Free Gas: ದೇಶದ ಮಹಿಳೆಯರಿಗೆ ದಸರಾ ಹಬ್ಬದ ಉಡುಗೊರೆ ನೀಡಿದ ಕೇಂದ್ರ ಸರ್ಕಾರ, ಉಚಿತ ಗ್ಯಾಸ್ ಸಿಲಿಂಡರ್ ಘೋಷಣೆ.
ಕೇಂದ್ರದ ಈ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ಸಿಗಲಿದೆ.
Pradhan Mantri Ujjwala Yojana Latest Update: ಗ್ರಹ ಬಳಕೆಯ ದಿನನಿತ್ಯದ ವಸ್ತು ಹಾಗು ಬಹಳ ಮುಖ್ಯವಾದದ್ದು ಅಂದರೆ ಅದು ಗ್ಯಾಸ್. ಗ್ಯಾಸ್ ಇಲ್ಲದೆ ಇದ್ದರೆ ಯಾರ ಮನೆಯಲ್ಲೂ ಅಡುಗೆ ಇಲ್ಲ. ಎಪಿಎಲ್ ಮತ್ತು ಬಿಪಿಎಲ್ ಮತ್ತು ಪಡಿತರ ಚೀಟಿ ಹೊಂದಿರುವ ಮಹಿಳೆಯರಿಗೆ ಭಾರತ ಸರ್ಕಾರವು ದೇಶದ ದೇಶೀಯ ಎಲ್ಪಿಜಿಯನ್ನು ಒದಗಿಸುತ್ತಿದೆ.
ಮಹಿಳೆಯರು ಮತ್ತು ಮಕ್ಕಳಿಗೆ ಶುದ್ಧ ಅಡುಗೆ ಇಂಧನ ಎಲ್ಪಿಜಿಯನ್ನು ಒದಗಿಸುವ ಮೂಲಕ ಅವರ ಆರೋಗ್ಯವನ್ನು ರಕ್ಷಿಸುವ ಗುರಿಯನ್ನು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಹೊಂದಿದೆ, ಇದರಿಂದಾಗಿ ಮಹಿಳೆಯರು ಹೊಗೆಯ ಅಡುಗೆಮನೆಗಳಲ್ಲಿ ತಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳಬೇಕಾಗಿಲ್ಲ ಅಥವಾ ಕಟ್ಟಿಗೆ ಸಂಗ್ರಹಿಸಲು ಅಸುರಕ್ಷಿತ ಪ್ರದೇಶಗಳಲ್ಲಿ ಹೋಗಬೇಕಂತಿಲ್ಲ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ದೇಶಾದ್ಯಂತ BPL ಕುಟುಂಬಗಳ ಮಹಿಳೆಯರ ಹೆಸರಿನಲ್ಲಿ 5 ಕೋಟಿ LPG ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. PMUY ಅನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2016 ರ ಮೇ 1ರಂದು ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಆರಂಭಿಸಿದ್ದರು. ಈ ಯೋಜನೆಯಡಿ 14.2 ಕೆಜಿಯ ಒಂದು ಸಿಲಿಂಡರ್ ಪಡೆಯಲು ಮಾತ್ರ ಅವಕಾಶವಿದೆ. ಆದರೆ 5 ಕೆಜಿಯ ಎರಡು ಸಿಲಿಂಡರ್ ಪಡೆಯಬಹುದು. ಈ ಯೋಜನೆಯು ಮಹಿಳೆಯರಿಗೆ ಬಹಳ ಉಪಯೋಗಕರವಾಗಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಹಾಕಲು ಬೇಕಾಗಿರುವ ಅರ್ಹತೆಗಳು
ಮೊದಲನೇದಾಗಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಮಹಿಳೆಯಾಗಿರಬೇಕು. ಮಹಿಳೆಯ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು .ಅರ್ಜಿ ಹಾಕುವ ಮಹಿಳೆ ಬಿಪಿಎಲ್ ಪಡಿತರ ಚೀಟಿ ಹೊಂದಿರಬೇಕು. ಈ ಮೊದಲೇ ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಿ ಎಲ್ಪಿಜಿ ಸಂಪರ್ಕ ಇರಬಾರದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿ ಹಾಕಲು ಅಗತ್ಯವಿರುವ ದಾಖಲೆಗಳು
ಮಹಿಳೆಯು ಪಂಚಾಯತ್ ಪ್ರಧಾನ್ / ಪುರಸಭೆ ಅಧ್ಯಕ್ಷರಿಂದ ಅಧಿಕೃತಗೊಂಡ ಬಿಪಿಎಲ್ ಪ್ರಮಾಣಪತ್ರ ಪಡೆಯಬೇಕು . ಕುಟುಂಬದ ಬಿಪಿಎಲ್ ಪಡಿತರ ಚೀಟಿ ಕಡ್ಡಾಯವಾಗಿರುತ್ತದೆ.ಒಂದು ಫೋಟೋ ಐಡಿ (ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿ). ಅರ್ಜಿ ಹಾಕುವ ಮಹಿಳೆಯ ಇತ್ತೀಚಿನ ಪಾಸ್ ಪೋರ್ಟ್ ಫೋಟೋ ಅಗತ್ಯವಾಗಿರುತ್ತದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಆನ್‌ಲೈನ್ ನಲ್ಲಿ ಅರ್ಜಿ ಹಾಕುವ ವಿಧಾನ
ಉಜ್ವಲ ಯೋಜನೆಯ ಲಾಭ ಪಡೆಯಲು ನೀವು ಮೊದಲು ವೆಬ್‌ಸೈಟ್ ವಿಳಾಸ – https://www.pmuy.gov.in/ujjwala2.html ಅಧಿಕೃತ ವೆಬ್ಸೈಟ್ ಗೆ ಹೋಗಬೇಕು. ನಿಮ್ಮ ಮುಂದಿರುವ ಫಾರ್ಮ್ ಡೌನ್ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿಮಾಡಿ. ಈಗ ನೀವು ಈ ಫಾರ್ಮ್ ಅನ್ನು ಹತ್ತಿರದ ಎಲ್ಪಿಜಿ ಕೇಂದ್ರದಲ್ಲಿ ಸಲ್ಲಿಸಬೇಕು. ಅಲ್ಲದೆ, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಲ್ಲಿ ಸಲ್ಲಿಸಿ. ದಾಖಲೆಗಳ ಪರಿಶೀಲನೆಯ ನಂತರ ನೀವು ಎಲ್ಪಿಜಿ ಸಂಪರ್ಕವನ್ನು ಪಡೆಯುತ್ತೀರಿ.

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಆಫ್ ಲೈನ್ ನಲ್ಲಿ ಅರ್ಜಿ ಹಾಕುವ ವಿಧಾನ
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಆಫ್ ಲೈನ್ ನಲ್ಲಿ ಅರ್ಜಿ ಹಾಕಲು ಹತ್ತಿರದ ಎಲ್ಪಿಜಿ ವಿತರಣಾ ಏಜೆನ್ಸಿಯಲ್ಲಿ ಅರ್ಜಿ ನಮೂನೆಯನ್ನು ಭರ್ತಿಮಾಡುವ ಮತ್ತು ಸಲ್ಲಿಸುವ ಮೂಲಕ ಆಫ್ಲೈನ್ ಮೋಡ್ ಮೂಲಕ ಮಾತ್ರ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ನಮೂನೆಯನ್ನು ಸಲ್ಲಿಸುವಾಗ, ಮನೆಯ ಎಲ್ಲಾ ಸದಸ್ಯರ ವಿವರವಾದ ವಿಳಾಸ, ಜನಧನ್ ಬ್ಯಾಂಕ್ ಖಾತೆ ಮತ್ತು ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕಾಗುತ್ತದೆ.