾಣಿಸಿಕೊಂಡ ಹೊಸ ರೋಗ, ಆತಂಕದಲ್ಲಿ ಮಕ್ಕಳಿರುವ ಪೋಷಕರು.

ಇನ್ನೊಂದು ಹೊಸ ರೋಗ ಮಕ್ಕಳಲ್ಲಿ ಕಾಣಿಸಿಕೊಂಡಿದ್ದು ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.

Pneumonia Disease In Kids: ವಿಶ್ವದ ದೇಶದಲ್ಲಿ ಕರೋನ ವೈರಸ್ ಅಟ್ಟಹಾಸ ಈಗ ನೆನಪಿಸಿಕೊಂಡರು ಮೈ ಜುಮ್ ಅನ್ನಿಸುತ್ತದೆ. ಯಾಕೆಂದರೆ ಈ ವೈರಸ್ ನಿಂದಾಗಿ ಹಲವಾರು ಸಾವು ನೋವುಗಳು ಸಂಭವಿಸಿದೆ. ಈಗ ಈ ವೈರಸ್ ನಿಂದ ಸ್ವಲ್ಪ ರಿಲೀಫ್ ಸಿಕ್ಕಿದೆ ಅಂದ ಕೂಡಲೇ ಇನ್ನೊಂದು ವೈರಸ್ ತಲೆ ಎತ್ತಿದೆ ಎಂಬ ಮಾಹಿತಿ ಹೊರಬೀಳುತ್ತಿದೆ.

ಕರೋನ ವೈರಸ್ ಸಾಂಕ್ರಾಮಿಕ ರೋಗದ ಜನ್ಮಸ್ಥಳವಾದ ಚೀನಾದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗ ಹೊರಹೊಮ್ಮುತ್ತಿದೆ. ಚೀನಾದ ಶಾಲೆಗಳಲ್ಲಿ ನಿಗೂಢ ನ್ಯುಮೋನಿಯಾ ಕಾಯಿಲೆ ಹೆಚ್ಚುತ್ತಿದೆ ಎನ್ನಲಾಗಿದ್ದು, ಬೀಜಿಂಗ್ ಮತ್ತು ಲಿಯೋನಿಂಗ್ ನ ಆಸ್ಪತ್ರೆಗಳು ಪೀಡಿತ ಮಕ್ಕಳಿಂದ ತುಂಬಿವೆ ಎನ್ನಲಾಗಿದೆ.

Pneumonia Disease
Image Credit: Boldsky

ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿರುವ ಆರೋಗ್ಯ ಸಮಸ್ಯೆ

ಸ್ಥಳೀಯ ಮಾಧ್ಯಮಗಳ ಪ್ರಕಾರ, ಚೀನಾದ ಶಾಲೆಗಳಲ್ಲಿನ ಮಕ್ಕಳು ಬಹಳ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ವರದಿ ಬಂದಿದೆ. ಇಲ್ಲಿನ ಶಾಲಾ ಮಕ್ಕಳು ಹೆಚ್ಚಿನ ಜ್ವರ ಮತ್ತು ಶ್ವಾಸಕೋಶದ ಉರಿಯೂತದಂತಹ ಅಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿದ್ದಾರೆ. ಕೆಮ್ಮು ಮತ್ತು ಇತರ ರೋಗಲಕ್ಷಣಗಳು ಯಾವುದೇ ಕಂಡುಬರುವುದಿಲ್ಲ. ಈ ಒಂದು ವರದಿ ಪ್ರಕಾರ ಈ ರೋಗದ ಲಕ್ಷಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎನ್ನಲಾಗಿದೆ.

Pneumonia Disease In Kids
Image Credit: Boldsky

ಶಾಲೆಗಳನ್ನು ಮುಚ್ಚಲಾಗಿದೆ

ಚೀನಾದಲ್ಲಿ ನಿಗೂಢ ನ್ಯುಮೋನಿಯಾ ಹರಡುತ್ತಿರುವುದರಿಂದ ಶಾಲೆಗಳನ್ನು ಮುಚ್ಚುವುದು ಅನಿವಾರ್ಯವಾಗಿದೆ. ಈ ಕಾಯಿಲೆಯಿಂದ ಬೀಜಿಂಗ್ ಮತ್ತು ಲಿಯೋನಿಂಗ್ ಆಸ್ಪತ್ರೆಗಳು ತೀವ್ರ ಒತ್ತಡದಲ್ಲಿವೆ. ವಯಸ್ಕರು ಸೋಂಕಿಗೆ ಒಳಗಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಅದು ಬಹಿರಂಗಪಡಿಸಿಲ್ಲ. ಇದು ಮತ್ತೊಂದು ಸಾಂಕ್ರಾಮಿಕ ರೋಗವಾಗಿ ಬದಲಾಗುತ್ತದೆಯೇ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಇನ್ನು ಈ ಕಾಯಿಲೆಯ ಪ್ರಮಾಣ ಇಲ್ಲಿಗೆ ಕಡಿಮೆ ಆದರೆ ಉತ್ತಮ, ಇಲ್ಲ ಅಂತಾದರೆ ಎಲ್ಲಾ ದೇಶಗಳು ಇದರ ಪರಿಣಾಮ ಎದುರಿಸಬೇಕಾಗಬಹುದು ಎಂದು ವರದಿ ಹೇಳುತ್ತದೆ.

Leave A Reply

Your email address will not be published.