Aadhaar Card: 50 ರೂ ಖರ್ಚು ಮಾಡಿ ನಿಮ್ಮ ಆಧಾರ್ ಕಾರ್ಡ್ ರೂಪ ಬದಲಿಸಿಕೊಳ್ಳಿ, ಹಳೆಯ ಆಧಾರ್ ಕಾರ್ಡ್ ಇದ್ದವರಿಗೆ.
ಹಳೆಯ ಆಧಾರ್ ಕಾರ್ಡ್‌ನಿಂದ ಪರಿಹಾರ ಪಡೆಯಿರಿ, 50 ರೂ.ಗೆ ಈ ಕೆಲಸವನ್ನು ತಕ್ಷಣವೇ ಮಾಡಿ.
PVC Aadhaar Card 2023: ಇತೀಚಿನ ವರ್ಷಗಳಲ್ಲಿ ಸರ್ಕಾರ ಆಧಾರ್ ಕಾರ್ಡ್ (aAdhaar Card) ಅನ್ನು ಅತ್ಯಂತ ಮಹತ್ವದ ದಾಖಲೆಯನ್ನಾಗಿ ಮಾಡಿದ್ದು, ಆಧಾರ ಕಾರ್ಡ್ ಇಲ್ಲದೇ ಇದ್ದರೆ ಸರ್ಕಾರೀ ಯೋಜನೆಗಳು,ಬ್ಯಾಂಕ್ ವ್ಯವಹಾರ, ಉದ್ಯೋಗ ಮಾತ್ರವಲ್ಲ ಪಡಿತರವೂ ಸಿಗುವುದಿಲ್ಲ ಅಷ್ಟೇ ಅಲ್ಲದೆ ಆಧಾರ್ ಕಾರ್ಡ್ ಇಲ್ಲದಿದ್ದರೆ ಮಕ್ಕಳೂ ಶಾಲಾ ಪ್ರವೇಶ ಪಡೆಯಲು ಸಾಧ್ಯವಿಲ್ಲ.
ಹಾಗಾಗಿ ಪ್ರತಿ ಕೆಲಸಕ್ಕೂ ಆಧಾರ್ ಕಾರ್ಡ್ ಬಹಳ ಮುಖ್ಯವಾಗಿದೆ. ಆದುದರಿಂದ ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ ಹರಿದರೆ ಚಿಂತಿಸುವ ಅವಶ್ಯಕತೆ ಇಲ್ಲ ಸುಲಭವಾಗಿ ಹೊಸ ಆಧಾರ್ ಕಾರ್ಡ್ ಅನ್ನು ಪಡೆಯಬಹುದು, ಇದು ಯಾವುದೇ ಸಮಸ್ಯೆಗೆ ಕಾರಣವಾಗುವುದಿಲ್ಲ.
PVC ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
ನಿಮ್ಮ ಆಧಾರ್ ಕಾರ್ಡ್ ಹಳೆಯದಾದರೆ ಈಗ ನೀವು PVC ಆಧಾರ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. PVC ಆಧಾರ್ ಕಾರ್ಡ್ ಸುಲಭವಾಗಿ ಪಡೆಯಲು ರೂ 50 ಶುಲ್ಕ ವಿಧಿಸಲಾಗುತ್ತದೆ. ಇದರೊಂದಿಗೆ ನೀವು UIDAI ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಮತ್ತು ರೂ 50 ಶುಲ್ಕವನ್ನು ಪಾವತಿಸುವ ಮೂಲಕ ಆಧಾರ್ ಕಾರ್ಡ್ ಪಡೆಯಬಹುದಾಗಿದೆ.
PVC ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ
PVC ಕಾರ್ಡ್‌ಗಾಗಿ, ಮೊದಲು ನೀವು UIDAI ವೆಬ್‌ಸೈಟ್ UIDAI.GOV.IN ಅನ್ನು ಕ್ಲಿಕ್ ಮಾಡಬೇಕು.ಇದರ ನಂತರ ಆಧಾರ್ ಟ್ಯಾಬ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ, ಹಾಗು ಆರ್ಡರ್ ಆಧಾರ್ ಪಿವಿಸಿ ಕಾರ್ಡ್ ಅಡಿಯಲ್ಲಿ ಆರ್ಡರ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಇದರೊಂದಿಗೆ ನಿಮ್ಮ ಆಧಾರ್ ಸಂಖ್ಯೆ ನಮೂದಿಸಬೇಕಾಗುತ್ತದೆ ನಂತರ ಮುಂದುವರೆಯಿರಿ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಇದರೊಂದಿಗೆ, ನಿಮ್ಮ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀವು ನಮೂದಿಸಬೇಕಾಗುತ್ತದೆ, ನಂತರ ನೀವು ಸಲ್ಲಿಸು ಕ್ಲಿಕ್ ಮಾಡಬೇಕು, ತದನಂತರ ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ , ನೀವು OTP ಅನ್ನು ನಮೂದಿಸಬೇಕು ಮತ್ತು ಪರಿಶೀಲಿಸು ಕ್ಲಿಕ್ ಮಾಡಬೇಕು ಹಾಗು ಇದರೊಂದಿಗೆ ರೂ 50 ಶುಲ್ಕವನ್ನು ಪಾವತಿಸಲು ನಿಮ್ಮನ್ನು ಕೇಳಲಾಗುತ್ತದೆ. ಶುಲ್ಕ ಪಾವತಿ ನಂತರ ನೀವು ದೃಢೀಕರಣವನ್ನು ಸ್ವೀಕರಿಸುತ್ತೀರಿ. 15 ದಿನದೊಳಗೆ ಪಿವಿಸಿ ಆಧಾರ್ ಕಾರ್ಡ್ ನಿಮ್ಮ ಮನೆಗೆ ಬರುತ್ತದೆ.