Puttakkana Makkalu: ಪುಟ್ಟಕ್ಕನ ಮಾತಿಗೆ ಕಟ್ಟುಬಿದ್ದ ಕಂಠಿ, ಪುಟ್ಟಕ್ಕನಿಗೆ ಆತಂಕದಲ್ಲಿ ಮಾತುಕೊಟ್ಟ ಕಂಠಿ.
ಕಂಠಿ ಹತ್ತಿರ ಮಾತು ತೆಗೆದುಕೊಂಡ ಪುಟ್ಟಕ್ಕ, ಪುಟ್ಟಕ್ಕನಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಆತಂಕದಲ್ಲಿ ಕಂಠಿ.
Puttakkana Makkalu Serial Latest Episode: ಪುಟ್ಟಕ್ಕನ ಮಕ್ಕಳು ಧಾರಾವಾಹಿ (Puttakkana Makkalu) ದಿನದಿಂದ ದಿನಕ್ಕೆ ಹೊಸ ತಿರುವುಗಳು ಕಾಣುತ್ತಿದೆ. ಈಗಾಗಲೇ ಪುಟ್ಟಕ್ಕ ಎಲ್ಲ ಕಳೆದುಕೊಂಡಳು ಎನ್ನುವಷ್ಟರಲ್ಲಿ ಕಂಠಿ ತಳ್ಳುವ ಗಾಡಿಯಲ್ಲಿ ಮೆಸ್ ಪ್ರಾಂಭಿಸಿ ಕೊಟ್ಟಿದ್ದಾನೆ. ಇಬ್ಬರು ಮೆಸ್‌ನಲ್ಲಿ ಬಹಳ ಕಷ್ಟ ಪಟ್ಟು ದುಡಿಯುತ್ತಾ ಇದ್ದಾರೆ , ಪುಟ್ಟಕ್ಕ ಕಂಠಿಗೆ ಬುದ್ದಿ ಹೇಳುತ್ತಾರೆ. ನಾವು ನಮ್ಮ ಖುಷಿಗಾಗಿ ಮೆಸ್ ನಡೆಸಬೇಕು ದುಡ್ಡು ಮಾಡಬೇಕು ಎನ್ನುವ ನಿಟ್ಟಿನಲ್ಲಿ ನಾವು ದುಡಿಯಬಾರದು.
ನಮಗೆ ಈ ಕೆಲಸ ಮಾಡುವುದರಿಂದ ನೆಮ್ಮದಿ ಸಿಗಬೇಕು ಹಾಗಿದ್ದಾಗ ಮಾತ್ರ ನಾವು ಮಾಡಿದ ಕೆಲಸ ಸಾರ್ಥಕ ಆಗುತ್ತದೆ ಎಂದು ಹೇಳುತ್ತ ಇದ್ದಾರೆ. ಇನ್ನೂ ಅವರಿಬ್ಬರೂ ಕೂಡ ಈ ಕೆಲಸದ ಮಧ್ಯೆ ಊಟ ಮಾಡುವುದನ್ನು ಮರೆತು ಹೋಗಿದ್ದರು. ಪುಟ್ಟಕ್ಕ ಕಂಠಿಗೆ ಊಟ ಬಡಿಸುಕೊಟ್ಟರೆ ಕಂಠಿ ಪುಟ್ಟಕ್ಕಂಗೆ ಊಟ ಬಡಿಸಿ ಕೊಡುತ್ತಾನೆ. ಕೊನೆಗೂ ಇಬ್ಬರು ಖುಷಿಯಲ್ಲಿ ಊಟ ಮಾಡುತ್ತಾರೆ.

ಅಮ್ಮ ಮತ್ತು ಹೆಂಡತಿಯ ಮಧ್ಯೆ ಸಿಕ್ಕಿಬಿದ್ದ ಕಂಠಿ
ಇನ್ನೂ ಕಂಠಿಗೆ ಸ್ನೇಹಾ ಹಾಗೂ ಅಮ್ಮನನ್ನು ಹೇಗೆ ಸರಿ ಮಾಡಬೇಕು ಎಂಬುವುದೇ ಬಹಳ ದೊಡ್ಡ ಸಮಸ್ಯೆ. ಇಬ್ಬರಲ್ಲೂ ಒಬ್ಬರಿಗೊಬ್ಬರು ಆಗಿ ಬರುವುದಿಲ್ಲ. ಎನು ಮಾಡುವುದು ಎಂದು ತಿಳಿಯದೇ ಕಂಠಿ ತಲೆ ಕೆಟ್ಟು ಹೋಗಿದೆ. ಆದರೂ ಎನು ಮಾತನಾಡದೆ ಯಾರ ಬಳಿಯೂ ಏನನ್ನು ಹೇಳದೆ ತನ್ನೊಳಗೆ ಕಂಠಿ ನೋವು ನುಂಗಿಕೊಂಡಿದ್ದಾನೆ. ನನ್ನ ಜೀವನ ಯಾವಾಗ ಸರಿ ಹೋಗಬಹುದು ಎಂದು ತನ್ನಲ್ಲೇ ಪ್ರಶ್ನೆ ಮಾಡಿಕೊಂಡು ಇದ್ದಾನೆ.
