Puttakkana Makkalu Kanti: ಕುಸ್ತಿ ಕಲಿಯುವ ಸಲುವಾಗಿ ಕಠಿಣ ನಿರ್ಧಾರ ತಗೆದುಕೊಂಡ ಕಂಠಿ, ಸ್ನೇಹಳಿಂದ ದೂರ ಆಗ್ತಾನಾ ಕಂಠಿ…?

ಕಂಠಿ ಜೀವನದಲ್ಲಿ ಈಗ ಬಹಳ ಪ್ರಮುಖವಾದ ನಿಲುವು, ಕುಸ್ತಿ ಪಂದ್ಯ ಗೆಲ್ಲುವುದು ಕಂಠಿಗೆ ಅನಿವಾರ್ಯ ಆಗಿದೆ

Puttakkana Makkalu Sneha And Kanti: ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿಯಲ್ಲಿ ದಿನದಿಂದ ದಿನಕ್ಕೆ ಸಹನಾಳಿಗೆ ಅತ್ತೆಯ ಕಾಟ ಜಾಸ್ತಿ ಆಗಿರುತ್ತದೆ. ಸಹನಾ ತನ್ನ ತಾಯಿ ಪುಟ್ಟಕ್ಕ, ಕೌಸಲ್ಯಳಿಗೆ ಕೊಟ್ಟ ಹಣದಲ್ಲಿ ತನ್ನ ತಂಗಿ ಸುಮಾಳ ಕಾಲೇಜ್ ಫೀಸ್ ಕಟ್ಟಲು ಯಾರಿಗೂ ತಿಳಿಯದಂತೆ ಹಣ ತೆಗೆದು ಅತ್ತೆ ಎದುರು ಸಿಕ್ಕಿಕೊಂಡಿದ್ದಾಳೆ.

ಕೌಶಲ್ಯ ಮನೆಗೆ ಬಂದ ಪುಟ್ಟಕ್ಕನ ಎದುರು ಸಹನಾ ಮೇಲೆ ಕಳ್ಳತನದ ಆರೋಪವನ್ನು ಹಾಕಿದ್ದಾಳೆ. ಅಷ್ಟೇ ಅಲ್ಲದೆ ಸಹನಾಳಿಗೆ ಹಾಗು ಪುಟ್ಟಕ್ಕನಿಗೆ ಅವಮಾನ ಮಾಡುತ್ತಾಳೆ.

puttakkana makkalu sneha and kanti
Image Credit: Zee 5

ಗಂಡನ ಮನೆಯಲ್ಲಿ ಇರಲು ಒಪ್ಪದ ಸಹನಾ

ಕೌಶಲ್ಯ ಪುಟ್ಟಕ್ಕನ ಎದುರೇ ಸಹನಾಳಿಗೆ ಬಾಯಿಗೆ ಬಂದ ಹಾಗೆ ಮಾತನಾಡಿ, ಸಹನಾ ವಿರುದ್ಧವಾಗಿ ಚಾಡಿ ಹೇಳುತ್ತಾಳೆ. ಎಲ್ಲವನ್ನೂ ಕೇಳಿಸಿಕೊಂಡ ಸಹನಾ ನಾನು ಇನ್ನುಮುಂದೆ ಈ ಮನೆಯಲ್ಲಿ ಇರುವುದಿಲ್ಲ ನಾನು ಮುರಳಿ ಹತ್ತಿರ ಮಾತನಾಡುತ್ತೇನೆ ನೆಡಿಯವ್ವ ಅನ್ನುತ್ತಾಳೆ. ಆಗ ಪುಟ್ಟಕ್ಕ ಮಗಳಿಗೆ ಸಮಾಧಾನ ಮಾಡಿ ಬುದ್ದಿ ಹೇಳುತ್ತಾಳೆ. ಅಮ್ಮನ ಮಾತಿಗೆ ಇಲ್ಲ ಅನ್ನಲಾಗದೆ ಸಹನಾ , ಕೌಸಲ್ಯಳ ಮನೆಯಲ್ಲಿ ಇರಲು ಇಷ್ಟ ಇಲ್ಲದೆ ಇದ್ದರು ಏನು ತೋಚದೆ ಸುಮ್ಮನಾಗುತ್ತಾಳೆ.

