Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್, ಶುರುವಾಗಿದೆ ಬಂಗಾರಮ್ಮ ಆಟ.
ಹಬ್ಬದ ಸಂಭ್ರಮದಲ್ಲಿ ಪುಟ್ಟಕ್ಕನ ಸಂಸಾರ, ಮಕ್ಕಳ ಜೊತೆ ಖುಷಿಯಿಂದ ಕಾಲ ಕಳೆಯುತ್ತಿರುವ ಪುಟ್ಟಕ್ಕ.
Puttakkana Makkalu Serial: ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ದಿನಕ್ಕೊಂದು ಟ್ವಿಸ್ಟ್ ನಲ್ಲಿ ಮೂಡಿ ಬರುತ್ತಿದೆ. ಪುಟ್ಟಕ್ಕನ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಪುಟ್ಟಕ್ಕನ ಮಾತಿಗೆ ಮನೆ ಮಂದಿ ಹಾಗೆಯೇ ಊರಿನ ನೆರೆ ಹೊರೆಯವರು ಆಗಮಿಸಿ ಅದ್ಧೂರಿಯಾಗಿ ಈ ಹಬ್ಬವನ್ನು ಆಚರಣೆ ಮಾಡುತ್ತಾರೆ.
ಇದಕ್ಕೆಲ್ಲ ಕಾರಣ ಕಂಠಿ ಎಂದರೆ ತಪ್ಪಾಗದು. ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಬಂದು ಇಡೀ ಊರಿಗೆ ಪುಟ್ಟಕ್ಕನ ಮನೆಯಲ್ಲಿ ಗಣೇಶ ಹಬ್ಬ ಅದ್ದೂರಿಯಾಗಿ ನಡೆಯುತ್ತಿದೆ ಎಂಬುವುದನ್ನು ಹೇಳಿ ಬಂದಿದ್ದಾರೆ.
ಅಳಿಯಂದಿರನ್ನು ನೋಡಿ ಸಂಭ್ರಮ ಪಟ್ಟ ಪುಟ್ಟಕ್ಕ
ಊರಿನ ಜನರನ್ನು ಕಂಡ ಪುಟ್ಟಕ್ಕ ಬಹಳ ಖುಷಿ ಪಡುತ್ತಾರೆ. ಹಾಗೆಯೇ ಅಳಿಯಂದಿರು ಮಾಡಿದ ಈ ಕೆಲಸಕ್ಕೆ ಬಹಳ ಸಂತಸದಲ್ಲಿದ್ದಾರೆ. ಇನ್ನೂ ಕಂಠಿ ಕಡೆ ನೋಡಿದ ಸ್ನೇಹಾಗೆ ತನ್ನ ಗಂಡ ಬದಲಾಗುತ್ತಾ ಇದ್ದಾರೆ ಎಂಬ ಖುಷಿ ಮೂಡಿದೆ ಎಂದರೆ ತಪ್ಪಾಗದು. ಅಷ್ಟರ ಮಟ್ಟಿಗೆ ಮನೆ ಮಂದಿ ಎಲ್ಲಾ ಖುಷಿಯಾಗಿ ಇರುತ್ತಾರೆ. ಇತ್ತ ಸತ್ಯ ತಿಳಿದುಕೊಂಡ ಬಂಗಾರಮ್ಮ ಮಾತ್ರ ಬಹಳ ಕೋಪದಿಂದ ಇರುತ್ತಾಳೆ.
ಪುಟ್ಟಕ್ಕನ ಮನೆಗೆ ಬಂದ ಬಡ್ಡಿ ಬಂಗಾರಮ್ಮ
ಹೇಗೆ ನನ್ನ ಮೇಲೆ ಇಂತಹ ಆರೋಪ ಬರಲು ಕಾರಣ ಎಂಬುವುದು ನನಗೆ ತಿಳಿಯಿತು ಎಂದೆಲ್ಲ ಹೇಳುತ್ತ ಇರುತ್ತಾಳೆ. ಇನ್ನೂ ತನ್ನ ಗೂಂಡಾಗಳಿಗೆ ಹೇಳಿ ನಂಜಮ್ಮ ಹಾಗೂ ಕಾಳಿಯನ್ನು ಕರೆದುಕೊಂಡು ಬರಲು ಹೇಳಿ ಅವರಿಬ್ಬರನ್ನು ಕರೆದುಕೊಂಡು ಪುಟ್ಟಕ್ಕನ ಮನೆಗೆ ಹೋಗುತ್ತಾಳೆ. ಇನ್ನೇನು ಪೂಜೆ ಶುರು ಆಗಬೇಕು ಆಗ ಬಂಗಾರಮ್ಮ ಪುಟ್ಟಕ್ಕನ ಮನೆಗೆ ಬರುತ್ತಾಳೆ.