ಸ್ನೇಹಾಳ ಜೀವನದ ಬಗ್ಗೆ ಪುಟ್ಟಕ್ಕನಿಗೆ ಭಯ
ಪುಟ್ಟಕ್ಕಗೆ ಕಂಠಿ ಮಗನ ರೀತಿ ಹಾಗೆಯೇ ಆತನ ಬಳಿ ಏನೇ ದುಃಖ ತೋಡಿಕೊಂಡರು ಆತ ಅದನ್ನು ಪೂರ್ಣಗೊಳಿಸುತ್ತಾರೆ ಎನ್ನುವ ನಂಬಿಕೆ ಆಕೆಗೆ. ಅದೇ ಕಾರಣಕ್ಕೆ ಕಂಠಿ ಅಂದರೆ ಪುಟ್ಟಕ್ಕ ಗೆ ಬಹಳ ಇಷ್ಟ. ಇನ್ನೂ ಬಂಗಾರಮ್ಮಗೆ ಮಾತ್ರ ಸ್ನೇಹಾ ಮೇಲೆ ವಿಪರೀತ ಸಿಟ್ಟು ಯಾಕೆಂದರೇ ತನ್ನ ಜೊತೆ ಕ್ಷಮೆ ಕೇಳುವ ಹಾಗೆ ನಟಿಸಿ ಇದೀಗ ಎಲ್ಲರ ಎದುರು ಒಳ್ಳೆಯವಲಾಗಿ ಪೋಸ್ ಕೊಡುತ್ತಾಳೆ ಎಂದೆಲ್ಲ ವಸು ಜೊತೆ ತನ್ನ ಕೋಪ ಹೊರಕ್ಕೆ ಹಾಕುತ್ತಾಳೆ. ಇತ್ತ ಕಂಠಿ ಜೊತೆ ಪುಟ್ಟಕ್ಕ ಮಾತನಾಡುತ್ತ ಇರುತ್ತಾಳೆ. ನಾನು ಸಾಯುವ ಮುಂಚೆ ನಿಮ್ಮ ಮನೆಯಲ್ಲಿ ನೆಮ್ಮದಿಯ ವಾತಾವರಣ ನೋಡಬೇಕು ನೀವು ಸ್ನೇಹಾ ಚೆನ್ನಾಗಿ ಇರಬೇಕು ಎಂದೆಲ್ಲ ಹೇಳುತ್ತ ಇರುವಾಗ ಕಂಠಿಗೆ ಬಹಳ ನೋವಾಗುತ್ತದೆ.

ಮೆಸ್ ಗೆ ಬೆಂಕಿ ಇಟ್ಟ ನಂಜಮ್ಮ ಮೇಲೆ ಮಗ ಚಂದ್ರುಗೆ ಸಿಕ್ಕಾಪಟ್ಟೆ ಕೋಪ
ಇನ್ನೂ ನಂಜಮ್ಮನ ಮಗ ಚಂದ್ರುಗೆ ತನ್ನ ತಾಯಿ ಇಂತಹ ಕೆಲಸ ಮಾಡಿ ಬಿಟ್ಟಳು ಎನ್ನುವ ಬೇಸರವಿದೆ. ಚಂದ್ರುಗೆ ತನ್ನ ಅಮ್ಮನ ಮೇಲೆ ಬಹಳ ಕೋಪ ಕೂಡ ಬರುತ್ತದೆ ಆದರೂ ಎನು ಮಾತನಾಡದೆ ತುಟಿ ಕಚ್ಚಿ ಎಲ್ಲಾ ಸಹಿಸಿಕೊಂಡು ಮುನ್ನಡೆಯುತ್ತಾನೆ. ಇನ್ನೂ ಸಹನಾಗೆ ಆಕೆಯ ಗಂಡನ ಮನೆಗೆ ಹೋಗಲು ಇಷ್ಟ ಇಲ್ಲದೆ ಇದ್ದರೂ ತನ್ನ ತಾಯಿಗಾಗಿ ಹೋಗುತ್ತಾಳೆ. ಆ ಕೌಸಲ್ಯ ಸಹನಳನ್ನು ನಡೆಸಿಕೊಳ್ಳುವ ರೀತಿ ಕೂಡ ಎಲ್ಲರಿಗೂ ಬೇಸರ ತರಿಸುವಂತೆ ಇದೆ. ಆದರೆ ಇದೀಗ ಸಹನಾ ಮಾತ್ರ ಗಟ್ಟಿಗಿತ್ತಿ ಆಗಿದ್ದಾಳೆ ಎನ್ನಬಹುದು.