Pradeep Eshwar: ಈ ಒಂದು ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಒಂದೇ ದಿನಕ್ಕೆ ಹೊರಬಂದ ಪ್ರದೀಪ್ ಈಶ್ವರ್.

ಬಿಗ್ ಬಾಸ್ ಮನೆಯಿಂದ ಹೊರ ಬಂದ ಶಾಸಕ ಪ್ರದೀಪ್ ಈಶ್ವರ್, ಏನಿದು ಹೊಸ ಟ್ವೀಸ್ಟ್ ?

Pradeep Eshwar Came Out From Bigg Boss House: ಕನ್ನಡ ಬಿಗ್ ಬಾಸ್ ಸೀಸನ್ 10 (bigg Boss Kannada Season 10) ಪ್ರಾರಂಭವಾಗಿದ್ದು, ಹಲವು ನಿರೀಕ್ಷೆಗಳನ್ನು ಬ್ರೇಕ್ ಮಾಡಿದೆ .ಸ್ಪರ್ದಿಗಳು ಈಗಾಗಲೇ ಬಿಗ್ ಮನೆ ಸೇರಿದ್ದು, ಅನೇಕ ಕುತೂಹಲ ಸಂಚಿಕೆ ಗಳೊಂದಿಗೆ ಬಿಗ್ ಬಾಸ್ ಶುರುವಾಗಿದೆ.

ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ಭಾನುವಾರ ಗ್ರ್ಯಾಂಡ್‌ ಪ್ರಿಮಿಯರ್‌ ನಡೆಯಿತು. ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ದಿನ ಎಲ್ಲರಿಗೂ ಬಿಗ್‌ ಸರ್‌ಪ್ರೈಸ್‌ ಒಂದು ಕಾದಿತ್ತು. ಅಲ್ಲೊಬ್ಬ ಹೊಸ ವ್ಯಕ್ತಿಯ ಆಗಮನವಾಗಿತ್ತು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು.

Pradeep Eshwar Came Out From Bigg Boss House
Image Credit: Jiocinema

ಶಾಸಕ ಪ್ರದೀಪ್ ಈಶ್ವರ್ ಅವರನ್ನು ನೋಡಿ ಸ್ಪರ್ಧಿಗಳು ಶಾಕ್

ಶಾಸಕ ಪ್ರದೀಪ್ ಈಶ್ವರ್ ಅವರು ಬಿಗ್ ಬಾಸ್ ಮನೆಗೆ ಸ್ಪರ್ಧಿಗಳಂತೆ ಬಂದಿದ್ದು ಇವರು ರಾಜ ಕಾರಣಿ ಮಾತ್ರವಲ್ಲದೇ ಮೋಟಿವೇಷನಲ್​ ಸ್ಪೀಕರ್ ಆಗಿ ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲೂ ಪ್ರದೀಪ್‌ ಸ್ಪರ್ಧಿಗಳಿಗೆ ಉತ್ಸಾಹ ತುಂಬಿದ್ದಾರೆ. ತಮ್ಮ ಮಾತಿನ ಮೂಲಕ ಸ್ಪರ್ಧಿಗಳ ಮನಸ್ಸಿನ ಮೇಲೆ ಪ್ರಭಾವ ಬೀರಿದ್ದಾರೆ.

ಅಥಿತಿಯಾಗಿ ಬಂದ ಶಾಸಕ ಪ್ರದೀಪ್ ಈಶ್ವರ್

ಬಿಗ್ ಬಾಸ್ ಆರಂಭದಲ್ಲೇ ಸ್ಪರ್ದಿಗಳಿಗೆ ಶಾಕ್ ನೀಡಿದೆ, ಶೋ ಪ್ರಾರಂಭವಾದ ಮರು ದಿನವೇ ಶಾಸಕ ಪ್ರದೀಪ್ ಈಶ್ವರ್‌ ಮನೆಗೆ ಬಂದು, ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದರು.

MLA Pradeep Eshwar latest News
Image Credit: Cinefry

ಎಲ್ಲರೂ ಇವರನ್ನು ಸ್ಪರ್ಧಿ ಎಂದೇ ನಂಬಿಸಿದ್ದರು. ಆದರೆ ಕೆಲ ಹೊತ್ತಿನ ಬಳಿಕ ಬಿಗ್‌ ಬಾಸ್‌ ಮಾತನಾಡಿದರು. ಪ್ರದೀಪ್‌ ಈ ಸೀಸನ್‌ನ ಮೊದಲ ಅತಿಥಿ ಎಂದು ತಿಳಿಸಿದರು. ಆ ಬಳಿಕ ಶಾಸಕ ಪ್ರದೀಪ್‌ ಈಶ್ವರ್‌ ಸ್ಪರ್ಧಿಗಳಿಗೆಂದು ಸಿಹಿ ತಂದಿದ್ದರು. ಆದರೆ ಅದನ್ನು ಪಡೆಯಲು ಕಂಟೆಸ್ಟಂಟ್ಸ್‌ ಗೆ ಟಾಸ್ಕ್‌ ಒಂದನ್ನು ಆಡಿಸಿದರು. ಆ ಬಳಿಕ ಸ್ಪರ್ಧಿಗಳಿಗೆ ಸಿಹಿ ನೀಡಿದರು. ನಂತರ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಆದೇಶದಂತೆ ಮನೆಯಿಂದ ಹೊರಬಂದರು. ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಬಂದ ಮೊದಲ ಅತಿಥಿಯಾಗಿದ್ದಾರೆ.

Leave A Reply

Your email address will not be published.