Insurance Scheme: ಅಂಚೆ ಕಚೇರಿಯ ಈ ಯೋಜನೆಯಲ್ಲಿ 399 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ 10 ಲಕ್ಷ ರೂ.

ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಸಿಗಲಿದೆ 10 ಲಕ್ಷ ಕವರೇಜ್.

Post Office Insurance Scheme: ಅಂಚೆ ಇಲಾಖೆಯಲ್ಲಿ ಹಲವು ರೀತಿಯ ವಿಮಾ ಪಾಲಿಸಿಯ ಸೌಲಭ್ಯ ಇದೆ. ವಿಮೆ ಎಂಬುದು ಪ್ರತಿಯೊಬ್ಬ ಮನುಷ್ಯನಿಗೂ ಬಹಳ ಮುಖ್ಯ ಆಗಿದೆ, ಯಾಕೆಂದರೆ ಜೀವನದಲ್ಲಿ ಸಂಭವಿಸುವ ಆಕಸ್ಮಿಕ ಅಪಘಾತ, ಆರೋಗ್ಯ ಸಮಸ್ಯೆ ಗಳಿಗೆ ವಿಮೆ ಬಹಳ ಸಹಾಯಕ ಆಗಲಿದೆ.

ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲು ವಿಮೆ ಬಹಳ ಮುಖ್ಯ ಆಗಿದೆ. ಹಾಗೆಯೆ ವಿಮೆ ಅಂದ ಕೂಡಲೇ ಜನರ ಮನಸ್ಸಿಗೆ ಬರುವುದು ಅಧಿಕ ಹಣ ಪಾವತಿ ಮಾಡಬೇಕು ಅನ್ನುವುದು . ಅದು ನಿಜವಲ್ಲ, ಅಂಚೆ ಇಲಾಖೆಯಲ್ಲಿ ಕಡಿಮೆ ಹೂಡಿಕೆ ಮಾಡಿ ಈ ವಿಮೆಯನ್ನು ಮಾಡಬಹುದಾಗಿದೆ.

Accidental Insurance Policy
Image Credit: Original Source

ಅಂಚೆ ಕಚೇರಿಯ ಸುರಕ್ಷಾ ಪಾಲಿಸಿಯು ಆರೋಗ್ಯ, ಜೀವ, ಅಪಘಾತ ವಿಮೆಯಾಗಿದೆ.

ಅಂಚೆ ಇಲಾಖೆಯ ಬಹಳ ಪ್ರಮುಖ ಯೋಜನೆಗಳಲ್ಲಿ ಈ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಯಲ್ಲಿ ಸಮಗ್ರ ಅಪಘಾತ ಸುರಕ್ಷೆಯೊಂದಿಗೆ ನೀವು ಒಂದು ಅಪಘಾತದಿಂದ ಉಂಟಾಗುವ ದೈಹಿಕ ಹಾಗೂ ಹಣಕಾಸಿನ ಅಡಚಣೆಗಳನ್ನು ಎದುರಿಸಲು ಸನ್ನದ್ಧರಾಗಿರಬಹುದಾಗಿದೆ. ಅಂಚೆ ಕಚೇರಿಯ ಸಮೂಹ ಅಪಘಾತ ಸುರಕ್ಷಾ ಪಾಲಿಸಿಯನ್ನು ಖರೀದಿ ಮಾಡಿದರೆ, ನೀವು ಕಡಿಮೆ ಮೊತ್ತದಲ್ಲಿಯೇ ಅಪಘಾತ ವಿಮೆಯನ್ನು ಪಡೆದುಕೊಳ್ಳಬಹುದಾಗಿದೆ.

