Salaar And KGF: ಸಾಲಾರ್ ಮತ್ತು KGF ನಡುವೆ ಲಿಂಕ್ ಇದೆಯಾ…? ಟ್ವಿಸ್ಟ್ ಬಗ್ಗೆ ಮಾಹಿತಿ ಬಿಚ್ಚಿಟ್ಟ ಪ್ರಶಾಂತ್ ನೀಲ್.

ಸಲಾರ್ ಮತ್ತು ಕೆಜಿಎಫ್ ನಡುವೆ ಸಂಬಂಧ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿನಿಮಾ ನಿರ್ದೇಶಕ.

Prashanth Neel About Salaar And KGF Connection: ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ (Prashant Neel) ನಿರ್ದೇಶನದ ಸಲಾರ್ (Salaar) ಸಿನಿಮಾದ ನಿರೀಕ್ಷೆಯಲ್ಲಿ ಸಿನಿ ಪ್ರೇಕ್ಷಕರು ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಸಲಾರ್ ಭಾಗ ಒಂದರ ಎಲ್ಲಾ ಕೆಲಸಗಳು ಮುಗಿದಿದ್ದು ಡಿಸೆಂಬರ್ 22 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಲಿದೆ.

ಬಿಡುಗಡೆಗೆ ರೆಡಿ ಆಗಿರುವ ಸಿನಿಮಾದ ಕುರಿತು ಪ್ರಚಾರಕ್ಕೆ ಇಳಿದಿರುವ ನಟ ಪ್ರಭಾಸ್ ಹಾಗು ತಂಡ ಎಲ್ಲಾ ಕಡೆ ತನ್ನ ಸಿನಿಮಾ ಪ್ರಮೋಷನ್‌ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದ ಹಿಟ್ ನೋಡಿದರೆ ಸಾಲಾರ್ ಇನ್ನು ಯಾವ ರೇಂಜ್ ಗೆ ಇರಬಹುದು ಎಂಬ ಪ್ರಶ್ನೆ ಎಲ್ಲಾರ ಮನಸ್ಸಲಿ ಮೂಡಿದೆ. ಹಾಗು ಇನ್ನು ಕೆಲವರು ಸಾಲಾರ್ ಹಾಗು ಕೆಜಿಎಫ್ ಸಿನಿಮಾಗೆ ಸಂಬಂಧ ಇದೆ ಎಂದೆಲ್ಲ ಸುದ್ದಿ ಹರಿದಾಡಿಸುತ್ತಿದ್ದಾರೆ.

Prashanth Neel About Salaar And KGF Connection
Image Credit: Koimoi

ನಟ ಪ್ರಭಾಸ್ ಅಭಿನಯದ ಸಲಾರ್ ಬಿಡುಗಡೆ

ಪ್ರಭಾಸ್ ಸಿನಿಮಾ ಅಂದ ಕೂಡಲೇ ನೆನಪಿಗೆ ಬರುವುದು ಬಾಹುಬಲಿ. ಬಾಹುಬಲಿ ಮೂಲಕ ತನ್ನ ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ನಟ ಪ್ರಭಾಸ್. ಇವರ ಅಭಿನಯದ ಸಲಾರ್ ಯಾವ ರೀತಿ ಇರಬಹುದು ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಬಾಹುಬಲಿ ನಂತರ ಪ್ರಭಾಸ್ ಅಭಿನಯದ ಚಿತ್ರಗಳು ತೆಲುಗು ಪ್ರೇಕ್ಷಕರನ್ನು ಮೆಚ್ಚಿಸಲು ವಿಫಲವಾದವು, ಆದರೆ ಕ್ರೇಜ್ ಕಡಿಮೆಯಾಗಲಿಲ್ಲ. ಅದಕ್ಕೆ ಕಾರಣ ಪ್ರಭಾಸ್ ಫ್ಯಾನ್ ಫಾಲೋಯಿಂಗ್. ಅಲ್ಲದೆ ಅವರ ಕ್ರೇಜಿ ಕಾಂಬಿನೇಷನ್‌ಗಳು. ಈ ಕ್ರಮದಲ್ಲಿ ಪ್ರಭಾಸ್ ಅವರ ಸಲಾರ್ ಚಿತ್ರಕ್ಕಾಗಿ ನಿರೀಕ್ಷೆಗಳು ಗಗನಕ್ಕೇರಿವೆ.

ಕೆಜಿಎಫ್ ಗೂ ಸಲಾರಿಗೂ ಸಂಬಂಧವಿಲ್ಲ

ಸಲಾರ್ ಭಾಗ-1 ಡಿಸೆಂಬರ್ 22 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದ್ದು, ಇದರ ಭಾಗವಾಗಿ ಈ ಚಿತ್ರದ ಟ್ರೈಲರ್ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ ಈ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

Salaar And KGF Movie
Image Credit: Addatoday

ಅದರಲ್ಲೂ ಸಲಾರ್ ಜೊತೆ ಕೆಜಿಎಫ್ ಗೆ ಲಿಂಕ್ ಇದೆಯೇ ಎಂಬ ಪ್ರಶ್ನೆಗೂ ಪ್ರಶಾಂತ್ ನೀಲ್ ಪ್ರತಿಕ್ರಿಯಿಸಿದ್ದಾರೆ. ಕೆಜಿಎಫ್ ಮತ್ತು ಸಲಾರ್ ಎರಡು ವಿಭಿನ್ನ ಕಥೆಗಳು ಎಂದು ಪ್ರಶಾಂತ್ ನೀಲ್ ಸ್ಪಷ್ಟಪಡಿಸಿದ್ದಾರೆ. ಕೆಜಿಎಫ್ ಗೂ ಸಾಲಾರಿಗೂ ಸಂಬಂಧವಿಲ್ಲ ಎನ್ನಲಾಗುತ್ತಿದೆ. ಅಲ್ಲದೇ ಕೆಜಿಎಫ್ ಜೊತೆ ಸಲಾರ್ ಹೋಲಿಕೆ ಬೇಡ, ವಿಭಿನ್ನ ಭಾವನೆಗಳು, ವಿಭಿನ್ನ ಕಥಾಹಂದರ ಇರುತ್ತದೆ… ಕೆಜಿಎಫ್ ಗೂ ಮುನ್ನವೇ ಸಲಾರ್ ಕಥೆ ಬರೆದಿದ್ದೇನೆ ಎಂದು ಹೇಳುವ ಮೂಲಕ ಅಭಿಮಾನಿಗಳಿಗಿದ್ದ ದೊಡ್ಡ ಅನುಮಾನವನ್ನು ಹೋಗಲಾಡಿಸಿದ್ದಾರೆ. ಇನ್ನು ಸಲಾರ್ ಯಾವ ರೇಂಜ್ ಗೆ ಸದ್ದು ಮಾಡುತ್ತದೆ ಎಂದು ಕಾದುನೋಡುವ.

Leave A Reply

Your email address will not be published.