Property TaX: ಆಸ್ತಿ ಖರೀದಿ ಮಾಡುವ ಎಲ್ಲಾ ಜನರಿಗೂ ಇಂದಿನಿಂದ ಹೊಸ ನಿಯಮ, ಕೇಂದ್ರದ ಹೊಸ ತೆರಿಗೆ ನಿಯಮ.
ಇಂದಿನಿಂದ ರಾಜ್ಯಾದ್ಯಂತ ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ, ದುಬಾರಿ ಪ್ರಕ್ರಿಯೆ
Property Registration Fee Hike: ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಂತ ಮನೆ, ಆಸ್ತಿ ಹೊಂದುವ ಕನಸಿರುತ್ತದೆ ಹಾಗೆ ಈಗಾಗಲೇ ಜಾಗ ಖರೀದಿ ಮಾಡುವುದು ಬಹಳ ಕಷ್ಟವಾಗಿದ್ದು, ಜಾಗಗಳ ಬೆಲೆ ಗಗನಕ್ಕೆ ಏರುತ್ತಿದೆ. ಆಸ್ತಿ ಖರೀದಿ ಮಾಡುವುದು ಎಷ್ಟು ಕಷ್ಟವೋ ಹಾಗೆ ಇನ್ನು ನೋಂದಾವಣೆ ಮಾಡಿಸುವುದು ಅಷ್ಟೇ ಕಷ್ಟ ಆಗಲಿದೆ. ಇಂದಿನಿಂದ ಆಸ್ತಿ ನೋಂದಣಿ ಶೇಕಡ 20 ರಿಂದ 30ರವರೆಗೆ ದುಬಾರಿ ಆಗಲಿದೆ.
ರಾಜ್ಯದಾದ್ಯಂತ ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆಯಾಗಿದೆ. ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗುವ ಆಸ್ತಿಗಳಿಗೆ ಪರಿಷ್ಕೃತ ಮಾರ್ಗಸೂಚಿ ದರ ಅನ್ವಯವಾಗಲಿದ್ದು ಶೇಕಡ 20 ರಿಂದ 30ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕದ ಹೊರೆ ಹೆಚ್ಚಾಗಲಿದೆ.
ಆಸ್ತಿ ನೋಂದಣಿ ನಿಯಮದಲ್ಲಿ ಬದಲಾವಣೆ
ಹೌದು ರಾಜ್ಯ ಸರ್ಕಾರ ಈಗ ಆಸ್ತಿ ನೋಂದಾವಣೆ ಶುಲ್ಕವನ್ನ ಬದಲಾವಣೆ ಮಾಡಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ರಾಜ್ಯದಲ್ಲಿ ಹೊಸದಾಗಿ ಅಧಿಕಾರ ಸ್ವೀಕಾರ ಮಾಡಿದ ಕಾಂಗ್ರೆಸ್ ಕೆಲವು ನಿಯಮದಲ್ಲಿ ಬದಲಾವಣೆ ಮಾಡಿದ್ದು ಈಗ ಆಸ್ತಿ ನೋಂದಣಿ ನಿಯಮದಲ್ಲಿ ಕೂಡ ಬದಲಾವಣೆ ಮಾಡಿದೆ ಎಂದು ಹೇಳಬಹುದು.

ಇನ್ನು ಮುಂದೆ ಆಸ್ತಿ ಖರೀದಿಯಲ್ಲಿ ಶುಲ್ಕ ಹೆಚ್ಚಳ
ಸೆ. 29ಕ್ಕೆ ರಾಜ್ಯದಲ್ಲಿ ಹಳೆಯ ಮಾರ್ಗಸೂಚಿ ದರ ಅನ್ವಯ ಆಸ್ತಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಸೆಪ್ಟೆಂಬರ್ 30, ಅಕ್ಟೋಬರ್ 1 ಮತ್ತು ಅಕ್ಟೋಬರ್ 2ರಂದು ಸತತವಾಗಿ ರಜೆ ಇದ್ದು ಅಕ್ಟೋಬರ್ 3ರಿಂದ ಹೊಸ ಮಾರ್ಗಸೂಚಿ ದರದ ಅನ್ವಯ ಆಸ್ತಿ ನೋಂದಣಿ ಪ್ರಕ್ರಿಯೆ ನಡೆಯಲಿದೆ. ಇಂದಿನಿಂದ ಆಸ್ತಿ ಖರೀದಿದಾರರಿಗೆ ಹೆಚ್ಚಿನ ಶುಲ್ಕದ ಹೊರ ಬೀಳಲಿದೆ.
ಹೊಸ ದರ ಜನರ ಮೇಲೆ ನೇರ ಪರಿಣಾಮವನ್ನ ಬೀರಲಿದೆ ಎಂದು ಹೇಳಬಹುದು. ಹೌದು ಆಸ್ತಿ ನೋಂದಾವಣೆ ಶುಲ್ಕವನ್ನ ಈಗ ಸರ್ಕಾರ ಬದಲಾಯಿಸಿದ್ದು ಜನರು ಇನ್ನುಮುಂದೆ ಹೆಚ್ಚಿನ ಶುಲ್ಕವನ್ನ ವಿದಿಸಬೇಕಾಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ.