Post Office Scheme : ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ವಾರ್ಷಿಕವಾಗಿ ಸಿಗಲಿದೆ 1 ಲಕ್ಷಕ್ಕೂ ಅಧಿಕ ಹಣ, ಇಂದೇ ಯೋಜನೆಗೆ ಸೇರಿ.

ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡುವ ಪ್ಲಾನ್ ಹೊಂದಿದವರು, ಈ ಯೋಜನೆಯ ಸಂಪೂರ್ಣ ಮಾಹಿತಿ ಪಡೆಯಿರಿ.

Post Office Monthly Income Scheme Profit: ಪ್ರತಿಯೊಬ್ಬರು ತಮ್ಮ ಮುಂದಿನ ಭವಿಷ್ಯದ ಒಳಿತಿಗಾಗಿ ಆದಾಯದಲ್ಲಿ ಒಂದಿಷ್ಟನ್ನು ಹೂಡಿಕೆ ಮಾಡುವುದು ಸಹಜ. ಆದರೆ ಎಲ್ಲಿ ಹೂಡಿಕೆ ಮಾಡಬೇಕು, ಹೇಗೆ ಮಾಡಬೇಕು ಅನ್ನುವುದು ಸಹ ಬಹಳ ಮುಖ್ಯ ಆಗಿರುತ್ತದೆ.

ಹೂಡಿಕೆಗೆ ಬಹಳ ಸುರಕ್ಷಿತ ಮಾರ್ಗ ವೆಂದರೆ ಸರ್ಕಾರಿ ಸಂಸ್ಥೆ ಆದ ಪೋಸ್ಟ್ ಆಫೀಸ್. ಪೋಸ್ಟ್ ಆಫೀಸ್ (Post Office) ಅನೇಕ ಉಪಯುಕ್ತವಾದ ಯೋಜನೆಗಳನ್ನು ಹೊಂದಿದೆ. ಅದರಲ್ಲಿ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಬಹಳ ಮಹತ್ವವನ್ನು ಹೊಂದಿದೆ. ಈ ಯೋಜನೆಯಡಿ, ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದಾಗಿದೆ. ಅದೇ ಸಮಯದಲ್ಲಿ, ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಪ್ರಸ್ತುತ ಬಡ್ಡಿ ದರವು ವಾರ್ಷಿಕವಾಗಿ ಶೇಕಡ 7.4 ಆಗಿರುತ್ತದೆ. 

post office monthly income scheme
Image Credit: Wintwealth

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ
ಒಂದು ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಹೂಡಿಕೆ ಮಾಡಿ, ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಪ್ರಸ್ತುತ ಬಡ್ಡಿ ದರವು ವಾರ್ಷಿಕವಾಗಿ ಶೇಕಡ 7.4 ಆಗಿದ್ದು,ನೀವು ಈ ಖಾತೆಯಲ್ಲಿ ಪಡೆಯುವ ಬಡ್ಡಿಯನ್ನು ಪ್ರತಿ ತಿಂಗಳು ನಿಮ್ಮ ಅಂಚೆ ಕಚೇರಿ ಉಳಿತಾಯ ಖಾತೆಗೆ ಪಾವತಿಸಲಾಗುತ್ತದೆ.

5 ವರ್ಷಗಳ ಮೆಚ್ಯೂರಿಟಿ ಅವಧಿಯ ಬಳಿಕ ಒಟ್ಟು ಅಸಲು ಮೊತ್ತವನ್ನು ಹಿಂಪಡೆಯಬಹುದು. ಈ ಯೋಜನೆಯನ್ನು ಇನ್ನೂ 5-5 ವರ್ಷಗಳವರೆಗೆ ವಿಸ್ತರಿಸಬಹುದು. ಪ್ರತಿ 5 ವರ್ಷಗಳ ನಂತರ, ಮೂಲ ಮೊತ್ತವನ್ನು ಹಿಂಪಡೆಯಲು ಅಥವಾ ಯೋಜನೆಯನ್ನು ವಿಸ್ತರಿಸಲು ಆಯ್ಕೆ ಇರುತ್ತದೆ.