ಕಂಠಿಗೆ ಕುಸ್ತಿ ಆಡಲೇಬೇಕಾದ ಅನಿವಾರ್ಯ

ಹಬ್ಬದ ವಿಶೇಷವಾಗಿ ಊರಲ್ಲಿ ಕುಸ್ತಿ ಪಂದ್ಯ ಏರ್ಪಡಿಸಿದ್ದು, ಗೆದ್ದವರಿಗೆ 10 ಲಕ್ಷ ರೂಪಾಯಿ ಬಹುಮಾನ ಆಯೋಜಿಸಲಾಗಿತ್ತು. ಹಣದ ಅವಶ್ಯಕೆತೆ ಇದ್ದ ಕಂಠಿಗೆ ಈ ಆಟ ಆಡಲೇ ಬೇಕಿತ್ತು.ಆದ ಕಾರಣ ಉಸ್ತಾದ್ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಾನೆ. ತನ್ನನ್ನು ನಿಮ್ಮ ಶಿಷ್ಯನಾಗಿ ಮಾಡಿಕೊಳ್ಳಿ ನೀವು ಹೇಳಿದ ಹಾಗೆಯೇ ನಾನು ನಡೆದುಕೊಳ್ಳುತ್ತೇನೆ ಎಂದು ಹೇಳುತ್ತಾನೆ.

puttakkana makkalu serial
Image Credit: Original Source

ಉಸ್ತಾದ್‌ಗೆ ಕಂಠಿ ಮೇಲೆ ಅಷ್ಟಾಗಿ ನಂಬಿಕೆ ಬರುವುದಿಲ್ಲ. ಬಳಿಕ ಕಂಠಿಗೆ ಉಸ್ತಾದ್ ಹೇಳುತ್ತಾನೆ ಕುಸ್ತಿ ಪಂದ್ಯದಲ್ಲಿ ಆಟ ಆಡಬೇಕು ಎಂದಾದರೆ ಬ್ರಹ್ಮಚಾರಿ ಪಟ್ಟವನ್ನು ಪಡೆಯಬೇಕು. ಇಲ್ಲವಾದರೆ ಕುಸ್ತಿ ಪಂದ್ಯದಲ್ಲಿ ಆಟವಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಹೆಂಡತಿಯೊಂದಿಗೆ ಒಂದೇ ಕೋಣೆಯಲ್ಲಿ ನೀವು ಒಟ್ಟಿಗೆ ಮಲಗಬಾರದು ಹಾಗೆಯೇ ಬಹಳ ಸಲಿಗೆಯಿಂದ ಕೂಡ ಇರಬಾರದು. ಕುಸ್ತಿ ಮುಗಿಯುವವರೆಗೂ ಹನುಮಂತ ದೇವರ ಸ್ತುತಿಯನ್ನು ಮಾಡಬೇಕು ಎಂದು ಹೇಳಿದಾಗ ಕಂಠಿ ಒಪ್ಪಿಕೊಳ್ಳುತ್ತಾನೆ.

ಸ್ನೇಹಳಿಂದ ದೂರ ಇರಲು ಒಪ್ಪಿದ ಕಂಠಿ

ಒಂದು ಕ್ಷಣವೂ ಸ್ನೇಹ ಳನ್ನು ನೋಡದೆ ಇರಲು ಸಾಧ್ಯವಿಲ್ಲದ ಕಂಠಿ ಕುಸ್ತಿ ಪಂದ್ಯಕ್ಕಾಗಿ ಸ್ನೇಹಳಿಂದ ದೂರ ಇರಲು ಒಪ್ಪಿಗೆ ಸೂಚಿಸುತ್ತಾನೆ ಅದರಂತೆ ಕಂಠಿ ಮುಂಜಾನೆ ನಾಲ್ಕು ಗಂಟೆಗೆ ಏದ್ದು ಕುಸ್ತಿ ಅಭ್ಯಾಸವನ್ನು ಮಾಡಬೇಕಾಗುತ್ತದೆ. ಸದ್ಯಕ್ಕೆ ಈಗ ಕಂಠಿಗೆ ಕುಸ್ತಿ ಪಂದ್ಯ ಗೆಲುವುದೇ ಗುರಿ ಆಗಿದೆ.

Leave A Reply

Your email address will not be published.