Property Returns: ಮಕ್ಕಳಿಗೆ ಕೊಟ್ಟ ಆಸ್ತಿಯನ್ನ ಈಗ ಮರಳಿ ವಾಪಾಸ್ ಪಡೆಯಬಹುದು, ಹೈಕೋರ್ಟ್ ಇನ್ನೊಂದು ತೀರ್ಪು.
ಈ ಕಾನೂನಿನ ಮೂಲಕ ಪೋಷಕರು ಮಕ್ಕಳಿಂದ ಆಸ್ತಿ ಹಿಂಪಡೆಯಬಹುದು.
Property Returns Rules: ಪೋಷಕರು ಮಕ್ಕಳ ಭವಿಷ್ಯ ಭದ್ರವಾಗಿಸಲು ತಮ್ಮ ಸಂಪೂರ್ಣ ಜೀವನವನ್ನೇ ಮೀಸಲಿಡುತ್ತಾರೆ. ಮಕ್ಕಳು ಹುಟ್ಟಿದಾಗಿನಿಂದ ಬಾಲ್ಯ, ಶಿಕ್ಷಣ, ಉದ್ಯೋಗ ಕೊನೆಗೆ ಮದುವೆ ಹೀಗೆ ಎಲ್ಲಾ ಕರ್ತವ್ಯ ಗಳನ್ನೂ ಪಾಲಿಸುತ್ತಾರೆ. ಮಕ್ಕಳ ಸಂತೋಷಕ್ಕಾಗಿ ಪೋಷಕರು ಯಾವುದೇ ಆಸೆ ಇಟ್ಟುಕೊಳ್ಳದೇ ಎಲ್ಲವನ್ನು ಕೊಡಿಸಿ ಬೆಳೆಸುತ್ತಾರೆ.
ಮಕ್ಕಳ ಸಂತೋಷಕ್ಕಾಗಿ ಎಲ್ಲವನ್ನು ಮಾಡುವ ಜೀವ ಎಂದರೆ ಅದು ಪೋಷಕರು ಮಾತ್ರ. ಆದರೆ ವೃದ್ಧಾಪ್ಯದಲ್ಲಿ ಬಹುತೇಕ ಮಕ್ಕಳು ತಮ್ಮ ಪೋಷಕರಿಗೆ ಕಿರುಕುಳ ನೀಡುತ್ತಾರೆ. ಪೋಷಕರನ್ನು ಅವರ ಆಸ್ತಿ ಪಡೆದು ವೃದ್ಧಾಪ್ಯದಲ್ಲಿ ಮನೆಯಿಂದ ಹೊರ ಹಾಕುವ ಮಕ್ಕಳು ಸಹ ಇದ್ದಾರೆ.
ಮಕ್ಕಳ ವಿರುದ್ಧ ಕೇಸ್ ಹಾಕುವ ಅವಕಾಶ ಪೋಷಕರಿಗಿದೆ
ಪೋಷಕರಿಂದ ಆಸ್ತಿ ಪಡೆದು ಅವರನ್ನು ಮನೆಯಿಂದ ಹೊರ ಹಾಕಿದ ಮಕ್ಕಳ ವಿರುದ್ಧ ತಂದೆ ತಾಯಿ ಕಾನೂನಿನ ಮೊರೆ ಹೋಗಿ ಆಸ್ತಿಯನ್ನು ಹಿಂಪಡೆಯಬಹುದಾಗಿದೆ. ಈ ಕಾನೂನಿನ ಮೂಲಕ ಪೋಷಕರು ತಮ್ಮ ಹಕ್ಕುಗಳನ್ನು ಹಿಂಪಡೆಯಬಹುದಾಗಿದೆ. ಆದರೆ ಅನೇಕರಿಗೆ ಈ ಬಗ್ಗೆ ಮಾಹಿತಿ ಇಲ್ಲದೇ ವೃದ್ಧಾಪ್ಯದಲ್ಲಿ ಪಡಬಾರದ ಕಷ್ಟ ಪಡುತ್ತಿದ್ಧಾರೆ .
ಪೋಷಕರು ತಮ್ಮ ಆಸ್ತಿಯನ್ನು ಮಕ್ಕಳಿಂದ ವಾಪಸ್ ಪಡೆಯುವುದು ಹೇಗೆ..?
ಆಸ್ತಿಯನ್ನು ಮರಳಿ ಪಡೆಯಬೇಕು ಎಂದರೆ ಹಿರಿಯ ನಾಗರಿಕರು ತಮ್ಮ ಆಸ್ತಿಯನ್ನು ಮಕ್ಕಳಿಗೆ ವರ್ಗಾವಣೆ ಮಾಡುವ ಸಂದರ್ಭದಲ್ಲಿ ಈ ಷರತ್ತನ್ನು ಬಾಂಡ್ ಪೇಪರ್ನಲ್ಲಿ ದಾಖಲಿಸಿರಬೇಕು. ಒಂದು ವೇಳೆ ಬಾಂಡ್ನಲ್ಲಿದ್ದ ಯಾವುದೇ ಷರತ್ತುಗಳನ್ನು ಮಕ್ಕಳು ಉಲ್ಲಂಘನೆ ಮಾಡಿದಲ್ಲಿ ಈ ಉಡುಗೊರೆಯನ್ನು ಅಮಾನ್ಯವೆಂದು ಘೋಷಣೆ ಮಾಡುವ ಅಧಿಕಾರ ಹಿರಿಯ ನಾಗರಿಕರಿಗೆ ಇರುತ್ತದೆ. ಆಗ ಮಕ್ಕಳು ಪೋಷಕರಿಂದ ಪಡೆದ ಆಸ್ತಿಯನ್ನು ಅವರಿಗೆ ಹಿಂದಿರುಗಿಸಬೇಕಾಗುತ್ತದೆ.
ಮಕ್ಕಳು ಪೋಷಕರನ್ನು ನೋಡಿಕೊಳ್ಳದಿದ್ದರೆ ಆಸ್ತಿ ಹಿಂದಕ್ಕೆ ಪಡೆಯಬಹುದು.
ಹಿರಿಯ ನಾಗರಿಕರ ಕಾಯ್ದೆಯಡಿಯಲ್ಲಿ, ಒಬ್ಬ ಹಿರಿಯ ನಾಗರಿಕನು ತನ್ನ ಮಗುವಿಗೆ ಆಸ್ತಿಯನ್ನು ಮೂಲಭೂತ ಸೌಕರ್ಯಗಳನ್ನು ಒದಗಿಸಲೇಬೇಕು ಎಂಬ ಕಂಡಿಷನ್ನೊಂದಿಗೆ ಉಡುಗೊರೆ ರೂಪದಲ್ಲಿ ನೀಡಬಹುದು ಅಥವಾ ವರ್ಗಾಯಿಸಬಹುದು.
ಹಿರಿಯ ನಾಗರಿಕರ ರಕ್ಷಣೆಗಾಗಿ ಈ ಕಾಯ್ದೆಯನ್ನು 2007ರಲ್ಲಿ ಜಾರಿಗೆ ತರಲಾಗಿದೆ. ಒಂದು ವೇಳೆ ಆಸ್ತಿ ವರ್ಗಾವಣೆ ಆದ ಬಳಿಕ ಮಕ್ಕಳು ಪೋಷಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲರಾದಲ್ಲಿ ಆ ಆಸ್ತಿಯನ್ನು ಹಿರಿಯ ನಾಗರಿಕರು ಮರಳಿ ಪಡೆಯಬಹುದಾಗಿದೆ.