Jan Dhan Account: ಜನ್ ಧನ್ ಖಾತೆ ಇದ್ದವರಿಗೆ ಕೇಂದ್ರದಿಂದ ಸಿಗಲಿದೆ 1.30 ಲಕ್ಷ ರೂ, ಯೋಜನೆಯ ಲಾಭ ಪಡೆದುಕೊಳ್ಳಿ.
ಜನ್ ಧನ್ ಖಾತೆ ಇದ್ದವರಿಗೆ ಕೇಂದ್ರದಿಂದ್ ಸಿಗಲಿದೆ ಸಾಕಷ್ಟು ಸವಲತ್ತುಗಳು.
Pradhan Mantri Jan Dhan Yojana: ದೇಶದ ಜನತೆಗಾಗಿ Central Government Of India ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ. ಇನ್ನು ಜನರು ಸರ್ಕಾರದ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ದೇಶದ ಬಡ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಲು ಕೇಂದ್ರದ ಮೋದಿ ಸರಕಾರ ವಿವಿಧ ಯೋಜನೆಯನ್ನು ರೂಪಿಸುತ್ತಿದೆ.
ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ದೇಶದ ಬಡ ಜನರನ್ನು ಆರ್ಥಿಕವಾಗಿ ಸಬಲರನ್ನಾಗಿಸಿದೆ. ಇದೀಗ ಸರ್ಕಾರವು ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯನ್ನು (Pradhan Mantri Jan Dhan Yojana) ಪರಿಚಯಿಸಿದ್ದು ನಾಗರಿಕರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ.

ಪ್ರಧಾನ ಮಂತ್ರಿ ಜನ್ ಧನ್ ಯೋಜನೆ
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ 47 ಕೋಟಿಗೂ ಹೆಚ್ಚು ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆದಿದ್ದಾರೆ. ಆದರೆ ಬಹುತೇಕರಿಗೆ ಈ ಖಾತೆಗಳ ಮೂಲಕ ದೊರೆಯುವ ಪ್ರಯೋಜನಗಳ ಬಗ್ಗೆ ತಿಳಿದಿಲ್ಲ. ಜನ್ ಧನ್ ಖಾತೆದಾರರಿಗೆ ಸರ್ಕಾರ 10 ಸಾವಿರ ರೂಪಾಯಿ ನೀಡಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಅರ್ಜಿ ಸಲ್ಲಿಸಬೇಕು. ಇದಷ್ಟೇ ಅಲ್ಲದೆ ಈ ಖಾತೆಯಲ್ಲಿ 1,30,000 ವರೆಗಿನ ವಿಮೆಯ ಲಭ್ಯತೆಯಂತಹ ಪ್ರಯೋಜನವನ್ನು ಪಡೆಯಬಹುದು.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ ಪ್ರಯೋಜನಗಳು Benefits Of Jan Dhan Accounts
* ಜನ್ ಧನ್ ಖಾತೆಯ ಅಡಿಯಲ್ಲಿ ಖಾತೆದಾರರಿಗೆ ವಿವಿಧ ಪ್ರಯೋಜನಗಳನ್ನು ನೀಡಲಾಗುತ್ತದೆ. ಮೊದಲ ಅನುಕೂಲವೆಂದರೆ ಗ್ರಾಹಕರು ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತವನ್ನು ಕಾಯ್ದುಕೊಳ್ಳುವ ಅಗತ್ಯವಿಲ್ಲ.

* ಹೆಚ್ಚುವರಿಯಾಗಿ ರೂಪೇ ಡೆಬಿಟ್ ಕಾರ್ಡ್ ನೀಡಲಾಗಿದೆ. ಈ ಖಾತೆಯಲ್ಲಿ ನೀವು ಬಯಸಿದರೆ ಓವರ್ ಡ್ರಾಫ್ಟ್ ಗಾಗಿ ಬ್ಯಾಂಕ್ ಗೆ 10,000 ರೂಪಾಯಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಬೇಕು.
* ಆಕಸ್ಮಿಕ ಮರಣ ಸಂಭವಿಸಿದಲ್ಲಿ ಜನ್ ಧನ್ ಖಾತೆದಾರರಿಗೆ 1 ಲಕ್ಷ ರೂಪಾಯಿ ಅಪಘಾತ ವಿಮಾ ಪಾಲಿಸಿ ಸೇರಿದಂತೆ ಹಲವು ಪ್ರಯೋಜನಗಳನ್ನು ಒದಗಿಸತ್ತದೆ.
* ಹೆಚ್ಚುವರಿಯಾಗಿ 30,000 ರೂಪಾಯಿ ಜೀವ ವಿಮಾ ಪಾಲಿಸಿ ನೀಡಲಾಗುತ್ತದೆ. ಆಕಸ್ಮಿಕವಾಗಿ ಮರಣ ಹೊಂದಿದಲ್ಲಿ ಖಾತೆದಾರರ ಕುಟುಂಬ ಕ್ಕೆ 1 ಲಕ್ಷ ರೂಪಾಯಿ ವಿಮಾ ಸೌಲಭ್ಯ ನೀಡಲಾಗುತ್ತದೆ. ಮತ್ತೊಂದೆಡೆ ಸಾಮಾನ್ಯ ಸಂದರ್ಭದಲ್ಲಿ ಸಾಯುವ ಸಂದರ್ಭದಲ್ಲಿ 30,000 ರೂಪಾಯಿ ವಿಮಾ ರಕ್ಷಣೆಯ ಮೊತ್ತವನ್ನು ಒದಗಿಸಲಾಗಿದೆ.