ತನ್ನ ಮೇಲೆ ಹಾಕಿರುವ ಆಪಾದನೆ ಸುಳ್ಳು ಎಂದ ಬಂಗಾರಮ್ಮ
ಪುಟ್ಟಕ್ಕನ ಬಳಿಗೆ ಬಂದ ಬಂಗಾರಮ್ಮ ಹೇಳುತ್ತಾರೆ. ಪುಟ್ಟಕ್ಕ ಮೆಸ್ ಸುಟ್ಟು ಹಾಕಿದ್ದು ನಾನು ಎಂದುಕೊಂಡೆ ಅಲ್ವಾ ನೀನು. ಆದರೆ ನಾನು ನಿನ್ನ ಮೆಸ್‌ಗೆ ಬೆಂಕಿ ಹಚ್ಚಿಲ್ಲ ಪುಟ್ಟಕ್ಕ, ಬೆಂಕಿ ಹಚ್ಚಿದವರು ನನ್ನ ಜೊತೆ ಕರೆದುಕೊಂಡು ಬಂದಿದ್ದೇನೆ ಅವರನ್ನು ನೋಡಿದರೆ ನಿನಗೆ ಬಹಳ ಆಘಾತ ಆಗಬಹುದು ಎಂದೆಲ್ಲ ಹೇಳುತ್ತಾಳೆ. ಇದನ್ನು ಕೇಳಿದ ಪುಟ್ಟಕ್ಕಗೆ ಶಾಕ್ ಆಗುತ್ತದೆ. ಯಾರಿರಬಹುದು ಎಂದು ಯೋಚನೆ ಮಾಡಿದಾಗ ಅವರಿಬ್ಬರನ್ನು ಕಾರಿನಿಂದ ಇಳಿಸಿದಾಗ ಪುಟ್ಟಕ್ಕಗೆ ಶಾಕ್ ಕಾದಿರುತ್ತದೆ.
ಮೆಸ್‌ಗೆ ಬೆಂಕಿ ಹಚ್ಚಿದ ನಂಜಮ್ಮ
ಪುಟ್ಟಕ್ಕ ನಿನ್ನ ಮೆಸ್‌ಗೆ ಬೆಂಕಿ ಹಚ್ಚಿ ನನ್ನ ಮೇಲೆ ಅನುಮಾನ ಬರುವಾಗೆ ಮಾಡಿದ್ದು ಬೇರೆ ಯಾರು ಅಲ್ಲ ಪುಟ್ಟಕ್ಕ ಈ ನಂಜಮ್ಮ ಎಂದಾಗ ಪುಟ್ಟಕ್ಕ ಶಾಕ್‌ಗೆ ಒಳಗಾಗುತ್ತಾರೆ. ನಂಜಮ್ಮ ಹೀಗೆಲ್ಲ ಮಾಡಿದ್ದಾಳೆ ಎಂಬುವುದನ್ನು ಪುಟ್ಟಕ್ಕಗೆ ಜೀರ್ಣ ಮಾಡಿಕೊಳ್ಳಲು ಆಗುವುದಿಲ್ಲ.
ಬಂಗಾರಮ್ಮನ ಬಳಿ ಕ್ಷಮೆ ಕೇಳಿದ ಪುಟ್ಟಕ್ಕ
ಪುಟ್ಟಕ್ಕನ ಮೆಸ್ ಸುಟ್ಟು ಹೋದ ದಿನ ನಂಜಮ್ಮ ಆಡಿದ ಆಟಗಳನ್ನು ನಾಟಕಗಳನ್ನು ನೋಡಿ ಶಾಕ್ ಆಗಿರುತ್ತಾಳೆ. ಇದನ್ನು ಕಂಡ ಸ್ನೇಹಾ ಕೂಡ ಒಮ್ಮೆ ದಂಗಾಗುತ್ತಾಳೆ. ಯಾಕೆಂದರೆ ಅಷ್ಟರ ಮಟ್ಟಿಗೆ ನಂಜಮ್ಮ ಪುಟ್ಟಕ್ಕಗೆ ನಂಬಿಕೆ ಮೂಡಿಸಿದ್ದಳು. ಇದನ್ನು ಕಂಡ ಪುಟ್ಟಕ್ಕ ಬಂಗಾರಮ್ಮಗೆ ಕೈ ಮುಗಿದು ಕ್ಷಮಿಸಿ ಬಿಡು ಎಂದು ಕೇಳುತ್ತಾಳೆ.
ಇನ್ನೂ ಕಾಳಿ ಬಳಿ ಈ ಬಗ್ಗೆ ಪ್ರಶ್ನೆ ಮಾಡಿದಾಗ ಪುಟ್ಟಕ್ಕನ ಮಗಳು ಸ್ನೇಹಾ ಮೇಲೆ ಪ್ರೀತಿ ಮೂಡಿತ್ತು ಆಕೆಯನ್ನು ಮದುವೆ ಆಗಬೇಕು ಅಂದುಕೊಂಡು ಇದ್ದೆ ಆದರೆ ಅದು ಸಾಧ್ಯ ಆಗಲಿಲ್ಲ. ಅದಕ್ಕೆ ಕೋಪದಿಂದ ಬೆಂಕಿ ಇಟ್ಟೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪುಟ್ಟಕ್ಕಗೆ ಕೋಪ ಬರುತ್ತದೆ. ಬಂಗಾರಮ್ಮನ ಮೇಲೆ ಅನುಮಾನ ಪಟ್ಟುಬಿಟ್ಟೆ ಎಂದು ಬೇಸರ ಮಾಡಿಕೊಂಡಿದ್ದಾಳೆ.