Puttakkana Makkalu Bangaramma: ಬಂಗಾರಮ್ಮನ ಇನ್ನೊಂದು ಮುಖ ಸ್ನೇಹ ಮುಂದೆ ಬಯಲಾಗಿದೆ, ಕಣ್ಣೀರು ಹಾಕಿದ ಸ್ನೇಹ.
ಚಂದ್ರು ಹಾಗು ವಸುವನ್ನು ಒಂದು ಮಾಡಲು ಮುಂದಾದ ಸ್ನೇಹ, ಎಲ್ಲರ ಮುಂದೆ ಸತ್ಯ ಬಾಯ್ಬಿಟ್ಟ ಚಂದ್ರು.
Puttakkana Makkalu Serial Sneha: ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಇತ್ತೀಚಿಗೆ ಬಹಳ ಕುತೂಹಲಕಾಗಿ ಮೂಡಿಬರುತ್ತಿದೆ. ದಿನಕ್ಕೊಂದು ತಿರುವು ಹೊಂದಿರುವ ಈ ಧಾರಾವಾಹಿ ನೋಡುಗರ ಮನಸ್ಸನ್ನು ಗೆಲ್ಲುತ್ತಿದೆ. ಇನ್ನು ಧಾರಾವಾಹಿಯ ಕತೆ ಜನರಿಗೆ ಬಹಳ ಇಷ್ಟವಾಗುತ್ತಿದ್ದು TRP ಅಲ್ಲಿ ಕೂಡ ಧಾರವಾಹಿ ಅಗ್ರ ಸ್ಥಾನದಲ್ಲಿ ಇದೆ ಎಂದು ಹೇಳಿದರೆ ತಪ್ಪಾಗಲ್ಲ.
ಒಂದು ಕಡೆ ರಾಜಿ ಪುಟ್ಟಕ್ಕನ ತಲೆ ಕೆಡಿಸುತ್ತಿದ್ದಾಳೆ. ಪುಟ್ಟಕ್ಕನ ಬಳಿ ರಾಜಿ, ನೀನು ನಿನ್ನ ತಾಳಿಯನ್ನು ಬಿಚ್ಚಿಕೊಡು ಎನ್ನುತ್ತಾಳೆ. ಅಷ್ಟೇ ಅಲ್ಲದೆ ಯಾವುದಾದರು ಆಶ್ರಮ ಸೇರಿಕೋ, ಯಾಕೆ ಬೇಕು ನಿನಗೆ ಇದೆಲ್ಲ ಎಂದು ಅವಮಾನ ಮಾಡುತ್ತಾಳೆ. ಆದರೆ ಪುಟ್ಟಕ್ಕ ಮಾತ್ರ ರಾಜಿಯ ಮಾತಿಗೆ ತಲೆ ಕೆಡಿಸಿಕೊಳ್ಳದೇ ರಾಜಿ ಏನೇ ಅಂದರು ಸುಮ್ಮನಾಗುತ್ತಾಳೆ.

ಚಂದ್ರುಗೆ ಬೈದು ಅವಮಾನ ಮಾಡಿದ ಬಂಗಾರಮ್ಮ
ಬಂಗಾರಮ್ಮನ ಮನೆಯಲ್ಲಿ ದೊಡ್ಡ ಯುದ್ಧವೇ ಆಗುತ್ತಿದೆ ಎನ್ನಬಹುದು. ಚಂದ್ರು ತನ್ನ ಮನೆ ಬಿಟ್ಟು ವಸು ಜೊತೆ ಸೇರಬೇಕು, ಜೀವನ ಮಾಡಬೇಕೆಂದು ಅಂದುಕೊಂಡು ಬಂಗಾರಮ್ಮನ ಮನೆಗೆ ಬರುತ್ತಾನೆ. ಆಗ ಬಂಗಾರಮ್ಮ ಇದ್ಯಾವುದನ್ನು ಲೆಕ್ಕಿಸದೇ ಚಂದ್ರೂನೆ ನಂಜಮ್ಮನಿಗೆ ಜಾಮೀನು ಕೊಡಿಸಿದ್ದು ಎಂದು ತಪ್ಪು ತಿಳಿದು, ನಾನು ನನ್ನ ಮಗಳನ್ನು ನಿನ್ನ ಮನೆಗೆ ಕಳುಹಿಸುವುದಿಲ್ಲ. ನಿನ್ನ ಅಮ್ಮನ ಮೇಲೆ ನನಗೆ ನಂಬಿಕೆ ಇಲ್ಲ ಎಂದು ಹೇಳುತ್ತಾಳೆ.
