MIS: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ ಗಂಡ ಹೆಂಡತಿಗೆ ಪ್ರತಿ ತಿಂಗಳು ಸಿಗಲಿದೆ 9250 ರೂ, ಇಂದೇ ಅರ್ಜಿ ಹಾಕಿ.
ಗಂಡ ಹೆಂಡತಿ ಜಂಟಿಯಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭ ಪಡೆಯಬಹುದು.
Post Office Monthly Income Scheme: ನಮ್ಮ ಆದಾಯದಲ್ಲಿ ಒಂದಿಷ್ಟು ಹೂಡಿಕೆ ಮಾಡಿದರೆ ಮುಂದಿನ ಭವಿಷ್ಯ ಉಜ್ವಲ ಆಗಿರುತ್ತದೆ. ನಮ್ಮ ಹೂಡಿಕೆ ಸುರಕ್ಷಿತ ಆಗಿರಬೇಕೆಂದರೆ ಅದಕ್ಕೆ ಸೂಕ್ತ ಮಾರ್ಗ ಪೋಸ್ಟ್ ಆಫೀಸ್.
ಸರ್ಕಾರದ ಸಂಸ್ಥೆ ಆಗಿರುವ ಪೋಸ್ಟ್ ಆಫೀಸ್ (Post Office) ಆಗಾಗ ಉತ್ತಮ ಯೋಜನೆಯನ್ನು ಜಾರಿಗೆ ತರುತ್ತದೆ ಅಷ್ಟೇ ಅಲ್ಲದೆ ಇಲ್ಲಿನ ಯೋಜನೆಗಳು ಕಡಿಮೆ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸುವಂತೆ ಮಾಡುತ್ತದೆ. ಅಂಚೆ ಇಲಾಖೆಯ ಯೋಜನೆಗಳು ದೇಶದ ಮೂಲೆ ಮೂಲೆಗಳಲ್ಲಿ, ಹಳ್ಳಿ, ಪಟ್ಟಣ, ಜಿಲ್ಲೆ ಇತ್ಯಾದಿಗಳಲ್ಲಿ ವಾಸಿಸುವ ಜನರಿಗೆ ಸುಲಭವಾಗಿ ಲಭ್ಯವಿದೆ.
ಪೋಸ್ಟ್ ಆಫೀಸ್ ಮಾಸಿಕ ಯೋಜನೆ
ನಮ್ಮ ಹಣ ಪೋಸ್ಟ್ ಆಫೀಸ್ ನಲ್ಲಿ ಸುರಕ್ಷಿತ ಆಗಿರುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲಾ. ನಿವೃತ್ತಿಯ ನಂತರ ಸ್ಥಿರವಾದ ಆದಾಯವಿಲ್ಲ ಎಂದು ಚಿಂತೆ ಮಾಡುತ್ತಿದ್ದರೆ, ಅಂಚೆ ಕಚೇರಿ ಇದಕ್ಕೆ ಪರಿಹಾರವನ್ನು ನೀಡುತ್ತದೆ. ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಮಾಸಿಕ ಆದಾಯವನ್ನು ಗಳಿಸಬಹುದು. ಈ ಖಾತೆಯನ್ನು ನಿಮ್ಮ ಸಂಗಾತಿ ಅಂದರೆ ಗಂಡ ಮತ್ತು ಹೆಂಡತಿ ಒಟ್ಟಿಗೆ ತೆರೆಯಬಹುದು. ಈ ಪೋಸ್ಟ್ ಆಫೀಸ್ ಯೋಜನೆಯ ಹೆಸರನ್ನು ಪೋಸ್ಟ್ ಆಫೀಸ್ ಮಾಸಿಕ ಯೋಜನೆ ಎಂದು ಕರೆಯಲಾಗುತ್ತದೆ.
ಈ ಯೋಜನೆಯಡಿ ಹೂಡಿಕೆ ಮಾಡಿ ಅಧಿಕ ಬಡ್ಡಿ ಪಡೆಯಬಹುದು
ಪೋಸ್ಟ್ ಆಫೀಸ್ ಮಾಸಿಕ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಾವು ಮಾಡಿದ ಹೂಡಿಕೆಗೆ ಬಡ್ಡಿ ದೊರೆಯುತ್ತದೆ. ಈ ಯೋಜನೆಯಡಿ, ನೀವು ಮಾಸಿಕ 9,250 ರೂ.ಗಳ ಪಿಂಚಣಿ ಪಡೆಯಬಹುದು. ಒಂದೇ ಹೂಡಿಕೆಯನ್ನು ಆರಿಸಿಕೊಂಡರೆ ಗರಿಷ್ಠ 9 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬಹುದು.
ಪ್ರಸ್ತುತ, ಈ ಸರ್ಕಾರಿ ಯೋಜನೆಯು ಶೇಕಡಾ 7.4 ರ ದರದಲ್ಲಿ ಬಡ್ಡಿಯನ್ನು ಪಡೆಯಬಹುದು. ನಿಮ್ಮ ಹೆಂಡತಿಯೊಂದಿಗೆ ಜಂಟಿ ತೆರೆದರೆ, 15 ಲಕ್ಷ ರೂ.ಗಳ ಹೂಡಿಕೆಯ ಮೇಲೆ ನೀವು ವಾರ್ಷಿಕ 1,11,000 ರೂ.ಗಳ ಬಡ್ಡಿಯನ್ನು ಪಡೆಯುತ್ತೀರಿ. ಈ ಯೋಜನೆಯ ಮುಕ್ತಾಯದ ನಂತರ ನಿಮ್ಮ ಹಣವನ್ನು ಮರಳಿ ಪಡೆಯಬಹುದು.
ಈ ಯೋಜನೆಯ ಹೂಡಿಕೆಯನ್ನು ಅವಧಿಗೂ ಮುಂಚೆಯೂ ತೆಗೆಯಬಹುದು ಅಥವಾ ಮತ್ತೆ ಮುಂದುವರೆಸಬಹುದು
ಈ ಯೋಜನೆಯ ಹಣವನ್ನು ಠೇವಣಿ ಮಾಡಿದ ಒಂದು ವರ್ಷದ ನಂತರ ಹಿಂಪಡೆಯಬಹುದು. ನೀವು ಒಂದರಿಂದ ಮೂರು ವರ್ಷಗಳ ನಡುವೆ ಹಣವನ್ನು ಹಿಂತೆಗೆದುಕೊಂಡರೆ, ಹಣದ 2% ಕಡಿತಗೊಳಿಸಲಾಗುತ್ತದೆ. ಮೂರು ವರ್ಷಗಳ ನಂತರ, ಹಣವನ್ನು ಹಿಂಪಡೆಯಲು ಒಂದು ಪ್ರತಿಶತದಷ್ಟು ಹಣವನ್ನು ಕಡಿತಗೊಳಿಸಲಾಗುತ್ತದೆ. ಈ ಯೋಜನೆಯಲ್ಲಿ ಹಣವನ್ನು 5 ವರ್ಷಗಳ ವರೆಗೆ ಹೆಚ್ಚಿಸಬಹುದು. ಈ ಖಾತೆಯನ್ನು 3 ಜನರು ಒಟ್ಟಿಗೆ ತೆರೆಯಬಹುದು.