ಅಂಚೆ ಇಲಾಖೆಯ 399 ರೂಪಾಯಿಯ ವಿಮಾ ಪಾಲಿಸಿ

ಅಂಚೆ ಇಲಾಖೆಯ 399 ರೂಪಾಯಿಯ ವಿಮಾ ಪಾಲಿಸಿಯಲ್ಲಿ ತೆರಿಗೆಯ ಬಳಿಕ ಪ್ರೀಮಿಯಂ 399 ರೂಪಾಯಿ ಆಗಿರುತ್ತದೆ. ಅಪಘಾತದಲ್ಲಿ ಸಾವನ್ನಪ್ಪಿದರೆ 10 ಲಕ್ಷ ರೂಪಾಯಿ ಕವರೇಜ್ ಇದೆ. ಶಾಶ್ವತ ಸಂಪೂರ್ಣ ವೈಕಲ್ಯವಾದರೂ 10 ಲಕ್ಷ ರೂಪಾಯಿ ಕವರೇಜ್ ಇದೆ. ಶಾಶ್ವತ ಭಾಗಶಃ ವೈಕಲ್ಯವಾದರೂ ಹತ್ತು ಲಕ್ಷ ರೂಪಾಯಿ ಕವರೇಜ್ ಇದೆ. ಅಪಘಾತದಿಂದ ಅಂಗಾಂಗಛೇದನ ಮತ್ತು ಪಾರ್ಶ್ವವಾಯು ಹತ್ತು ಲಕ್ಷ ರೂಪಾಯಿ ಕವರೇಜ್ ಇದೆ.

Post Office Insurance Policy
Image Credit: APY News

ಅಪಘಾತವಾಗಿ ಒಳರೋಗಿ ವಿಭಾಗದಲ್ಲಿದ್ದರೆ, ವೈದ್ಯಕೀಯ ವೆಚ್ಚಗಳು ಕೂಡಾ ಕವರ್ ಆಗುತ್ತದೆ. ಅಪಘಾತವಾದ ಬಳಿಕ ಹೊರರೋಗಿಯಾಗಿದ್ದರೆ ವೈದ್ಯಕೀಯ ವೆಚ್ಚಗಳು ಕವರ್ ಆಗುತ್ತದೆ. ಹೊರರೋಗಿಯಾಗಿದ್ದರೆ 30 ಸಾವಿರ ರೂಪಾಯಿವರೆಗೆ ಅಥವಾ ಕ್ಲೇಮ್‌ನ ಮೊತ್ತ ಎಷ್ಟು ಇದೆಯೋ, ಈ ಪೈಕಿ ಯಾವುದು ಕಡಿಮೆ ಅಷ್ಟು ಕವರ್ ಆಗುತ್ತದೆ.

ಈ ಪಾಲಿಸಿಯಲ್ಲಿ ಶೈಕ್ಷಣಿಕ ಪ್ರಯೋಜನವೂ ಕೂಡ ಇದೆ

ಆಕಸ್ಮಿಕ ಮರಣ / ಶಾಶ್ವತ ಸಂಪೂರ್ಣ ಅಂಗವೈಕಲ್ಯವಾದಲ್ಲಿ ಸಂಪೂರ್ಣ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. ಗರಿಷ್ಠ ಇಬ್ಬರು ಮಕ್ಕಳಿಗೆ ವಿಮಾ ಮೊತ್ತದ ಶೇಕಡ 10 ರಷ್ಟು ಅಥವಾ 1 ಲಕ್ಷ ರೂಪಾಯಿ ಅಥವಾ ನೈಜ ಮೊತ್ತ, ಇವುಗಳನ್ನು ಯಾವುದು ಕಡಿಮೆಯೋ ಅದು ಲಭ್ಯವಾಗುತ್ತದೆ. ನೀವು ಆಸ್ಪತ್ರೆಯಲ್ಲಿದ್ದರೆ ಹತ್ತು ದಿನಗಳವರೆಗೆ ದಿನಕ್ಕೆ 1000 ರೂಪಾಯಿ ಲಭ್ಯವಾಗುತ್ತದೆ.

ಕುಟುಂಬದವರಿಗೆ ಸಾರಿಗೆ ವೆಚ್ಚ ಕೂಡಾ ಕವರ್ ಆಗುತ್ತದೆ. 25 ಸಾವಿರ ರೂಪಾಯಿ ಅಥವಾ ನೈಜ ಮೊತ್ತ, ಇವುಗಳಲ್ಲಿ ಯಾವುದು ಕಡಿಮೆಯೋ ಅದು ಕವರ್ ಆಗುತ್ತದೆ. ಅಂತಿಮ ಸಂಸ್ಕಾರಕ್ಕೆ ನೆರವು ಲಭ್ಯವಾಗಲಿದೆ. ಐದು ಸಾವಿರ ರೂಪಾಯಿ ಅಥವಾ ನೈಜ ಮೊತ್ತದಲ್ಲಿ ಯಾವುದು ಕಡಿಮೆಯೋ ಅದು ಲಭ್ಯವಾಗುತ್ತದೆ.

Leave A Reply

Your email address will not be published.