Puttakkana Makkalu Sneha: ದೊಡ್ಡ ಸಂಕಷ್ಟಕ್ಕೆ ಸಿಲುಕಿಕೊಂಡ ಪುಟ್ಟಕ್ಕನ ಮಗಳು ಸ್ನೇಹ, ಸ್ನೇಹ ಮೇಲೆ ಬಂಗಾರಮ್ಮನ ಆರೋಪ.
ಇನ್ನೊಂದು ದೊಡ್ಡ ಸಮಸ್ಯೆಯಲ್ಲಿ ಸಿಲುಕಿಕೊಂಡ ಸ್ನೇಹ, ಪುಟ್ಟಕ್ಕನ ಮಕ್ಕಳು ದಾಹರವಾಹಿಯಲ್ಲಿ ಟ್ವಿಸ್ಟ್.
Puttakkana Makkalu Sneha: ಪುಟ್ಟಕ್ಕನ ಮಕ್ಕಳು ಧಾರಾವಾಹಿ (Puttakkana Makkalu Serial) ಸಂಚಿಕೆಗಳು ಬಹಳ ಕುತೂಹಲಕಾರಿಯಾಗಿದ್ದು, ಕೌಸಲ್ಯ ಮನೆಯಲ್ಲಿ ಸುಮಾಳನ್ನು ಬಿಡಲು ಕಂಠಿ ಹಾಗೂ ಸ್ನೇಹಾ ಬಂದಿರುತ್ತಾರೆ. ಅಮ್ಮನ ಕರೆ ಬಂದ ತಕ್ಷಣ ಸ್ನೇಹಾಳನ್ನು ಕರೆದುಕೊಂಡು ಹೋಗಲು ಕಂಠಿ ಮುಂದೆ ಬಂದಾಗ ಸಹನಾ ಸ್ನೇಹಾನ ಬಳಿ ಹೇಳುತ್ತಾಳೆ.
ಸ್ನೇಹಾ ನೀನು ಹೋಗು ನಾನು ಇಲ್ಲಿ ಸುಮಳನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.ಸಹನಾ ಮಾತಿಗೆ ಬೆಲೆ ಕೊಟ್ಟು ಸ್ನೇಹ ಹಾಗು ಕಂಠಿ ಅಲ್ಲಿಂದ ಮನೆಗೆ ಹೊರಡುತ್ತಾರೆ. ಇದೀಗ ಜೈಲಿನಲ್ಲಿ ಇದ್ದ ಮಾರ ಬಿಡುಗಡೆಯಾಗಿ ಬಂಗಾರಮ್ಮ ಮನೆಗೆ ಬಂದಿದ್ದಾನೆ. ಮನೆಗೆ ಬಂದ ಮಾರ ಸ್ಫೋಟಕ ಹೇಳಿಕೆ ನೀಡಿ ಬಂಗಾರಮ್ಮ ಹಾಗೂ ಸ್ನೇಹಾ ಮಧ್ಯೆ ತಂದಿಡುವ ಎಲ್ಲಾ ಲಕ್ಷಣ ಕಾಣುತ್ತಿದೆ.

ಬಂಗಾರಮ್ಮನ ಬಳಿ ಸ್ನೇಹಾಳ ವಿರುದ್ಧ ದೂರು ನೀಡಿದ ಮಾರ
ಮಾರ ಬಂಗಾರಮ್ಮನ ಬಳಿ ಮೆಸ್ ಗೆ ಬೆಂಕಿ ಬಿದ್ದ ವಿಷಯವಾಗಿ ಇದಕ್ಕೆಲ್ಲ ಸ್ನೇಹಾ ಕಾರಣ ಆಕೆಯೇ ಇದೆಲ್ಲ ಮಾಡಿಸಿದ್ದು ಅನ್ನುವ ಹಾಗೆ ಮಾತನಾಡುತ್ತಾ ಇರುತ್ತಾನೆ. ಇದನ್ನು ಕೇಳಿದ ಬಂಗಾರಮ್ಮ ನೇರವಾಗಿ ಕಂಠಿಗೆ ಕರೆ ಮಾಡಿ ಮನೆಗೆ ಬರಲು ಹೇಳಿರುತ್ತಾಳೆ ಬಂಗಾರಮ್ಮ… ನೀನು ಬಾ.. ನಿನ್ನ ಜೊತೆ ಇರುವವರು ಬರುವುದಕ್ಕಿಂತ ಇಲ್ಲಿಗೆ ಬಾರದೆ ಇದ್ದರೆ ಚೆನ್ನ ಎಂದು ಹೇಳುತ್ತಾರೆ.
