Prakash Raj: ಸಪ್ತ ಸಾಗರದಾಚೆ ಎಲ್ಲೋ ಚಿತ್ರ ನೋಡಿದ ಪ್ರಕಾಶ್ ರಾಜ್ ಅವರು ರಕ್ಷಿತ್ ಶೆಟ್ಟಿಗೆ ಹೇಳಿದ್ದೇನು ಗೊತ್ತಾ…?
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಕ್ಕೆ ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ.
Prakash Raj Tweet About Sapta Sagaradaache Yello Movie: ನಟ, ನಿರ್ದೇಶಕ ರಕ್ಷಿತ್ ಶೆಟ್ಟಿ (Rakshit Shetty) ಯವರ ಸಪ್ತ ಸಾಗರದಾಚೆ ಎಲ್ಲೊ ಸಿನಿಮಾ ಭರ್ಜರಿ ಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾವನ್ನು ಅಭಿಮಾನಿಗಳು ಮೆಚ್ಚಿದ್ದು, ರಕ್ಷಿತ್ ಶೆಟ್ಟಿ ಯವರ ದಾಖಲೆಯ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾವು ಸೇರಲಿದೆ. ಕನ್ನಡದ ಬಹು ಭಾಷಾ ನಟ ಪ್ರಕಾಶ್ ರಾಜ್ (Prakash Raj) ಇದೀಗ ಸಪ್ತ ಸಾಗರದಾಚೆ ಎಲ್ಲೊ ಕನ್ನಡ ಸಿನಿಮಾ ನೋಡಿದ್ದಾರೆ.
ಅದನ್ನ ನೋಡಿ ನೇರವಾಗಿ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯವನ್ನ ಸುಂದರವಾಗಿಯೂ ಬರೆದುಕೊಂಡಿದ್ದಾರೆ. ಪ್ರಕಾಶ್ ರಾಜ್ ಅವರು ಎಂದೂ ಸಿನಿಮಾಗಳ ಬಗ್ಗೆ ಕೆಟ್ಟದಾಗಿ ಮಾತನಾಡೋದಿಲ್ಲ. ಆ ರೀತಿಯ ಹೇಳಿಕೆನೂ ಹೆಚ್ಚು ಕೇಳಿ ಬಂದಿಲ್ಲ ಅಂತಲೇ ಹೇಳಬಹುದು. ಆದರೆ ಪ್ರಕಾಶ್ ರಾಜ್ ಇತರ ಎಲ್ಲ ವಿಚಾರಗಳನ್ನ ಕೂಡ ಸೂಕ್ಷ್ಮವಾಗಿಯೇ ಗಮನಿಸುತ್ತಾರೆ. ತಮಗಿನಿಸರೋ ಮಾತುಗಳನ್ನ ನೇರವಾಗಿಯೇ ಹೇಳುತ್ತಾರೆ.

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ನೋಡಿದ ಪ್ರಕಾಶ್ ರಾಜ್
ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅಭಿನಯದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವನ್ನು ಪ್ರಕಾಶ್ ರಾಜ್ ನೋಡಿದ್ದಾರೆ. ನೋಡಿದ್ಮೇಲೆ ತಮಗೆ ಅನಿಸಿರೋ ಅಭಿಪ್ರಾಯವನ್ನ ಕೂಡ ವ್ಯಕ್ತಪಡಿಸಿದ್ದಾರೆ. ನೇರವಾದ ಮಾತಿನಿಂದ ಪ್ರಕಾಶ್ ರಾಜ್ ಆಗಾಗ ಹಲವರ ಕೆಂಗಣ್ಣಿಗೂ ಗುರಿ ಆಗುತ್ತಾರೆ. ಆದರೆ ಎಂದೂ ಸಿನಿಮಾಗಳನ್ನ ಕೆಟ್ಟದಾಗಿ ಟೀಕಿಸಿರೋ ಉದಾಹರಣೆಗಳಿಲ್ಲ ಅಂತಲೇ ಹೇಳಬಹುದು. ಪ್ರಕಾಶ್ ರಾಜ್ ಅವರು ಸಿನಿಮಾಗಳ ಕುರಿತು ಒಳ್ಳೆ ಅಭಿಪ್ರಾಯಗಳನ್ನೆ ಹೇಳುತ್ತಾರೆ. ಅದರೊಟ್ಟಿಗೆ ಒಳ್ಳೆ ಸಿನಿಮಾಗಳನ್ನೆ ನೋಡಲು ಆಯ್ಕೆ ಮಾಡಿಕೊಳ್ತಾರೆ.
ಒಂದು ಸುಂದರ ಹೃದಯ ಸ್ಪರ್ಶಿ ಅನುಭವ!
“ಸಪ್ತ ಸಾಗರದಾಚೆ ಎಲ್ಲೋ. ಆಹಾ!! ಒಂದು ಸುಂದರ. ಹೃದಯಸ್ಪರ್ಶಿ ಅನುಭವ don’t miss” ಎಂದು ಪ್ರಕಾಶ್ ರಾಜ್ ಬರೆದುಕೊಂಡಿದ್ದಾರೆ. ಈ ಒಂದು ಅನುಭವ ಸಹಜವಾಗಿಯೇ ಎಲ್ಲರಿಗೂ ಆಗಿದೆ. ಸಿನಿಮಾ ಪ್ರತಿ ಪ್ರೇಕ್ಷಕರ ಮನದಲ್ಲೂ ಜಾಗ ಮಾಡಿಕೊಂಡಿದೆ ಅಂತಲೇ ಹೇಳಬಹುದು.ಅಷ್ಟು ಸುಂದರವಾದ ಈ ಸಿನಿಮಾವನ್ನ ಪ್ರಕಾಶ್ ರಾಜ್ ನೋಡಿದ್ದಾರೆ ಅನ್ನೋದೇ ವಿಶೇಷ ಅಂತಲೇ ಹೇಳಬಹುದು. ರಕ್ಷಿತ್ ಶೆಟ್ರು ಕೂಡ ಈ ಒಂದು ರಿಯಾಕ್ಷನ್ ಕಂಡು ಖುಷಿಪಟ್ಟಿದ್ದಾರೆ. Thank you Anna ಅಂತಲೇ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
“ಸಪ್ತ ಸಾಗರದಾಚೆ ಎಲ್ಲೋ “.. ಆಹಾ!! ಒಂದು ಸುಂದರ .. ಹ್ರದಯಸ್ಪರ್ಶಿ ಅನುಭವ .. don’t miss . thank you @hemanthrao11 @rakshitshetty @AdvaithaAmbara @rukminitweets @Chaithra_Achar_ @charanrajmr2701 pic.twitter.com/lzyc2NytXL
— Prakash Raj (@prakashraaj) October 6, 2023
ಪ್ರಕಾಶ್ ರಾಜ್ ಇಡೀ ಟೀಮ್‌ಗೆ ಒಂದು ಸ್ಪೂರ್ತಿ ನೀಡಿದ್ದಾರೆ
ಪ್ರಕಾಶ್ ರಾಜ್ ಅಂತಹ ನಟರಿಗೆ ಕಲೆ ಮತ್ತು ಸಾಹಿತ್ಯದ ಅದ್ಭುತ ಅನುಭವಗಳೇ ಇವೆ. ಅದನ್ನ ಆಗಾಗ ತಮ್ಮ ಅಭಿಪ್ರಾಯಗಳಲ್ಲಿ ಹೇಳೋದು ಇದೆ. ಅದೇ ರೀತಿ ಮೊನ್ನೆ ಅಕ್ಟೋಬರ್-5 ರಂದು ಸಪ್ತ ಸಾಗರದಾಚೆ ಎಲ್ಲೋ ಚಿತ್ರ ನೋಡಿರೋ ಪ್ರಕಾಶ್ ರಾಜ್ ತಮ್ಮ ಮನದ ಮಾತುಗಳನ್ನ ಬರೆದುಕೊಂಡು ಇಡೀ ಟೀಮ್‌ಗೆ ಒಂದು ಸ್ಪೂರ್ತಿ ನೀಡಿದ್ದಾರೆ ಅಂತಲೂ ಹೇಳಬಹುದು. ಪ್ರಕಾಶ್ ರಾಜ್ ಅವರ ಈ ಒಂದು ರಿಯಾಕ್ಷನ್ ಇಡೀ ತಂಡಕ್ಕೆ ಖುಷಿ ಕೊಟ್ಟಿದೆ. ಡೈರೆಕ್ಟರ್ ಹೇಮಂತ್ ರಾವ್, ನಟಿ ರುಕ್ಮಿಣಿ ವಸಂತ್ ಸೇರಿದಂತೆ ಚಿತ್ರಕ್ಕೆ ಕೆಲಸ ಮಾಡಿದವರು ಇದನ್ನ ನೋಡಿ ಸಂತೋಷ ಪಟ್ಟಿದ್ದಾರೆ ಅಂತಲೂ ಹೇಳಬಹುದು.