Puttakkana Makkalu: ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ಇನ್ನೊಂದು ಬಿಗ್ ಟ್ವಿಸ್ಟ್, ಸಂಕಷ್ಟದಲ್ಲಿ ಸಿಲುಕಿಕೊಂಡ ಕಂಠಿ.
ಇನ್ನೊಂದು ಸಂಕಷ್ಟದಲ್ಲಿ ಸಿಲುಕಿಕೊಂಡ ಕಂಠಿ.
Puttakkana Makkalu Serial: ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರವಾಹಿ ಬಹಳ ಅದ್ಭುತವಾಗಿ ಮೂಡಿ ಬರುತ್ತಿದ್ದು ನೋಡುಗರ ಮನ ಸೆಳೆಯುತ್ತಿದೆ. ಕಂಠಿ ಸ್ನೇಹಾಳಿಗೆ ಈಗಾಗಲೇ ಒತ್ತಾಯವಾಗಿ ತಾಳಿ ಕಟ್ಟಿದ್ದು, ಇಷ್ಟ ಇಲ್ಲದೆ ಇದ್ದರು ಸ್ನೇಹ ಕಂಠಿ ಮನೆಯಲ್ಲಿ ಇರುತ್ತಾಳೆ.
ಇದೀಗ ಸ್ನೇಹಾ ಹಾಗೂ ಕಂಠಿ ಮರು ಮದುವೆ ನೋಡಲೇಬೇಕು ಎಂದು ಜನರು ಹಾಗೆಯೇ ಮನೆ ಮಂದಿ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದಕ್ಕೆ ಸ್ನೇಹಾ ಒಪ್ಪಿಗೆ ಕೊಡುತ್ತಾಳ ಎನ್ನುವುದು ಎಲ್ಲರ ಪ್ರಶ್ನೆ ಆಗಿದೆ.
ಅಮ್ಮನ ಸಂತೋಷಕ್ಕಾಗಿ ಕೋಪ ಮರೆತ ಸ್ನೇಹ
ಕಂಠಿ ಸ್ನೇಹ ಮರು ಮದುವೆ ಮಾಡಬೇಕೆಂಬ ವಿಷಯವನ್ನು ಬಂಗಾರಮ್ಮನ ತಾಯಿ ಹೇಳುತ್ತಾರೆ. ಆಗ ಎಲ್ಲಾದರೂ ನಾನು ಮರು ಮದುವೆ ಆಗಲು ಒಪ್ಪಿಕೊಳ್ಳದೆ ಹೋದರೆ ಅಮ್ಮನಿಗೆ ಬಹಳ ಬೇಸರ ಆಗಬಹುದು ಎನ್ನುವ ದೃಷ್ಟಿಯಲ್ಲಿ ಸ್ನೇಹ ಇರುತ್ತಾಳೆ. ಆದರೆ, ಕಂಠಿ ಮಾಡಿರುವ ತಪ್ಪನ್ನು ಒಪ್ಪಿಕೊಳ್ಳಲು ಕೂಡ ಆಗದೆ ಎನು ಮಾಡುವುದು ಎಂದು ಯೋಚನೆ ಮಾಡುತ್ತಾ ಇರುತ್ತಾಳೆ.
ಇನ್ನೂ ಕಂಠಿ ಸ್ನೇಹಾ ಬಳಿ ಮೆತ್ತಗೆ ಕೇಳುತ್ತಾನೆ. ಸ್ನೇಹಾ ಮರು ಮದುವೆಗೆ ನೀವು ಒಪ್ಪಿಗೆ ಕೊಟ್ಟರೆ ಮಾತ್ರ ನಡೆಯುತ್ತದೆ ಎಂದು ಹೇಳಿದಾಗ, ಸ್ನೇಹಾ ಮೆತ್ತಗೆ ಹೇಳುತ್ತಾಳೆ ಮನೆಯವರು ಎನು ಹೇಳುತ್ತಾರೋ ಅದೇ ಪ್ರಕಾರ ನಡೆದುಕೊಳ್ಳಿ.
