Pradeep Eshwar: ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದು ಯಾಕೆ…? ಬಿಗ್ ಬಾಸ್ ನಿಂದ ಬರುವ ಹಣ ಏನು ಮಾಡುತ್ತಾರೆ.

ಶಾಸಕ ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದು ಯಾಕೆ.

Pradeep Eshwar In Bigg Boss Kannada: ಬಿಗ್ ಬಾಸ್ ಸೀಸನ್ 10 (Bigg Boss Season 10) ಪ್ರಾರಂಭವಾಗಿದ್ದು, ಹಲವು ಸೆಲೆಬ್ರೆಟಿಗಳ ಜೊತೆ ಚಿಕ್ಕಬಳ್ಳಾಪರು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಕೂಡ ಬಿಗ್ ಬಾಸ್ ನಲ್ಲಿ ಭಾಗವಹಿಸಲಿದ್ದಾರೆ. ಪ್ರದೀಪ್ ಈಶ್ವರ್ ಬಿಗ್ ಮನೆಗೆ ಹೋಗಿ ಎಲ್ಲರಿಗೂ ಆಶ್ವರ್ಯ ಮೂಡಿಸಿದ್ದಾರೆ. ಮನೆಯ ಇತರ ಸದಸ್ಯರಿಗೂ ಸಖತ್ ಶಾಕ್ ಕೂಡ ಕೊಟ್ಟಿದ್ದಾರೆ. ಇನ್ಮುಂದೆ ನಾವು ಶಾಸಕರ (MLA) ಜೊತೆಗೆ ಸ್ಪರ್ಧೆಗಿಳಿಯಬೇಕು ಅನ್ನುವ ಟೆನ್ಷನ್ ಕೂಡ ಶುರು ಆಗಿದೆ.

ಬಿಗ್ ಬಾಸ್ ಮನೆ ಪ್ರವೇಶ ಮಾಡಿರೋ ಶಾಸಕ ಪ್ರದೀಪ್ ಈಶ್ವರ್ ಮನೆಯಲ್ಲಿ 100 ದಿನ ಇರ್ತಾರೆ ಅನ್ನುವ ಸುದ್ದಿ ಇದೆ. ಆದರೆ ಇದನ್ನ ನಂಬೋದು ಕಷ್ಟವೇ ಬಿಡಿ. ಬಿಗ್ ಮನೆಯಲ್ಲಿ 100 ದಿನ ಇರ್ತೇನೆ ಅಂದುಕೊಳ್ಳಬಹುದು. ಅದಕ್ಕಾಗಿ ಸಾಕಷ್ಟು ಟಾಸ್ಕ್‌ಗಳನ್ನೂ ಗೆಲ್ಲಬೇಕಾಗುತ್ತದೆ. ಒಳ್ಳೆ ಪರ್ಫಾಮೆನ್ಸ್ ಅನ್ನು ಕೊಡಬೇಕಾಗುತ್ತದೆ. ಅದೇನೇ ಇರಲಿ ಶಾಸಕರು ಬಿಗ್ ಮನೆಗೆ ಹೋಗಿದ್ದಕ್ಕಾಗಿ ಹಲವು ಟೀಕೆಗಳು ಈಗಾಗಲೇ ಪ್ರಾರಂಭವಾಗಿದೆ.

Pradeep Eshwar In Bigg Boss Kannada
Image Credit: Jiocinema

ಪ್ರದೀಪ್ ಈಶ್ವರ್ ಬಿಗ್ ಮನೆ ಎಂಟ್ರಿ ಜನರ ಗತಿ ಏನು? ಪ್ರಶ್ನೆಗಳ ಸುರಿಮಳೆ,

ಪ್ರದೀಪ್ ಈಶ್ವರ್ ಬಿಗ್ ಮನೆಯ ಎಂಟ್ರಿಗೆ ಜನ ಸಾಮಾನ್ಯರ ಆಕ್ರೋಶವೂ ಶೂರು ಆಗಿದೆ. ಸರ್ಕಾರಕ್ಕೆ ಜನ ಪ್ರಶ್ನೆಯನ್ನ ಕೂಡ ಕೇಳ್ತಿದ್ದಾರೆ. ಒಬ್ಬ ಶಾಸಕರಾಗಿ ಬಿಗ್ ಬಾಸ್‌ಗೆ ಹೋಗುವುದು ಎಷ್ಟು ಸರಿ ಅನ್ನುವ ಪ್ರಶ್ನೆಗಳ ಸುರಿಮಳೆ ಕೂಡ ಆಗುತ್ತಿದೆ.

ಇವರು ಬಿಗ್ ಬಾಸ್ ಮನೆಗೆ ಹೋಗಿ ಏನು ಮಾಡುತ್ತಾರೆ. ಹಣಕ್ಕಾಗಿ ಅಲ್ಲಿಗೆ ಹೋಗಿದ್ದಾರೆಯೇ ಎಂದು ಹಲವಾರು ಪ್ರಶ್ನೆ ಕೇಳುತ್ತಿದ್ಧಾರೆ. ಪ್ರದೀಪ್ ಈಶ್ವರ್ ಅವರಿಗೆ ಅವರದ್ದೆ ಆದ ಜವಾಬ್ದಾರಿಗಳೂ ಇವೆ. ಗೆಲ್ಲಿಸಿ ಕಳಿಸಿದ ಕ್ಷೇತ್ರದ ಜನರ ಕೆಲಸಗಳೂ ಇವೆ. ಅವುಗಳನ್ನ ಬಿಟ್ಟು ದೊಡ್ಮನೆಯೊಳಗೆ ಹೋಗಿ ಆಟವಾಡುತ್ತ ಇದ್ದಾರೆ, ಇವರನ್ನು ನಂಬಿದ ಜನರ ಗತಿ ಏನು ಎಂದು ಕೆಲವರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Pradeep Eshwar Latest News
Image Credit: Zeenews

ಅನಾಥ ಮಕ್ಕಳಿಗಾಗಿ ಪ್ರದೀಪ್ ಈಶ್ವರ್ ಬಿಗ್ ಬಾಸ್ ಗೆ ಎಂಟ್ರಿ

ಪ್ರದೀಪ್ ಅವರ ಬಿಗ್ ಬಾಸ್ ಎಂಟ್ರಿ ಹಿಂದೆ ಒಂದು ಬಲವಾದ ಕಾರಣ ಇದೆ. ಪ್ರದೀಪ್ ಈಶ್ವರ್ ಬಿಗ್ ಮನೆಗೆ ಹೋಗಲು ಅನಾಥ ಮಕ್ಕಳೆ ಕಾರಣ ಆಗಿದ್ದಾರೆ. ಇವರಿಗಾಗಿಯೇ ಬಿಗ್ ಮನೆಗೆ ಪ್ರದೀಪ್ ಈಶ್ವರ್ ಹೋಗಿದ್ದಾರೆ. ಅಲ್ಲಿದ್ದುಕೊಂಡು ಅದರಿಂದ ಬರುವ ಹಣವನ್ನ ಅನಾಥ ಮಕ್ಕಗಳಿಗೆ ಕೊಡಲು ನಿರ್ಧರಿಸಿದ್ದಾರೆ ಅನ್ನುವ ಮಾಹಿತಿ ಇದೆ.

Leave A Reply

Your email address will not be published.