ಚಂದ್ರು ಹಾಗು ವಸು ಪರ ವಹಿಸಿದ ಸ್ನೇಹ
ಚಂದ್ರು ಅಣ್ಣಯ್ಯ ಹಾಗು ವಸು ಅತ್ತಿಗೆ ಒಂದಾಗಬೇಕು ಅನ್ನೋದೊಂದೇ ಸ್ನೇಹ ಆಸೆ ಹಾಗಾಗಿ ಬಂಗಾರಮ್ಮನ ವಿರುದ್ಧ ಸ್ನೇಹ ಮಾತಾಡುತ್ತಾಳೆ. ಅಣ್ಣಯ್ಯ ಮತ್ತು ಅತ್ತಿಗೆ ಒಂದಾಗಬೇಕು ನೀವು ಯಾಕೆ ಅವರನ್ನು ಒಂದಾಗಲು ಬಿಡುತ್ತಿಲ್ಲ ಎಂದು ಬಂಗಾರಮ್ಮನಲ್ಲಿ ಕೇಳುತ್ತಾಳೆ. ಆಗ ಬಂಗಾರಮ್ಮ ಇದು ನನ್ನ ಅಳಿಯ ಹಾಗು ಮಗಳ ವಿಷ್ಯ, ನನಗೆ ಏನು ಮಾಡಬೇಕೆಂದು ತಿಳಿದ್ದಿದೆ, ಅಷ್ಟೇ ಅಲ್ಲದೆ ನೀನು ಆ ನಂಜಮ್ಮನ ಕಡೆಯವಳು ಅನ್ನುತ್ತಾಳೆ. ಆಗ ಸ್ನೇಹ ನಾನು ನಮ್ಮ ಮೆಸ್ ಗೆ ಬೆಂಕಿ ಹಚ್ಚಿದವರ ಕಡೆಯವಳಲ್ಲ, ಕೆಟ್ಟವರಿಗೆ ಕಟ್ಟದೆ ಯೋಜನೆ ಬರುತ್ತದೆ ಎಂದು ಕಟುವಾಗಿ ಬಂಗಾರಮ್ಮನಿಗೆ ಹೇಳುತ್ತಾಳೆ.

ಸ್ನೇಹಾಳಿಗೆ ಸತ್ಯ ಹೇಳಿದ ಚಂದ್ರು
ಚಂದ್ರುಗೆ ಸ್ನೇಹ ಬಂಗಾರಮ್ಮನ ವಿರುದ್ಧ ಮಾತನಾಡಿದ್ದು ಇಷ್ಟ ಆಗದೇ, ನನ್ನ ಅತ್ತೆ ಬಗ್ಗೆ ನಿನಗೇನೂ ಗೊತ್ತು ಅವರು ಮಾಡಿದ ಒಳ್ಳೆ ಕೆಲಸಗಳು ನಿನಗಿನ್ನೂ ಗೊತ್ತಿಲ್ಲ. ನಿನ್ನ ತಂಗಿ ಸುಮಾ ಕಾಲೇಜು ಸೇರಲು ಕಾರಣವೇ ಇವರು, ಕಾಲೇಜ್ ಫೀಸ್ ಕಟ್ಟಿ ದೊಡ್ಡತನವನ್ನು ತೋರಿದ್ದಾರೆ ಎಂದು ಫೀಸ್ ಕಟ್ಟಿರೋ ಸತ್ಯವನ್ನು ಎಲ್ಲರ ಬಳಿ ಚಂದ್ರು ಹೇಳುತ್ತಾನೆ. ಇದನ್ನು ಕೇಳಿದ ಸ್ನೇಹ ಹಾಗು ಕಂಠಿ ಶಾಕ್ ಆಗಿ ನಿಲ್ಲುತ್ತಾರೆ. ಮುಂದಿನ ಸಂಚಿಕೆಯಲ್ಲಿ ಸತ್ಯ ತಿಳಿದ ಸ್ನೇಹ ಬಂಗಾರಮ್ಮನ ಒಳ್ಳೆ ಗುಣದ ಬಗ್ಗೆ ಅರಿತುಕೊಳ್ಳುತ್ತಾಳಾ ಎಂದು ನೋಡಬೇಕಿದೆ.