Modi Birthday: ದೇಶದ ಜನರಿಗೆ ಮೋದಿ ಹುಟ್ಟು ಹಬ್ಬದ ಗುಡ್ ನ್ಯೂಸ್, ಹಳೆಯ ಯೋಜನೆ ಮತ್ತೆ ಆರಂಭ.

ಪ್ರಧಾನಿ ಮೋದಿ ಹುಟ್ಟು ಹಬ್ಬಕ್ಕೆ ದೇಶದ ಜನತೆಗೆ ಗುಡ್‌ ನ್ಯೂಸ್‌.

Ayushman Bharat Pradhan Mantri Jan Arogya Yojana: ಸರ್ಕಾರದ ಹಲವು ಯೋಜನೆಯಲ್ಲಿ’ಆಯುಷ್ಮಾನ್ ಭವ’ ಕೂಡ ಒಂದಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಟಾನ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರು ಪ್ರತಿಯೊಬ್ಬ ಫಲಾನುಭವಿಗೆ ಆರೋಗ್ಯ ಯೋಜನೆಗಳನ್ನು ಅತ್ಯುತ್ತಮವಾಗಿ ತಲುಪಿಸುವ ಅಭಿಯಾನವನ್ನು ಸೆಪ್ಟೆಂಬರ್ 13 ರಂದು ಕೇಂದ್ರ ಆರೋಗ್ಯ ಇಲಾಖೆಯು ಜಾರಿಗೊಳಿಸುತ್ತಿದೆ ಎಂದು ಹೇಳಿದರು.

ಇದೇ ಸೆಪ್ಟೆಂಬರ್ 13 ರಿಂದ ‘ಆಯುಷ್ಮಾನ್ ಭವ’ ವಿವಿಧ ಆರೋಗ್ಯ ಕಾರ್ಯಕ್ರಮಗಳ ಅಭಿಯಾನ ಜಿಲ್ಲೆಯಲ್ಲಿ ಆರಂಭವಾಗಲಿದ್ದು, ಎಲ್ಲರನ್ನೂ ಒಳಗೊಂಡಂತೆ, ಎಲ್ಲಾ ಉದ್ದೇಶಿತ ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ ಯೋಜನೆಗಳನ್ನು ಅತ್ಯುತ್ತಮವಾಗಿ ತಲುಪಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು.

Ayushman Bharat Pradhan Mantri Jan Arogya Yojana
Image Credit: Jagran

ಆಯುಷ್ಮಾನ್ ಭವ’ ಅಭಿಯಾನ
ಆಯುಷ್ಮಾನ್ ಭವ’ ಅಭಿಯಾನ ಆರೋಗ್ಯದ ಲಭ್ಯತೆ ಮತ್ತು ಜಾಗೃತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಮೂರು ಪ್ರಮುಖ ಅಂಶಗಳನ್ನು ಒಳಗೊಂಡಿರುವ ಒಂದು ಅಭಿಯಾನವಾಗಿದೆ. ಆಯುಷ್ಮಾನ್ ಮೇಳ ಅಂದರೆ ಅಭಿಯಾನವು ಸಮುದಾಯ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ನಡೆಸುವ ಸಾಪ್ತಾಹಿಕ ಆರೋಗ್ಯ ಮೇಳಗಳನ್ನು ಒಳಗೊಂಡಿದೆ.

ಆಯುಷ್ಮಾನ್ ಸಭೆಯಾ ಮೂಲಕ ಗ್ರಾಮ/ವಾರ್ಡ್ ಮಟ್ಟದ ಸಭೆಗಳು ವಿವಿಧ ಆರೋಗ್ಯ ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಅಂಗಾಂಗ ದಾನ ಬಹಳಷ್ಟು ಜನತೆಗೆ ಅಂಗಾಂಗಗಳ ಅವಶ್ಯಕತೆ ಇರುವ ಹಿನ್ನಲೆ ನಿರ್ದಿಷ್ಟ ಮಾನದಂಡಗಳ ಆಧಾರವಾಗಿಟ್ಟುಕೊಂಡು ಅಂಗಾಂಗ ದಾನಕ್ಕೆ ಹೆಸರು ನೊಂದಾವಣೆಗೆ ಅವಕಾಶ ಇರಲಿದೆ. ಹಾಗೆಯೆ ರಕ್ತದಾನ ಶಿಬಿರಗಳು ಆಯೋಜಿಸಿ ಪ್ರತಿಯೊಬ್ಬರಲ್ಲೂ ರಕ್ತದಾನದ ಅವಶ್ಯಕತೆಯ ಮಹತ್ವ ಸಾರಲೂ ಗ್ರಾಮ ಪಂಚಾಯತಗಳ ಸಹಕಾರದೊಂದಿಗೆ ಉಚಿತ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುವುದು.

Ayushman Bhav latest update
Image Credit: Jambhsarmedia

ಆಯುಷ್ಮಾನ್ ಸಭೆಯ ಮಾಹಿತಿ
ಗ್ರಾಮ/ವಾರ್ಡ್ ಮಟ್ಟದ ಸಭೆಗಳು ವಿವಿಧ ಆರೋಗ್ಯ ಯೋಜನೆಗಳು ಮತ್ತು ಸೇವೆಗಳ ಬಗ್ಗೆ ಅರಿವು ಮೂಡಿಸಲು ಉದ್ದೇಶಿಸಲಾಗಿದೆ . ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ನಡೆಯುವ ‘ಸೇವಾ ಪಖ್ವಾರಾ’ ಸಮಯದಲ್ಲಿ ಈ ಅಭಿಯಾನವನ್ನು ಪರಿಚಯಿಸಲಾಗುವುದು ಮತ್ತು ಆರೋಗ್ಯದ ಲಭ್ಯತೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಯೋಜಿಸಲಾದ ಹಲವಾರು ಚಟುವಟಿಕೆಗಳನ್ನು ಒಳಗೊಂಡಿದೆ ಎಂದು DHO ಅವರು ತಿಳಿಸಿದರು.

Leave A Reply

Your email address will not be published.