PM Kisan: ಪಿಎಂ ಕಿಸಾನ್ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಇಂತಹ ಜನರಿಗಿಲ್ಲ 15 ನೇ ಕಂತಿನ ಹಣ.
ಈ ರೈತರಿಗೆ ಸಿಗಲ್ಲ ಪಿಎಂ ಕಿಸಾನ್ ಯೋಜನೆಯ ಹಣ,ಈ ನಿಯಮಗಳು ಕಡ್ಡಾಯ.
Pradhan Mantri Kisan Samman Nidhi Yojana: ರಾಜ್ಯದ ರೈತರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ಬಂದಿದ್ದು, ಈಗಾಗಲೇ ಅನೇಕ ರೈತರು ಈ ಯೋಜನೆಯಡಿ ವಾರ್ಷಿಕವಾಗಿ 6,000 ರೂ.ಗಳ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುತ್ತಿದ್ದಾರೆ.
ಹಾಗು ಈ ಯೋಜನೆಯಲ್ಲಿ ಹಣವನ್ನು 2-2 ಸಾವಿರ ರೂಪಾಯಿಗಳ 3 ಕಂತುಗಳಲ್ಲಿ ನೀಡಲಾಗುತ್ತದೆ. ಈವೆರೆಗೆ 14 ಕಂತುಗಳ ಹಣವನ್ನು ರೈತರಿಗೆ ನೀಡಲಾಗಿದೆ 15 ನೇ ಕಂತಿಗಾಗಿ ರೈತರು ಕಾಯುತ್ತಿದ್ದಾರೆ. ಆದರೆ ಈಗ ಬರುತ್ತಿರುವ ಮಾಹಿತಿ ಪ್ರಕಾರ ಕಂತಿನ ಲಾಭವನ್ನು ಕೆಲವರು ಪಡೆಯಲು ಸಾಧ್ಯವಾಗಲ್ಲವೆಂದು ಹಾಗಾದರೆ ಆ ರೈತರು ಯಾರೆಂದು ತಿಳಿಯೋಣ.
ತೆರಿಗೆ ಪಾವತಿದಾದಾರರಿಗೆ ಹಣ ಪಡೆಯಲು ಸಾಧ್ಯವಿಲ್ಲ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಎಲ್ಲ ರೈತರು ಇನ್ನುಮುಂದೆ ಹಣ ಪಡೆಯಲು ಸಾಧ್ಯವಿಲ್ಲ. ತೆರಿಗೆ ಪಾವತಿ ಮಾಡುವ ಕುಟುಂಬದವರು ಇನ್ನು ಮುಂದೆ ಈ ಯೋಜನೆಯಡಿ ಹಣ ಪಡೆಯಲು ಸಾಧ್ಯವಿಲ್ಲ.ಹಾಗು ಕುಟುಂಬದ ಸದಸ್ಯರು ಯಾರಾದರೂ ಸರ್ಕಾರೀ ನೌಕರಿ ಹೊಂದಿದರೆ ಇಂತಹ ಕುಟುಂಬಗಳಿಗೆ ಇನ್ನು ಮುಂದೆ ಹಣ ಸಿಗುವುದಿಲ್ಲ.
ತಪ್ಪಾದ ಮಾಹಿತಿ ನೀಡಿದರೆ ಹಣ ಪಡೆಯಲು ಸಾಧ್ಯವಿಲ್ಲ
ಅರ್ಜಿ ನಮೂನೆಯಲ್ಲಿ ತಮ್ಮ ಬ್ಯಾಂಕ್ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ ರೈತರು ಸಹ ಕಂತಿನ ಪ್ರಯೋಜನದಿಂದ ವಂಚಿತರಾಗಬಹುದು. ನೀವು ನಿಮ್ಮ ಬ್ಯಾಂಕ್ ಮಾಹಿತಿಯನ್ನು ತಪ್ಪಾಗಿ ನೀಡಿದ್ದರೆ, ಅಂತಹ ಪರಿಸ್ಥಿತಿಯಲ್ಲಿ ನೀವು ಕಂತಿನ ಪ್ರಯೋಜನದಿಂದ ವಂಚಿತರಾಗಬಹುದು ಕೆಲವು ರೈತರು ತಮ್ಮ ಫಾರ್ಮ್ನಲ್ಲಿ ಲಿಂಗ, ಹೆಸರು, ವಿಳಾಸ, ಆಧಾರ್ ಸಂಖ್ಯೆಯಂತಹ ಯಾವುದಾದರೂ ಒಂದು ತಪ್ಪು ಮಾಡಿದ್ರೂ ಅಂತಹ ರೈತರು ಕಂತಿನ ಪ್ರಯೋಜನದಿಂದ ವಂಚಿತರಾಗಬಹುದು.