ಬಹಳ ಸಂಭ್ರಮದಲ್ಲಿ ಪುಟ್ಟಕ್ಕ
ಇನ್ನೂ ಸ್ನೇಹಾ ಬಳಿ ಕಂಠಿ ನೀವು ನನ್ನ ಮನಸಾರೆ ಒಪ್ಪಿಕೊಂಡರೆ ಮಾತ್ರ ನಾನು ತಾಳಿ ಕಟ್ಟುತ್ತೇನೆ. ಎಂದಾಗ ಸ್ನೇಹಾ ಕೊಂಚ ಕೋಪಗೊಂಡು ನಿಮ್ಮನ್ನು ಕ್ಷಮಿಸಲು ಸಾಧ್ಯ ಇಲ್ಲ. ನಾನು ನನ್ನ ಅಮ್ಮನಿಗಾಗಿ ಮದುವೆ ಆಗುತ್ತಾ ಇದ್ದೇನೆ ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಹೇಳಿದಾಗ ಕಂಠಿಗೆ ಬೇಸರ ಆಗುತ್ತದೆ ಪುನಃ ಸ್ನೇಹಾ ಹೇಳುತ್ತಾಳೆ.
ನಾವು ಪ್ರೇಮಿಸುತ್ತ ಇರುವಾಗ ಬಹಳಷ್ಟು ಸುಳ್ಳು ಹೇಳಿದ್ದಿರಿ.
ಆದರೆ ಇನ್ನೂ ಮೇಲೆ ಅಂಥಹ ಸುಳ್ಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದುಕೊಂಡು ಇದ್ದೇನೆ ಎಂದಾಗ ಕಂಠಿ ಹೇಳುತ್ತಾನೆ. ಮೆಸ್ಸು ಖಂಡಿತವಾಗಿಯೂ ನಾನು ಸುಳ್ಳು ಹೇಳುತ್ತ ಇಲ್ಲ, ಮುಂದೆಯೂ ಹೇಳುವುದು ಇಲ್ಲ ದಯಮಾಡಿ ನನ್ನನ್ನು ಅರ್ಥ ಮಾಡಿಕೊಳ್ಳಿ ಎಂದು ಹೇಳುತ್ತಾನೆ. ಅವರಿಬ್ಬರೂ ಎಲ್ಲರ ಮುಂದೆ ಹೋಗುತ್ತಾರೆ. ಪುರೋಹಿತರು ತಾಳಿ ಶಾಸ್ತ್ರ ಮಾಡುತ್ತಾರೆ. ಬಂಗಾರಮ್ಮಗೆ ಸ್ವಲ್ಪವೂ ಇಷ್ಟ ಇರುವುದಿಲ್ಲ. ಆದರೆ ಪುಟ್ಟಕ್ಕ ತುಂಬ ಸಂತೋಷ ಪಡುತ್ತಾಳೆ.
ಬಂಗಾರಮ್ಮಗೆ ಇಷ್ಟ ಇಲ್ಲದ ಮದುವೆ
ಬಂಗಾರಮ್ಮನಿಗೆ ಸ್ನೇಹಾ ಅಂದರೆ ಸ್ವಲ್ಪ ಕೂಡ ಇಷ್ಟ ಇಲ್ಲ. ಇನ್ನೂ ಮಗ ಹಾಗೂ ಸೊಸೆ ಮೇಲೆ ಅಕ್ಷತೆ ಹಾಕುವ ವೇಳೆ ಬಹಳ ಬೇಸರ ಮಾಡಿಕೊಂಡು ಇರುತ್ತಾಳೆ ಬಂಗಾರಮ್ಮ. ಕಂಠಿ ಸ್ನೇಹಾ ತಾಳಿ ಹಾಕಿ ಬಿಡುತ್ತಾನೆ. ಇದನ್ನು ನೋಡಿದ ಪುಟ್ಟಕ್ಕಗೆ ಬಹಳ ಖುಷಿ ಆಗುತ್ತದೆ. ಇನ್ನೂ ಬಂಗಾರಮ್ಮನ ತಾಯಿಗೆ ಮಾತ್ರ ಬಹಳ ಸಂತಸ ವ್ಯಕ್ತವಾಗುತ್ತದೆ. ಮುಂದಿನ ಸಂಚಿಕೆ ಇನ್ನು ಕುತೂಹಲಕಾರಿಯಾಗಿದ್ದು ಏನಾಗುತ್ತದೆ ಎಂದು ಕಾದು ನೋಡಬೇಕಿದೆ.