ಇದನ್ನು ಕೇಳಿಸಿಕೊಂಡ ಕಂಠಿ ಯಾಕೆ ಏನಾಯಿತು ಎಂದೆಲ್ಲ ವಿಚಾರಣೆ ಮಾಡಿದಾಗ ಬಂಗಾರಮ್ಮ ಏನು ಉತ್ತರಿಸದೆ ಇರುವುದನ್ನು ಕಂಡು ಆದಷ್ಟು ಬೇಗ ಮನೆಗೆ ಬರುತ್ತೇನೆ ಎಂದು ಹೇಳಿ ಕರೆ ಕಟ್ ಮಾಡುತ್ತಾನೆ. ಇತ್ತ ರಾಜೀ ಬಂಗಾರಮ್ಮಗೆ ಈ ಮುಂಚೆಯೇ ಸ್ನೇಹಾ ಬಗ್ಗೆ ಮಾತನಾಡಿರುತ್ತಾಳೆ. ಇದಕ್ಕೆಲ್ಲ ಕಾರಣ ಆಕೆಯೇ ಎಂಬುವುದನ್ನು ಹೇಳಿ ಬಂಗಾರಮ್ಮನ ಮನದಲ್ಲಿ ಸಾಕಷ್ಟು ಅನುಮಾನಗಳ ಹುತ್ತವನ್ನು ಬೆಳೆಸಿದ್ದಾಳೆ. ಇದೀಗ ಮಾರ ಕೂಡ ಅದೇ ಕೆಲಸ ಮಾಡುತ್ತಾ ಇದ್ದಾನೆ..

ಮಾರನ ಆಪಾದನೆ ಕೇಳಿ ತಬ್ಬಿಬ್ಬಾದ ಸ್ನೇಹ
ಇನ್ನೂ ಕಂಠಿ ಹಾಗು ಸ್ನೇಹ ಮನೆಗೆ ಬಂದಾಗ ಮಾರ ಬಂಗಾರಮ್ಮನ ಪಕ್ಕ ನಿಂತಿರುವುದನ್ನು ಕಂಡು ಕಂಠಿ ಶಾಕ್ ಆಗುತ್ತಾನೆ. ನೀನೇನು ಇಲ್ಲಿ ಎಂದು ಗುರಾಯಿಸಿ ಒಂದು ಏಟು ಹೊಡೆಯಲು ಹೋದಾಗ ಬಂಗಾರಮ್ಮ ತಡೆಯುತ್ತಾರೆ. ಇನ್ನೂ ಕಂಠಿ ತನ್ನ ತಾಯಿಯ ಬಳಿ ಇಲ್ಲಿಗೆ ಯಾಕೆ ಮಾರ ಬಂದಿದ್ದಾನೆ ಎಂಬೆಲ್ಲ ಪ್ರಶ್ನೆ ಕೇಳುತ್ತಾನೆ ಇದನ್ನು ಕೇಳಿದ ಬಂಗಾರಮ್ಮ, ಮಾರ ಬಂದ ಉದ್ದೇಶವನ್ನು ಹೇಳು ಎನ್ನುತ್ತಾಳೆ.
ನನಗೆ ಪುಟ್ಟಕ್ಕನ ಮೆಸ್‌ಗೆ ಬೆಂಕಿ ಬಿದ್ದ ಸಂದರ್ಭ ಒಬ್ಬರು ಕರೆ ಮಾಡಿದ್ದರೂ.. ಅವರು ಬೇರೆ ಯಾರೂ ಅಲ್ಲ ಸ್ನೇಹಾ ಎಂದಾಗ ಸ್ನೇಹಾಗೆ ಶಾಕ್ ಆಗುತ್ತದೆ. ನಾನು ಈತನಿಗೆ ಕರೆ ಮಾಡಿದ್ದೆನಾ ಎಂದು ಶಾಕ್ ಆಗುತ್ತಾಳೆ. ಕಂಠಿ ಮಾತ್ರ ಮಾರನ ವಿರುದ್ದ ಸಿಡಿದು ನಿಲ್ಲುತ್ತಾನೆ. ಅಷ್ಟೇ ಅಲ್ಲದೆ ಮಾರನಿಗೆ ತುಂಬ ಹೊಡೆಯುತ್ತಾನೆ ಬಂಗಾರಮ್ಮ ಹಾಗು ಸ್ನೇಹ ಎಷ್ಟೇ ತಪ್ಪಿಸಲು ಹೋದರು ಕಂಠಿ ಮಾತ್ರ ಮಾರನನ್ನು ಬಿಡುವಂತೆ ಕಾಣುತ್ತಿರಲಿಲ್ಲ. ಮುಂದಿನ ಸಂಚಿಕೆಯಲ್ಲಿ ಸ್ನೇಹ ಈ ಆರೋಪದಿಂದ ಹೇಗೆ ಹೊರಬರುತ್ತಾಳೆಂದು ಕಾದು ನೋಡಬೇಕಿದೆ.