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಜಂಟಿಯಾಗಿ ಲಾಭ ಪಡೆಯಬಹುದಾಗಿದೆ

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪತಿ ಹಾಗು ಪತ್ನಿ ಜಂಟಿಯಾಗಿ ಖಾತೆ ತೆರೆಯಬಹುದಾಗಿದೆ . ಪತಿ ಪತ್ನಿ ಜಂಟಿ ಖಾತೆ ತೆರೆದು ಅದರಲ್ಲಿ 15 ಲಕ್ಷ ರೂಪಾಯಿ ಪಡೆಯಬಹುದಾಗಿದೆ. ಇದರ ಮೇಲೆ ಬಡ್ಡಿಯನ್ನು ಶೇಕಡ 7.4ರ ಬಡ್ಡಿದರದಂತೆ ವಾರ್ಷಿಕ 1,11,000 ರೂಪಾಯಿ ಪಡೆಯಬಹುದಾಗಿದೆ. ಇದನ್ನು 12 ತಿಂಗಳಿಗೆ ಭಾಗಿಸಿದರೆ ಪ್ರತಿ ತಿಂಗಳು 9,250 ರೂಪಾಯಿ ಆದಾಯ ಸಿಗುತ್ತದೆ.

ಅಂಚೆ ಕಚೇರಿ ನಿಯಮಗಳ ಪ್ರಕಾರ, ಎಐಎಸ್‌ನಲ್ಲಿ ಎರಡು ಅಥವಾ ಮೂರು ಜನರು ಜಂಟಿ ಖಾತೆಯನ್ನು ತೆರೆಯಬಹುದು. ಖಾತೆಗೆ ಬಂದ ಆದಾಯವನ್ನು ಪ್ರತಿಯೊಬ್ಬ ಸದಸ್ಯರಿಗೂ ಸಮನಾಗಿ ನೀಡಲಾಗುತ್ತದೆ. ಜಂಟಿ ಖಾತೆಯನ್ನು ಯಾವುದೇ ಸಮಯದಲ್ಲಿ ಒಂದೇ ಖಾತೆಯಾಗಿ ಪರಿವರ್ತಿಸಬಹುದು. ಏಕ ಖಾತೆಯನ್ನು ಜಂಟಿ ಖಾತೆಯಾಗಿಯೂ ಪರಿವರ್ತಿಸಬಹುದು.

Post Office Monthly Income Scheme Profit
Image Credit: Samacharjagat

ಚಿಕ್ಕ ಮಗುವಿನಿಂದ, ಹಿರಿಯ ನಾಗರಿಕರು ಯಾರು ಬೇಕಾದರೂ ಈ ಯೋಜನೆಯ ಖಾತೆ ತೆರೆಯಬಹುದು

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ದೇಶದ ಯಾವುದೇ ನಾಗರಿಕರು ಖಾತೆಯನ್ನು ತೆರೆಯಬಹುದು. ಮಗುವಿನ ಹೆಸರಲ್ಲೂ ಖಾತೆ ತೆರೆಯಬಹುದು. ಮಗುವಿನ ವಯಸ್ಸು 10 ವರ್ಷಕ್ಕಿಂತ ಕಡಿಮೆಯಿದ್ದರೆ, ಪೋಷಕರು ಅಥವಾ ಕಾನೂನು ಪಾಲಕರು ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಬಹುದು.

ಮಗುವಿಗೆ 10 ವರ್ಷ ವಯಸ್ಸಾದಾಗ, ಖಾತೆಯನ್ನು ಸ್ವತಃ ನಿರ್ವಹಿಸುವ ಹಕ್ಕನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಎಂಐಎಸ್‌ ಖಾತೆಗಾಗಿ ನೀವು ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ಹೊಂದಿರಬೇಕು. ಗುರುತಿನ ಪುರಾವೆಯಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ನೀಡುವುದು ಕಡ್ಡಾಯವಾಗಿದೆ.

ಬಹಳ ಮುಖ್ಯವಾಗಿ ತಿಳಿದಿರಬೇಕಾಗುವ ವಿಚಾರವೆಂದರೆ ಮೆಚ್ಯೂರಿಟಿಗೂ ಮುನ್ನ ಹಣವನ್ನು ವಿತ್‌ಡ್ರಾ ಮಾಡಿದರೆ, ನಿಮಗೆ ನಷ್ಟವಾಗುತ್ತದೆ. ನೀವು ಒಂದು ವರ್ಷದಿಂದ ಮೂರು ವರ್ಷಗಳ ನಡುವೆ ಅವಧಿಯಲ್ಲಿ ಹಣವನ್ನು ವಿತ್‌ಡ್ರಾ ಮಾಡಿದರೆ, ಡೆಪಾಸಿಟ್ ಮಾಡಿದ ಮೊತ್ತದ ಶೇಕಡ 2 ರಷ್ಟು ಕಡಿತಗೊಳಿಸಲಾಗುತ್ತದೆ, ಬಳಿಕ ವಾಪಾಸ್ ನೀಡಲಾಗುತ್ತದೆ.

Leave A Reply

Your email address will not be published.